ಆ್ಯಪ್ನಗರ

ಅತ್ಯಾಚಾರಿಗಳ ನಿಗ್ರಹಕ್ಕೆ ಕಠಿಣ ಕಾನೂನು ಜಾರಿಗೆ ಒತ್ತಾಯ

ಉಗಾರ: ದೇಶ್ಯಾದ್ಯಂತ ಅನೇಕ ರಾಜ್ಯಗಳಲ್ಲಿ ಮಹಿಳೆಯರ ...

Vijaya Karnataka 11 Dec 2019, 5:00 am
ಉಗಾರ: ದೇಶ್ಯಾದ್ಯಂತ ಅನೇಕ ರಾಜ್ಯಗಳಲ್ಲಿಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಅಪ್ರಾಪ್ತ ಬಾಲಿಕೆಯರ ಮೇಲೆ ಲೈಂಗಿಕ ಅತ್ಯಾಚಾರ ಮಾಡಿ, ಹತ್ಯೆ ಮಾಡಲಾಗಿದೆ. ಇದು ಮಾನವ ಕುಲಕ್ಕೆ ದೊಡ್ಡ ಶಾಪವಾಗಿದ್ದು ಅಪರಾಧಿಗಳನ್ನು ಪೊಲೀಸ್‌ ಇಲಾಖೆ ಬಂಧಿಸಿ, ತಕ್ಕ ಶಾಸ್ತಿ ಮಾಡಬೇಕೆಂದು ಉಗಾರ ಮಹಿಳಾ ಒಕ್ಕೂಟದ ಅಧ್ಯಕ್ಷೆ ಸುಷ್ಮಾ ಅಲಸಗೆ ಹೇಳಿದರು.
Vijaya Karnataka Web 10 UGAR 1 NEWS PHOTO_53
ದೇಶಾದ್ಯಂತ ನಡೆಯುತ್ತಿರುವ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ವಿರೋಧಿಸಿ ಉಗಾರ ಬುದ್ರುಕ ಗ್ರಾಮದ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟದಿಂದ ತಹಸೀಲ್ದಾರ್‌ ಮೂಲಕ ಸರಕಾರಕ್ಕೆ ಮನವಿ ಅರ್ಪಿಸಲಾಯಿತು.


ಮಂಗಳವಾರ ಉಗಾರ ಬುದ್ರುಕ ಗ್ರಾಮದಲ್ಲಿಉಗಾರ ಮಹಿಳಾ ಮಂಡಳ ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳ ಮಹಿಳಾ ಒಕ್ಕೂಟದ 108 ಸಂಘಗಳ ಮಹಿಳೆಯರು ಸೇರಿ ಮಹಿಳೆಯರಲ್ಲಿಜಾಗೃತಿ ಮೂಡಿಸುವ ನಿಟ್ಟಿನಲ್ಲಿಆಯೋಜಿಸಿದ್ದ ಪ್ರತಿಭಟನಾ ರಾರ‍ಯಲಿಯಲ್ಲಿಪಾಲ್ಗೊಂಡು ಅವರು ಮಾತನಾಡಿದರು.

ಉಗಾರ ಗ್ರಾಪಂ ಅಧ್ಯಕ್ಷೆ ಶೆಹನಾಜ್‌ ಜಮಖಾನೆ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ಸರಕಾರ ಶೀಘ್ರ ಇಂಥವರ ನಿಗ್ರಹಕ್ಕೆ ಕಠಿಣ ಕಾಯಿದೆ ಜಾರಿಗೊಳಿಸಿ ತಕ್ಕ ಶಿಕ್ಷೆ ನೀಡಬೇಕು. ಮತ್ತು ಮಹಿಳೆಯರಿಗೆ ಸೌರಕ್ಷಣೆ ನೀಡುವ ವ್ಯವಸ್ಥೆಯಾಗಬೇಕು ಎಂದರು.

ಈ ಕುರಿತು ಕಾಗವಾಡ ತಹಸೀಲ್ದಾರ್‌ ಕಚೇರಿಯ ಕಂದಾಯ ನಿರೀಕ್ಷಕ ಎಸ್‌.ಬಿ.ಮುಲ್ಲಾಅವರ ಮೂಲಕ ಸರಕಾರಕ್ಕೆ ಮನವಿ ಅರ್ಪಿಸಲಾಯಿತು.

ಸರಕಾರಿ ಶಾಲೆಯಿಂದ ಗ್ರಾಮದೇವತೆ ಪದ್ಮಾವತಿ ಮಂದಿರವರೆಗೆ ನಡೆಸಲಾದ ಪ್ರತಿಭಟನಾ ರಾರ‍ಯಲಿಯಲ್ಲಿಮಹಿಳಾ ಒಕ್ಕೂಟದ ಸುವರ್ಣಾ ಪಾಟೀಲ, ಲಕ್ಷಿತ್ರ್ಮೕ ಉಪಾಧ್ಯೆ, ಪ್ರೀತಿ ಪಾಟೀಲ, ಭಾರತಿ ಗಂಗೂರ, ಧನಶ್ರೀ ಗಿಡಸಕನ್ನವರ, ಸನ್ಮತಿ ಸದಲಗೆ, ಅನಿತಾ ಸದಲಗೆ ಮತ್ತಿತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ