ಆ್ಯಪ್ನಗರ

ಗೂಡ್ಸ್‌ ಟ್ರೇನ್‌ ಚಾಲಕನ ಮೂಲಕ ಬೆಳಗಾವಿ ಮಗುವಿಗೆ ಔಷಧ ಪೂರೈಕೆ: ಸಚಿವ ಸುರೇಶ್‌ ಅಂಗಡಿ ಕಾರ್ಯಕ್ಕೆ ಮೆಚ್ಚುಗೆ

ಔಷಧವನ್ನು ಪುಣೆಯಿಂದ ತರಿಸಿಕೊಡುವಂತೆ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು. ಅದರಂತೆ ಔಷಧವನ್ನು ಗೂಡ್ಸ್‌ ಟ್ರೇನ್‌ ಚಾಲಕನ ಮೂಲಕ ಬೆಳಗಾವಿ ತಂದು ಮಗುವಿನ ಪಾಲಕರಿಗೆ ನೀಡಲಾಗಿದೆ.

Vijaya Karnataka Web 23 Apr 2020, 5:19 pm
ಬೆಳಗಾವಿ: ಔಷಧ ಸಿಗದೆ ಸಮಸ್ಯೆಗೆ ಒಳಗಾಗಿದ್ದ ಪಾಲಕರ ಸಮಸ್ಯೆಗೆ ರೈಲ್ವೆ ಇಲಾಖೆ ಅಧಿಕಾರಿಗಳು ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಸ್ಪಂದಿಸಿ ಔಷಧ ತರಿಸಿಕೊಟ್ಟಿದ್ದಾರೆ.
Vijaya Karnataka Web ಸುರೇಶ್‌ ಅಂಗಡಿ
ಸುರೇಶ್‌ ಅಂಗಡಿ


ಪುಣೆಯಲ್ಲಿ ಚಿಕಿತ್ಸೆ ಪಡೆದು ಈಗ ನಗರದಲ್ಲಿರುವ ನಾಲ್ಕು ವರ್ಷದ ಮಗುವಿಗೆ ಔಷಧದ ಸಮಸ್ಯೆ ಎದುರಾಗಿತ್ತು. ಪ್ರತಿಬಾರಿಯೂ ಈ ಔಷಧವನ್ನು ಪುಣೆಯಿಂದಲೇ ತರಿಸಬೇಕಿತ್ತು. ಈಗ ಲಾಕ್‌ಡೌನ್‌ ಇರುವುದರಿಂದ ಖಾಲಿಯಾಗಿದ್ದ ಔಷಧವನ್ನು ತರಿಸಿಕೊಳ್ಳುವುದು ಕಷ್ಟವಾಗಿತ್ತು.

ಮಗುವಿಗೆ ಇದನ್ನು ತುರ್ತಾಗಿ ಕೊಡಲೇಬೇಕಿದ್ದರಿಂದ ಪೋಷಕರು ಕಳವಳಕ್ಕೀಡಾಗಿದ್ದರು. ಹೀಗಾಗಿ ಅವರು ಹುಬ್ಬಳ್ಳಿಯ ರೈಲ್ವೆ ಅಧಿಕಾರಿ ಅನಿಶ್‌ ಹೆಗಡೆ ಅವರನ್ನು ಸಂಪರ್ಕಿಸಿದ್ದರು.

ಈ ಸಂಗತಿ ರೈಲ್ವೆ ಸಚಿವರ ಗಮನಕ್ಕೂ ಬರುತ್ತಿದ್ದಂತೆ, ಅವರು ಔಷಧವನ್ನು ಪುಣೆಯಿಂದ ತರಿಸಿಕೊಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅದರಂತೆ ಔಷಧವನ್ನು ಗೂಡ್ಸ್‌ ಟ್ರೇನ್‌ ಚಾಲಕನ ಮೂಲಕ ಬೆಳಗಾವಿ ತಂದು ಮಗುವಿನ ಪಾಲಕರಿಗೆ ನೀಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ