ಆ್ಯಪ್ನಗರ

ಡೆಂಗೆ ಅಲ್ಲ, ವೈರಲ್‌ ಜ್ವರ

ಘಟಪ್ರಭಾ: ''ಮಲ್ಲಾಪುರ ಪಿಜಿ...

Vijaya Karnataka 28 Sep 2019, 5:00 am
ಘಟಪ್ರಭಾ: ''ಮಲ್ಲಾಪುರ ಪಿ.ಜಿ. ಹಾಗೂ ಧುಪದಾಳ ಗ್ರಾಮಸ್ಥರಲ್ಲಿಕಾಣಿಸಿಕೊಂಡಿರುವುದು ವೈರಲ್‌ ಜ್ವರ. ಡೆಂಗೆ ಅಲ್ಲ. ಆದರೆ, ಸ್ಥಳೀಯ ವೈದ್ಯರು ಹಾಗೂ ರಕ್ತ ತಪಾಸಣೆ ಕೇಂದ್ರದವರು ಡೆಂಗೆ ಎಂದು ವದಂತಿ ಹಬ್ಬಿಸಿದ್ದಾರೆ'' ಎಂದು ಪ್ರಾಥಮಿಕ ಕೇಂದ್ರ ವೈದ್ಯ ಡಾ. ಪ್ರವೀಣ ಕರಗಾಂವಿ ತಿಳಿಸಿದ್ದಾರೆ.
Vijaya Karnataka Web it is not dengue it is viral fewer
ಡೆಂಗೆ ಅಲ್ಲ, ವೈರಲ್‌ ಜ್ವರ


'ವಿಜಯ ಕರ್ನಾಟಕ'ದಲ್ಲಿಶುಕ್ರವಾರ ಪ್ರಕಟವಾದ 'ಘಟಪ್ರಭಾದಲ್ಲಿಭೀತಿ ಹುಟ್ಟಿಸಿದ ಡೆಂಗೆ ಹಾವಳಿ' ವರದಿ ಕುರಿತು ಪ್ರತಿಕ್ರಿಯಿಸಿದ ಅವರು, ''ಡೆಂಗೆ ಜ್ವರ ಇರುವ ಬಗ್ಗೆ ಸ್ಥಳೀಯ ವೈದ್ಯರಾಗಲಿ, ರಕ್ತ ತಪಾಸಣೆ ಕೇಂದ್ರದವರಾಗಲಿ ದೃಢೀಕರಣ ನೀಡಲು ಸಾಧ್ಯವಿಲ್ಲ. ಬೆಳಗಾವಿಯಲ್ಲಿಅಧಿಕೃತವಾಗಿ ರಕ್ತ ತಪಾಸಣೆ ಮಾಡಿ ವರದಿ ಬಂದ ನಂತರವಷ್ಟೇ ಗೊತ್ತಾಗಲಿದೆ. ಘಟಪ್ರಭಾದ ಇರಾನಿ ಓಣಿ ಮತ್ತು ವಾರ್ಡ್‌ ನಂ.13-14ರ ನಿವಾಸಿಗಳಲ್ಲಿಕಾಣಿಸಿಕೊಂಡಿರುವುದು ವೈರಲ್‌ ಜ್ವರ. ಈ ಕುರಿತು ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ'' ಎಂದರು.

ಔಷಧ ವಿತರಣೆ:
ಡೆಂಗೆ ಜ್ವರದ ಭೀತಿ ಕುರಿತು ವಿಜಯ ಕರ್ನಾಟಕದಲ್ಲಿಸುದ್ದಿ ಪ್ರಕಟವಾದ ಹಿನ್ನೆಲೆಯಲ್ಲಿಆರೋಗ್ಯ ಇಲಾಖೆ ಸಿಬ್ಬಂದಿ ಶುಕ್ರವಾರ ಮಲ್ಲಾಪುರ ಪಿ.ಜಿಯಲ್ಲಿಜನರ ಆರೋಗ್ಯ ತಪಾಸಣೆ ಕೈಗೊಂಡಿದ್ದಾರೆ. ಜ್ವರ ಪೀಡಿತರಿಗೆ ಅಗತ್ಯ ಔಷಧ ನೀಡಿದರು.

ಗೋಕಾಕ ತಾಲೂಕಿನಲ್ಲಿಐದು ಡೆಂಗೆ ಪ್ರಕರಣ ಪತ್ತೆಯಾಗಿದೆ. ಖಾಸಗಿ ರಕ್ತ ತಪಾಸಣೆ ಕೇಂದ್ರದವರಿಗೆ ಡೆಂಗೆ ತಪಾಸಣೆ ಮಾಡುವ ಹಾಗೂ ವರದಿ ನೀಡುವ ಅಧಿಕಾರ ಇಲ್ಲ. ಖಾಸಗಿ ವೈದ್ಯರು ಕೂಡ ಡೆಂಗೆ ಇದೆ ಜನರನ್ನು ಭೀತಿಗೆ ಸಿಲುಕಿಸಬಾರದು.
- ಆರ್‌.ಎಸ್‌.ಬೆಣಚನಮರಡಿ, ತಾಲೂಕು ವೈದ್ಯಾಧಿಕಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ