ಆ್ಯಪ್ನಗರ

ಕರ್ತವ್ಯದಲ್ಲೂ ಕನ್ನಡ ಪ್ರೇಮ

ಕೆಎಸ್‌ಆರ್‌ಟಿಸಿ ಜಮಖಂಡಿ ಡಿಪೊ ಬಸ್‌ವೊಂದರ ಚಾಲಕ, ನಿರ್ವಾಹಕರು ಗುರುವಾರ ರಾಜ್ಯೋತ್ಸವದ ನಿಮಿತ್ತ ತಮ್ಮ ಬಸ್‌ನ್ನು ಹಳದಿ-ಕೆಂಪು ಬಣ್ಣಗಳ ನಾನಾ ಬಗೆಯ ಹೂ, ತಳಿರು ತೋರಣಗಳಿಂದ ...

Vijaya Karnataka 2 Nov 2018, 5:00 am
ಕಾಗವಾಡ: ಕೆಎಸ್‌ಆರ್‌ಟಿಸಿ ಜಮಖಂಡಿ ಡಿಪೊ ಬಸ್‌ವೊಂದರ ಚಾಲಕ, ನಿರ್ವಾಹಕರು ಗುರುವಾರ ರಾಜ್ಯೋತ್ಸವದ ನಿಮಿತ್ತ ತಮ್ಮ ಬಸ್‌ನ್ನು ಹಳದಿ-ಕೆಂಪು ಬಣ್ಣಗಳ ನಾನಾ ಬಗೆಯ ಹೂ, ತಳಿರು ತೋರಣಗಳಿಂದ ಸಿಂಗರಿಸಿ, ಕನ್ನಡ ಬಾವುಟ, ಭುವನೇಶ್ವರಿ ದೇವಿ ಭಾವಚಿತ್ರದೊಂದಿಗೆ ಮಹಾರಾಷ್ಟ್ರದ ಗಡಿಭಾಗ ಸಾಂಗಲಿವರೆಗೆ ಕನ್ನಡದ ಕಂಪು ಸೂಸಿದ್ದಾರೆ.
Vijaya Karnataka Web BEL-01 KAGWAD 4 NEWS PHOTO


ಕರ್ನಾಟಕ ಗಡಿ ಭಾಗ ಕಾಗವಾಡದಿಂದ ಸುಮಾರು 40 ಕಿ.ಮೀ. ಅಂತರದಲ್ಲಿರುವ ಮಹಾರಾಷ್ಟ್ರದ ಸಾಂಗಲಿಯವರೆಗೆ ತಮ್ಮ ಕರ್ತವ್ಯದ ಭಾಗವಾಗಿಯೇ ಕನ್ನಡಾಭಿಮಾನ ಮೆರೆದ ಬಸ್‌ ಚಾಲಕ ರಜನಿಕಾಂತ ಶಂಭುಶಂಕರ ಹಾಗೂ ನಿರ್ವಾಹಕ ಹಡಪದ ಅವರ ಈ ಕನ್ನಡದ ಕೈಂಕರ್ಯಕ್ಕೆ ರಾಜ್ಯದ ಗಡಿ ಸೇರಿದಂತೆ ಮಹಾರಾಷ್ಟ್ರದ ಜನತೆಯೂ ತಲೆದೂಗಿದ್ದಾರೆ.

ಚಾಲಕ ರಜನಿಕಾಂತ ಮೂಲತಃ ಬೀದರ ಜಿಲ್ಲೆಯ ಹುಮನಾಬಾದದವರು. ಜಮಖಂಡಿ ಘಟಕದಲ್ಲಿ ಸೇವೆ ಆರಂಭಿಸಿದ ಕಳೆದ 15 ವರ್ಷಗಳಿಂದ ಬಸ್ಸಿನಲ್ಲಿಯೇ ರಾಜ್ಯೋತ್ಸವ ಆಚರಿಸಿಕೊಂಡು ಬರುತ್ತಿರುವುದು ವಿಶೇಷ. ಕಾಗವಾಡ ಗ್ರಾಮಕ್ಕೆ ಬಸ್‌ ಬಂದಾಗ ಶಾಸಕ ಶ್ರೀಮಂತ ಪಾಟೀಲ ಹಾಗೂ ಅನೇಕ ಕನ್ನಡಾಭಿಮಾನಿಗಳು ಶಾಸಕ ಚಾಲಕ, ನಿರ್ವಾಹಕರನ್ನು ಶಾಲು ಹೊದಿಸಿ ಸತ್ಕರಿಸಿದರು. ಈ ವೇಳೆ ಸಿದಗೌಡ ಪಾಟೀಲ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ