ಆ್ಯಪ್ನಗರ

ಕೆಎಟಿ ಪೀಠ; ವಕೀಲರ ಸಂಘದಿಂದ ಇಂದು ಸಿಎಂ ಭೇಟಿ

ಬೆಳಗಾವಿ: ಬಹು ನಿರೀಕ್ಷೆಯ ಕರ್ನಾಟಕ ಆಡಳಿತ ಮಂಡಳಿ (ಕೆಎಟಿ) ಪೀಠವನ್ನು ಚಳಿಗಾಲ ಅಧಿವೇಶನ ಸಂದರ್ಭದಲ್ಲೇ ...

Vijaya Karnataka 29 Nov 2018, 5:00 am
ಬೆಳಗಾವಿ : ಬಹು ನಿರೀಕ್ಷೆಯ ಕರ್ನಾಟಕ ಆಡಳಿತ ಮಂಡಳಿ (ಕೆಎಟಿ) ಪೀಠವನ್ನು ಚಳಿಗಾಲ ಅಧಿವೇಶನ ಸಂದರ್ಭದಲ್ಲೇ ಉದ್ಘಾಟಿಸುವಂತೆ ಒತ್ತಾಯಿಸಲು ಜಿಲ್ಲಾ ವಕೀಲರ ಸಂಘದ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಬೆಂಗಳೂರಿಗೆ ತೆರಳಿದೆ.
Vijaya Karnataka Web kat bench today lawyers union meeting with cm
ಕೆಎಟಿ ಪೀಠ; ವಕೀಲರ ಸಂಘದಿಂದ ಇಂದು ಸಿಎಂ ಭೇಟಿ


ಬುಧವಾರ ರಾತ್ರಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್‌.ಎಸ್‌.ಕಿವಡಸಣ್ಣವರ ನೇತೃತ್ವದಲ್ಲಿ ಸಂಘದ ಸದಸ್ಯರು ಬೆಂಗಳೂರಿಗೆ ತೆರಳಿದ್ದು, ಗುರುವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದ್ದಾರೆ.

''ಡಿ.10ರಿಂದ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುವುದರಿಂದ ಅದೇ ಅವಧಿಯಲ್ಲಿ ಕೆಎಟಿ ಕಚೇರಿ ಉದ್ಘಾಟನೆಗೊಳ್ಳಬೇಕು. ಈ ಕಾರ‍್ಯಕ್ರಮಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಕೆಎಟಿ ಘೋಷಣೆ ಮಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ'' ಎಂದು ಕಿವಡಸಣ್ಣವರ ತಿಳಿಸಿದ್ದಾರೆ.

''ಡಾ.ಬಿ.ಆರ್‌.ಅಂಬೇಡ್ಕರ್‌ ರಸ್ತೆಯ ಖಾಸಗಿ ಕಟ್ಟಡದಲ್ಲಿ ನಿಮಾರ್ಣಗೊಂಡಿರುವ ಕೆಎಟಿ ಕಚೇರಿ ಕೆಲಸ ಪೂರ್ಣಗೊಂಡಿದೆ. ಕೆಲಸ ಪೂರ್ಣಗೊಂಡಿರುವ ಕುರಿತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳೂ ಕಂಪ್ಲಿಶನ್‌ ಪ್ರಮಾಣಪತ್ರ ನೀಡಿರುವುದರಿಂದ ಶೀಘ್ರದಲ್ಲಿ ಕಚೇರಿ ಕಾರ್ಯಾರಂಭಿಸಬೇಕಿದೆ. ಈಗಾಗಲೆ ರಾಜ್ಯ ಕೆಎಟಿ ಚೇರ್ಮನ್‌ ಕೆ. ಭಕ್ತವತ್ಸಲಂ ನೂತನ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶೀಘ್ರ ಕಚೇರಿ ಕಾರ್ಯಾರಂಭಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ'' ಎಂದು ಎಸ್‌.ಎಸ್‌.ಕಿವಡಸಣ್ಣವರ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ