ಆ್ಯಪ್ನಗರ

ಇಟಗಿ: ಎರಡು ಅಂಗಡಿಗಳಲ್ಲಿ ಕಳ್ಳತನ

ಇಟಗಿ: ಗ್ರಾಮದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಐದಾರು ದಿನಗಳಲ್ಲಿ ಎರಡು ಬಾರಿ ಅಂಗಡಿಗಳ ಕಳ್ಳತನವಾಗಿದೆ...

Vijaya Karnataka 22 Jun 2018, 5:00 am
ಇಟಗಿ: ಗ್ರಾಮದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಐದಾರು ದಿನಗಳಲ್ಲಿ ಎರಡು ಬಾರಿ ಅಂಗಡಿಗಳ ಕಳ್ಳತನವಾಗಿದೆ.
Vijaya Karnataka Web BEL-21 ITAGI 1


ಗುರುವಾರ ಬೆಳಗಿನ ಜಾವ ನಾಲ್ಕು ಅಂಗಡಿಗಳ ಕಳ್ಳತನದಲ್ಲಿ ಎರಡು ಔಷಧ ಅಂಗಡಿಗಳ ಕಳ್ಳತನವಾದರೆ, ಮತ್ತೆ ಎರಡು ಅಂಗಡಿಗಳ ಕಳ್ಳತನ ವಿಫಲವಾಗಿದೆ. ವಿನಾಯಕ ಮೆಡಿಕಲ್ಸ್‌ನಲ್ಲಿ 10 ಸಾವಿರ ಮತ್ತು ಮಲ್ಲಿಕಾರ್ಜುನ ಮೆಡಿಕಲ್ಸ್‌ನಲ್ಲಿ 2 ಸಾವಿರ ನಗದು ಕಳ್ಳತನವಾಗಿದೆ. ಬಾಬಾ ಮೆಡಿಕಲ್ಸ್‌ ಹಾಗೂ ಎಸ್‌.ಬಿ. ಪಾಟೀಲ ಪರ್ಟಿಲೈಸರ್ಸ್‌ ಶೆಟರ್ಸ್‌ ಒಡೆದಿದ್ದಾರೆ.

ಜೂನ್‌ 16ರಂದು ಎಸ್‌.ಬಿ. ಪಾಟೀಲ ಪರ್ಟಿಲೈಸರ್ಸ್‌ ಶೆಟರ್ಸ್‌ ಒಡೆದು ಅಂಗಡಿ ಒಳಗಿನ ಸುಮಾರು ಮೂರು ಸಾವಿರ ರೂಪಾಯಿ ಕಳ್ಳತನ ಮಾಡಲಾಗಿತ್ತು. ಇದರಿಂದ ಗ್ರಾಮಸ್ಥರು ಹಾಗೂ ವ್ಯಾಪಾರಸ್ಥರು ಭಯ ಪಡುವಂತಾಗಿದೆ. ನಂದಗಡ ಪೊಲೀಸರು ಕಳ್ಳತನ ನಡೆದ ಸ್ಥಳಗಳಿಗೆ ಭೇಟಿ ನೀಡಿದ್ದು, ತನಿಖೆ ಆರಂಭಿಸಿದ್ದಾರೆ.

ಅಂಗಡಿಗಳ ಕಳ್ಳತನ ಆಗುತ್ತಿರುವುದಕ್ಕೆ ಗ್ರಾಮಸ್ಥರು ಮತ್ತು ವ್ಯಾಪಾರಸ್ಥರು ಆತಂಕಕ್ಕೊಳಗಾಗಿದ್ದಾರೆ. ತಕ್ಷ ಣ ಪೊಲೀಸ್‌ ಇಲಾಖೆ ಕಳ್ಳರನ್ನು ಬಂಧಿಸಬೇಕು.
-ಅಪ್ಪಣ್ಣ ದೊಡಮನಿ, ಗ್ರಾಪಂ ಅಧ್ಯಕ್ಷ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ