ಆ್ಯಪ್ನಗರ

ಜಮ್ಮು ಕಾಶ್ಮೀರದಲ್ಲಿ ಖಾನಾಪುರದ ಯೋಧ ಸಾವು

ಜಮ್ಮು ಕಾಶ್ಮೀರದ ಪೂಂಛ್‌ ಪ್ರದೇಶದಲ್ಲಿ ತಾಲೂಕಿನ ನಿಡಗಲ್‌ ಗ್ರಾಮದ ಸೈನಿಕ ವಿಶಾಲ್‌ ಪಾಂಡುರಂಗ ಲೋಹಾರ (35) ಬುಧವಾರ ಅಕಾಲಿಕವಾಗಿ ಸಾವಿಗೀಡಾಗಿದ್ದಾರೆ.

ವಿಕ ಸುದ್ದಿಲೋಕ 5 May 2017, 9:50 am

ಖಾನಾಪುರ: ಜಮ್ಮು ಕಾಶ್ಮೀರದ ಪೂಂಛ್‌ ಪ್ರದೇಶದಲ್ಲಿ ತಾಲೂಕಿನ ನಿಡಗಲ್‌ ಗ್ರಾಮದ ಸೈನಿಕ ವಿಶಾಲ್‌ ಪಾಂಡುರಂಗ ಲೋಹಾರ (35) ಬುಧವಾರ ಅಕಾಲಿಕವಾಗಿ ಸಾವಿಗೀಡಾಗಿದ್ದಾರೆ.

Vijaya Karnataka Web khanapura soldier death
ಜಮ್ಮು ಕಾಶ್ಮೀರದಲ್ಲಿ ಖಾನಾಪುರದ ಯೋಧ ಸಾವು


ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇವರು 10 ವರ್ಷಗಳಿಂದ ಮದ್ರಾಸ್‌ ಇನ್‌ಫೆಂಟ್ರಿ ರೆಜಿಮೆಂಟ್‌ ಮೂಲಕ ಭಾರತೀಯ ಸೈನ್ಯದಲ್ಲಿ ಸೇವೆಯಲ್ಲಿದ್ದರು. ತಂದೆ, ತಾಯಿ, ಪತ್ನಿ ಹಾಗೂ 3 ವರ್ಷದ ಪುತ್ರಿಯನ್ನು ಅಗಲಿದ್ದಾರೆ.

ಮೃತರ ಪಾರ್ಥಿವ ಶರೀರ ವಿಶೇಷ ವಿಮಾನದ ಮೂಲಕ ಶುಕ್ರವಾರ ಗೋವಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಅಲ್ಲಿಂದ ರಸ್ತೆ ಮಾರ್ಗವಾಗಿ ಸ್ವಗ್ರಾಮ ನಿಡಗಲ್‌ ತಲುಪಲಿದೆ. ಸಂಜೆ ಸಾರ್ವಜನಿಕರ ಅಂತಿಮ ದರ್ಶನದ ಬಳಿಕ ಸಕಲ ಸರಕಾರಿ ಗೌರವಗಳೊಂದಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ