ಆ್ಯಪ್ನಗರ

ಪಾಲಿಕೆ ಆಯುಕ್ತರಿಂದ ಹೋಟೆಲ್‌ಗಳ ತಪಾಸಣೆ

ಬೆಳಗಾವಿ: ನಗರಾಡಳಿತಕ್ಕೆ ಹೊಸ ಕಾಯಕಲ್ಪ ನೀಡಲು ಮುಂದಾಗಿರುವ ಪಾಲಿಕೆ ನೂತನ ಆಯುಕ್ತ ಅಶೋಕ ದುಡಗುಂಟಿ, ಭಾನುವಾರ ...

Vijaya Karnataka 15 Jul 2019, 5:00 am
ಬೆಳಗಾವಿ : ನಗರಾಡಳಿತಕ್ಕೆ ಹೊಸ ಕಾಯಕಲ್ಪ ನೀಡಲು ಮುಂದಾಗಿರುವ ಪಾಲಿಕೆ ನೂತನ ಆಯುಕ್ತ ಅಶೋಕ ದುಡಗುಂಟಿ, ಭಾನುವಾರ ಹೋಟೆಲ್‌, ಗೂಡಂಗಡಿಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದರು. ಇದೇ ವೇಳೆ ಸ್ವಚ್ಛತೆ ಪಾಲಿಸದ ಹೋಟೆಲ್‌ ಮಾಲೀಕರು ಮತ್ತು ನಿರ್ಲಕ್ಷಿಸಿದ ಸಿಬ್ಬಂದಿಗಳನ್ನು ತರಾಟೆಗೆ ತಗೆದುಕೊಂಡರು.
Vijaya Karnataka Web BLG-1407-2-52-14RAJU-24


ಹೋಟೆಲ್‌ಗಳು ಗ್ರಾಹಕರಿಗೆ ಸ್ವಚ್ಛ, ಶುದ್ಧ ಆಹಾರ ಮತ್ತು ಬಿಸಿನೀರು ಒದಗಿಸಬೇಕು ಎಂದು ತಾಕೀತು ಮಾಡಿದರು. ಜತೆಗೆ ಹೋಟೆಲ್‌, ಗೂಡಂಗಡಿಗಳ ತಪಾಸಣೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಭಾನುವಾರ ಬೆಳಗ್ಗೆ ಕಪಿಲೇಶ್ವರ, ಶಹಾಪುರ, ಜುನೆ ಬೆಳಗಾವಿ ಕಡೆಗೆ ಸಂಚರಿಸಿ ಕಸ ವಿಲೇವಾರಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿ ಮನೆಯಿಂದ ಘನತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿ ಆಗುತ್ತಿರುವ ಕುರಿತು ಖಚಿತಪಡಿಸಿಕೊಳ್ಳಲಾಗುತ್ತಿದೆ. ಸಾರ್ವಜನಿಕರನ್ನು ಭೇಟಿ ಮಾಡಿ ಅಭಿಪ್ರಾಯ ಪಡೆಯಲಾಗುತ್ತಿದೆ. ನಗರದ ಕೆಲವೆಡೆ ಗಟಾರುಗಳು ತುಂಬಿಕೊಂಡಿವೆ. ಖಾಲಿ ಮತ್ತು ಖಾಸಗಿ ನಿವೇಶನಗಳಲ್ಲಿ ಹುಲ್ಲು, ಗಿಡಗಂಟಿಗಳು ಬೆಳೆದು ನಗರ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇದನ್ನು ತಪ್ಪಿಸಲು ಅದನ್ನು ತೆರವುಗೊಳಿಸಲು ಸೂಚಿಸಲಾಗಿದೆ ಎಂದರು.

ದಕ್ಷಿಣ ಭಾಗದ ಎಂಜಿನಿಯರ್‌ ಲಕ್ಷ್ಮೇ ನಿಪ್ಪಾಣಿಕರ್‌, ಪರಿಸರ ಅಭಿಯಂತರ ಉದಯಕುಮಾರ ಬಿ.ಟಿ., ಆರೋಗ್ಯಾಧಿಕಾರಿ ಡಾ. ಶಶಿಧರ ನಾಡಗೌಡ ಮತ್ತು ಇತರರು ಉಪಸ್ಥಿತರಿದ್ದರು.

ಸ್ವಚ್ಛ ಬೆಳಗಾವಿಗೆ ಆದ್ಯತೆ :
ಆಟೊಮೊಬೈಲ್‌, ಮೆಡಿಕಲ್‌, ಮನೆ-ಅಂಗಡಿಗಳ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವ ಬಗ್ಗೆ ಮತ್ತು ಖಾಸಗಿ ವಾಹನಗಳನ್ನು ಪಾಲಿಕೆ ರಸ್ತೆಗಳ ಮೇಲೆ ನಿಲ್ಲಿಸುತ್ತಿರುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಬರುವ ದಿನಗಳಲ್ಲಿ ಪೊಲೀಸ್‌, ಮಾಲಿನ್ಯ ನಿಯಂತ್ರಣ ಮಂಡಳಿ, ಜಲಮಂಡಳಿ, ಅರಣ್ಯ, ಸ್ಮಾರ್ಟ್‌ ಸಿಟಿ, ಹೆಸ್ಕಾಂ ಹಾಗೂ ಇತರೆ ಇಲಾಖೆಗಳ ನೆರವಿನೊಂದಿಗೆ ನಗರ ಸ್ವಚ್ಛ, ಸುಂದರವಾಗಿಸಲು ಶ್ರಮಿಸಲಾಗುವುದು ಎಂದು ಹೇಳಿದರು.

ಕಸ ವಿಲೇವಾರಿ ಆದ ಕೂಡಲೇ ರೋಗ ನಿರೋಧಕ ಪೌಡರ್‌, ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್‌ ಮಾಡಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಸಾರ್ವಜನಿಕ ದೂರುಗಳನ್ನು ಸಹಾನುಭೂತಿಯಿಂದ ಪರಿಶೀಲಿಸಲಾಗುತ್ತದೆ.
-ಅಶೋಕ ದುಡಗುಂಟಿ, ಪಾಲಿಕೆ ಆಯುಕ್ತ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ