ಆ್ಯಪ್ನಗರ

‘ನಾರಾಯಣ ಗೌಡ ಯಾರು ಗೊತ್ತಿಲ್ವಾ?’; ಸಚಿವ ಸುಧಾಕರ್‌ ಕಾರು ತಡೆದು ಘೇರಾವ್ ಹಾಕಿದ ಕರವೇ ಕಾರ್ಯಕರ್ತರು..!

ಡಿಸಿ ಕಚೇರಿಯಲ್ಲಿ ಪ್ರ್ರಗತಿ ಪರಿಶೀಲನೆ ಸಭೆ ನಡೆಸಿ ಸಚಿವರು ಹೊರಬರುತ್ತಿದ್ದಂತೆಯೇ ಅವರ ಜತೆ ವಾಗ್ವಾದಕ್ಕಿಳಿದ ಕರವೇ ಕಾರ್ಯಕರ್ತರು, ನಾರಾಯಣ ಗೌಡ ಯಾರು ಎಂದು ಪ್ರಶ್ನೆ ಮಾಡುತ್ತೀರಾ? ಎಂದು ತಕರಾರು ಮಾಡಿದರು. ನಾನು ಪಾಲ್ಗೊಂಡಿದ್ದು ಖಾಸಗಿ ಕಾರ್ಯಕ್ರಮ. ನಾರಾಯಣ ಗೌಡ ಎನ್ನುವ ಹೆಸರಿನವರು ಸಾಕಷ್ಟು ಜನರಿದ್ದಾರೆ. ನನ್ನ ರಾಜೀನಾಮೆ ಕೇಳಿದವರು ಯಾರೆಂದು ನಾನು ಹೇಗೆ ತಿಳಿಯಲಿ? ಎಂದು ಸಚಿವ ಸುಧಾಕರ ಉತ್ತರಿಸಿದರು.

Vijaya Karnataka Web 19 Jan 2021, 6:28 am
ಬೆಳಗಾವಿ: ‘ನಾರಾಯಣ ಗೌಡ ಯಾರು ಗೊತ್ತಿಲ್ಲ’ ಎಂದು ಹೇಳಿದ್ದನ್ನು ಖಂಡಿಸಿ ಕರವೇ ಕಾರ್ಯಕರ್ತರು ಸೋಮವಾರ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ ಅವರ ಕಾರು ಅಡ್ಡಗಟ್ಟಿ ಪ್ರತಿಭಟಿಸಿದರು.
Vijaya Karnataka Web dr k sudhakar and karave


ನಿಪ್ಪಾಣಿಯಲ್ಲಿ ಶಶಿಕಲಾ ಜೊಲ್ಲೆ ಅವರ ಶಾಲೆಯ ಕಾರ್ಯಕ್ರಮದಲ್ಲಿ ಸಚಿವ ಡಾ. ಸುಧಾಕರ ಪಾಲ್ಗೊಂಡಿದ್ದರು. ಆ ಕಾರ್ಯಕ್ರಮದಲ್ಲಿ ಮರಾಠಿ ಭಾಷೆಯಲ್ಲಿ ಮಾತನಾಡಲು ಅವಕಾಶ ಕೊಟ್ಟಿದ್ದಾರೆ ಎಂದು ಆರೋಪಿಸಿದ ಕರವೇ ರಾಜ್ಯ ಘಟಕದ ಅಧ್ಯಕ್ಷ ನಾರಾಯಣ ಗೌಡ, ಸಚಿವರ ರಾಜೀನಾಮೆಗೆ ಆಗ್ರಹಿಸಿದ್ದರು. ಈ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಡಾ.ಸುಧಾಕರ್‌, ನಾರಾಯಣ ಗೌಡ ಯಾರು ಗೊತ್ತಿಲ್ಲ ಎಂದಿದ್ದರು. ಇದರಿಂದ ಆಕ್ರೋಶಗೊಂಡ ಕರವೇ ಕಾರ್ಯಕರ್ತರು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಬಳಿ ಸಚಿವ ಸುಧಾಕರ್‌ ಅವರ ಕಾರಿನ ಎದುರು ಕುಳಿತು ಪ್ರತಿಭಟನೆ ಆರಂಭಿಸಿದರು.

ಉದ್ಧವ್‌ ಉದ್ಧಟತನದ ಹೇಳಿಕೆಗೆ ಪ್ರತ್ಯುತ್ತರಕ್ಕೂ ಸಿದ್ಧ ಎಂದ ರಮೇಶ್ ಜಾರಕಿಹೊಳಿ
ಡಿಸಿ ಕಚೇರಿಯಲ್ಲಿ ಪ್ರ್ರಗತಿ ಪರಿಶೀಲನೆ ಸಭೆ ನಡೆಸಿ ಸಚಿವರು ಹೊರಬರುತ್ತಿದ್ದಂತೆಯೇ ಅವರ ಜತೆ ವಾಗ್ವಾದಕ್ಕಿಳಿದ ಕರವೇ ಕಾರ್ಯಕರ್ತರು, ನಾರಾಯಣ ಗೌಡ ಯಾರು ಎಂದು ಪ್ರಶ್ನೆ ಮಾಡುತ್ತೀರಾ? ಎಂದು ತಕರಾರು ಮಾಡಿದರು. ನಾನು ಪಾಲ್ಗೊಂಡಿದ್ದು ಖಾಸಗಿ ಕಾರ್ಯಕ್ರಮ. ನಾರಾಯಣ ಗೌಡ ಎನ್ನುವ ಹೆಸರಿನವರು ಸಾಕಷ್ಟು ಜನರಿದ್ದಾರೆ. ನನ್ನ ರಾಜೀನಾಮೆ ಕೇಳಿದವರು ಯಾರೆಂದು ನಾನು ಹೇಗೆ ತಿಳಿಯಲಿ? ಎಂದು ಸಚಿವ ಸುಧಾಕರ ಉತ್ತರಿಸಿದರು.

ಧ್ವಜ ವಿಚಾರದಲ್ಲಿ ಎಂಇಎಸ್‌ಗೆ ತಕ್ಕ ಉತ್ತರ ಕೊಡ್ತಿದ್ದರೆ ಇಂದು ಉದ್ಧವ್‌ ಇಂತಹ ಹೇಳಿಕೆ ಕೊಡ್ತಿರಲಿಲ್ಲ; ಎಚ್‌ಡಿಕೆ
‘ಈಗಲಾದರೂ ನಾರಾಯಣ ಗೌಡ ಯಾರು ಎಂದು ಹೇಳಿ ಎಂದು ಪ್ರತಿಭಟನಾಕಾರರು ಹಠ ಹಿಡಿದಾಗ ಸಚಿವ ಸುಧಾಕರ ಕಾರು ಹತ್ತಿದರು. ಪ್ರತಿಭಟನಾಕಾರರು ಕಾರು ತಡೆಯಲು ಮುಂದಾದಾಗ ಪೊಲೀಸರು ಅವರನ್ನು ನಿಯಂತ್ರಿಸಲು ಯತ್ನಿಸಿದರು. ಈ ವೇಳೆ ನೂಕು ನುಗ್ಗಲು ನಡೆಯಿತು. ಬಳಿಕ ಪೊಲೀಸ್‌ ಭದ್ರತೆಯಲ್ಲಿ ಸಚಿವರ ಕಾರಿಗೆ ದಾರಿ ಮಾಡಿಕೊಡಲಾಯಿತು. ಪ್ರತಿಭಟನಾಕಾರರು ಕಾರನ್ನು ಹಿಂಬಾಲಿಸದಂತೆ ಪೊಲೀಸರು ಜಿಲ್ಲಾಧಿಕಾರಿ ಕಚೇರಿ ಆವರಣದ ಗೇಟ್‌ ಬಂದ್‌ ಮಾಡಿದರು. ಬಳಿಕ ಕರವೇ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ಪ್ರತಿಭಟನೆ ನಡೆಸಿದರು.

ಕರ್ನಾಟಕ ಸರಕಾರ ಮತ್ತು ಸಚಿವ ಕೆ. ಸುಧಾಕರ ಅವರ ವಿರುದ್ಧ ಘೋಷಣೆ ಕೂಗಿದರು. ಕರವೇ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡುಗನಟ್ಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ