ಆ್ಯಪ್ನಗರ

ಸುರಕ್ಷತೆಗಾಗಿ ಸ್ಥಳಾಂತರಗೊಳ್ಳಲು ಶಿರಹಟ್ಟಿ ಗ್ರಾಮಸ್ಥರಿಗೆ ಸೂಚನೆ

ಐಗಳಿ: ನೆರೆಯ ಮಹಾರಾಷ್ಟ್ರ ರಾಜ್ಯದಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಕೃಷ್ಣಾ ...

Vijaya Karnataka 4 Aug 2019, 5:00 am
ಐಗಳಿ: ನೆರೆಯ ಮಹಾರಾಷ್ಟ್ರ ರಾಜ್ಯದಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹರಿ ಬಿಡಲಾಗುತ್ತಿರುವುದರಿಂದ ನದಿ ಸುತ್ತಮುತ್ತಲಿನ ಹಾಗೂ ನೀರಿನ ಸಮೀಪವಿರುವ ಜನರು ತಕ್ಷ ಣವೇ ಸುರಕ್ಷಿತ ಸ್ಥಳಗಳಿಗೆ ಹೋಗಬೇಕು ಎಂದು ತೆಲಸಂಗ ಕಂದಾಯ ನಿರೀಕ್ಷ ಕ ಬಿ.ವೈ. ಹೊಸಕೇರಿ ಸೂಚಿಸಿದ್ದಾರೆ.
Vijaya Karnataka Web BEL-3 AIGALI 1


ಸಮೀಪದ ಶಿರಹಟ್ಟಿ ಹಾಗೂ ನದಿಯ ಹತ್ತಿರವಿರುವ ಗ್ರಾಮಗಳಿಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಕೃಷ್ಣಾ ನದಿಯಲ್ಲಿ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಇದರಿಂದ ನದಿಯ ನೀರಿನ ಮಟ್ಟ ವಿಶಾಲವಾದ ಪ್ರದೇಶಗಳಿಗೆ ಸೇರುತ್ತಿದೆ. ಇಲ್ಲಿಯ ಜನರು ಯಾವುದೇ ಆತಂಕ ಪಡುವ ಅವಶ್ಯವಿಲ್ಲ. ಆದರೂ ಮುಂಜಾಗೃತೆಯಾಗಿ ಸುರಕ್ಷಿತ ಸ್ಥಳಕ್ಕೆ ಹೋಗುವುದು ಉತ್ತಮ ಎಂದರು.

ಈ ವೇಳೆ ಅಥಣಿ ತಾಲೂಕು ವೈದ್ಯಾಧಿಕಾರಿ ಬಿ.ಎನ್‌. ಕೊಪ್ಪದ, ಕೊಕಟನೂರ ವೈದ್ಯಾಧಿಕಾರಿ ಧೂಳಶೆಟ್ಟಿ, ಶಿರಹಟ್ಟಿ ಗ್ರಾಮಲೆಕ್ಕಾಧಿಕಾರಿ ಎಸ್‌.ಬಿ.ಮೆಣಸಂಗಿ, ಕೊಡಗಾನೂರ ಗ್ರಾಮಲೆಕ್ಕಾಧಿಕಾರಿ ಎಸ್‌.ಬಿ. ಮೈನಾಪುರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ