ಆ್ಯಪ್ನಗರ

ಬಂದಿದ್ದು ಚಿರತೆ ಅಲ್ಲ, ಕಾಡು ಬೆಕ್ಕು!

ಬೆಳಗಾವಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಇಲ್ಲಿನ ಹಿಂಡಾಲ್ಕೊ ಕಾಲನಿಯಲ್ಲಿ ರಾತ್ರಿ ವೇಳೆ ...

Vijaya Karnataka 16 Nov 2018, 5:00 am
ಬೆಳಗಾವಿ : ದೀಪಾವಳಿ ಹಬ್ಬದ ಸಂದರ್ಭದಲ್ಲಿ ಇಲ್ಲಿನ ಹಿಂಡಾಲ್ಕೊ ಕಾಲನಿಯಲ್ಲಿ ರಾತ್ರಿ ವೇಳೆ ಕ್ಯಾಮರಾದಲ್ಲಿ ಕಂಡಿದ್ದು ಚಿರತೆ ಅಲ್ಲ ಕಾಡು ಬೆಕ್ಕು ಎನ್ನುವುದು ಅರಣ್ಯ ಇಲಾಖೆ ತನಿಖೆಯಿಂದ ಪತ್ತೆಯಾಗಿದೆ.
Vijaya Karnataka Web its not leopard wild cat
ಬಂದಿದ್ದು ಚಿರತೆ ಅಲ್ಲ, ಕಾಡು ಬೆಕ್ಕು!


''ಪನಗು ಎನ್ನುವ ಚಿರತೆ ಮಾದರಿಯ ಬೆಕ್ಕನ್ನು ಸ್ಥಳೀಯರು ಚಿರತೆ ಎಂದು ಭಾವಿಸಿದ್ದರು. ಅರಣ್ಯ ಇಲಾಖೆ ಪ್ರತ್ಯೇಕ ಕ್ಯಾಮರಾ ಇಟ್ಟು ಪರಿಶೀಲನೆ ನಡೆಸಿದಾಗ ಅದು ಚಿರತೆ ಅಲ್ಲ ಎನ್ನುವುದು ದೃಢಪಟ್ಟಿದೆ. ಹೀಗಾಗಿ ಚಿರತೆ ಹುಡುಕುವ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ'', ಎಂದು ಆರ್‌ಎಫ್‌ಒ ಶ್ರೀಕಾಂತ ಕಡೋಲ್ಕರ್‌ ತಿಳಿಸಿದ್ದಾರೆ.

ಹಿಂಡಾಲ್ಕೊ ಕಾಲನಿಯಲ್ಲಿ ಚಿರತೆ ರೀತಿಯ ಪ್ರಾಣಿಯೊಂದು ಓಡಾಡಿದ ದೃಶ್ಯ ಅಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿತ್ತು. ಅಸ್ಪಷ್ಟವಾಗಿದ್ದ ಆ ಚಿತ್ರವನ್ನು ನೋಡಿ ಅದು ಚಿರತೆ ಎಂದು ಸ್ಥಳೀಯರು ಭಯಗೊಂಡಿದ್ದರು. ನಂತರ ಸುತ್ತಮುತ್ತಲ ಗ್ರಾಮಗಳಲ್ಲೂ ಚಿರತೆ ಕಂಡಿದೆ ಎಂದು ಸುದ್ದಿಯಾಗಿತ್ತು. ಅದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದರು.

''ಅರಣ್ಯ ಇಲಾಖೆ ಸಿಬ್ಬಂದಿಗೆ ಎಲ್ಲಿಯೂ ಚಿರತೆ ಕಂಡು ಬಂದಿದಲ್ಲ. ಬದಲಾಗಿ ಆ ಜಾಗದಲ್ಲಿ ಕಾಡು ಬೆಕ್ಕು ಓಡಾಡಿರುವುದು ಕ್ಯಾಮರಾದಲ್ಲಿ ಪತ್ತೆಯಾಗಿದೆ. ಅದು ಕಪ್ಪು, ಬಿಳುಪು ಬಣ್ಣದಲ್ಲಿ ನೋಡಲು ಚಿರತೆ ರೀತಿಯೇ ಕಾಣುವುದರಿಂದ ಗೊಂದಲ ಸೃಷ್ಟಿಯಾಗಿತ್ತು'', ಎಂದು ಶ್ರೀಕಾಂತ ಕಡೋಲ್ಕರ್‌ ಮಾಹಿತಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ