ಆ್ಯಪ್ನಗರ

ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ ಗಣೇಶ ಮೂರ್ತಿ ನಿಷೇಧಿಸಲು ಒತ್ತಾಯ

ಬೈಲಹೊಂಗಲ: ಪ್ಲಾಸ್ಟರ್‌ ಆಫ್‌ ಫ್ಯಾರೀಸ್‌ನಿಂದ ತಯಾರಿಸಲಾಗುವ ಗಣೇಶ ಮೂರ್ತಿಗಳನ್ನು ರಾಜ್ಯಾದ್ಯಂತ ನಿಷೇಧಿಸುವಂತೆ ಒತ್ತಾಯಿಸಿ ಬೈಲಹೊಂಗಲ ತಾಲೂಕು ಗಣೇಶ ...

Vijaya Karnataka 8 Jun 2018, 5:00 am
ಬೈಲಹೊಂಗಲ: ಪ್ಲಾಸ್ಟರ್‌ ಆಫ್‌ ಫ್ಯಾರೀಸ್‌ನಿಂದ ತಯಾರಿಸಲಾಗುವ ಗಣೇಶ ಮೂರ್ತಿಗಳನ್ನು ರಾಜ್ಯಾದ್ಯಂತ ನಿಷೇಧಿಸುವಂತೆ ಒತ್ತಾಯಿಸಿ ಬೈಲಹೊಂಗಲ ತಾಲೂಕು ಗಣೇಶ ಮೂರ್ತಿಕಾರರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಎನ್‌. ಜಿಯಾವುಲ್ಲಾ ಅವರಿಗೆ ಮನವಿ ಸಲ್ಲಿಸಲಾಗಿದೆ.
Vijaya Karnataka Web BEL-7HTP11


ಕೇಂದ್ರ ಸರಕಾರ ಪ್ಲಾಸ್ಟರ್‌ ಆಫ್‌ ಫ್ಯಾರೀಸ್‌ ಗಣೇಶ ಮೂರ್ತಿಗಳನ್ನು ತಯಾರಿಸದಂತೆ ಆದೇಶ ಮಾಡಿದ್ದರು. ಜಿಲ್ಲೆಯಾದ್ಯಂತ ಈಗಾಗಲೆ ವಲಸೆ ಬಂದ ಮೂರ್ತಿಕಾರರು ಅಲ್ಲಲ್ಲಿ ಗಣೇಶ ಮೂರ್ತಿಗಳನ್ನು ಮಾಡುತಿದ್ದಾರೆ. ಇದರಿಂದ ತಲತಲಾಂತರದಿಂದ ಮಣ್ಣಿನ ಗಣಪತಿ ಮಾಡುವ ಸಾವಿರಾರು ಬಡ ಕಲಾವಿದರಿಗೆ ಹಾಗೂ ಮೂರ್ತಿಕಾರರಿಗೆ ತುಂಬುಲಾರದ ನಷ್ಟವಾಗಿವಾಗಿದೆ ಎಂದು ಗಣೇಶ ಮೂರ್ತಿಕಾರರ ತಾಲೂಕು ಅಧ್ಯಕ್ಷ ರಾಜು ಬಡಿಗೇರ ಹೇಳಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮೋಹನ ಚವ್ಹಾನ, ಕಾರ್ಯದರ್ಶಿ ವಿನೋದ ಬಡಿಗೇರ, ಮಲ್ಲಿಕಾರ್ಜುನ ಆನಿಗೋಳ, ರಾಜು ಚಿತ್ರಗಾರ, ರಾಮಕೃಷ್ಣ ಬಡಿಗೇರ, ಮಹಾದೇವಪ್ಪ ಪತ್ತಾರ, ಗುರುನಾಥ ಬಡಿಗೇರ, ಶಂಕರ ಕಂಬಾರ, ಮಂಜು ಕಂಬಾರ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ