ಆ್ಯಪ್ನಗರ

ಬಲೂನ್‌ ಉತ್ಸವದಲ್ಲಿ ಚಿಣ್ಣರ ಸಂಭ್ರಮ

ಬೆಳಗಾವಿ: ಹಳೇ ಪಿಬಿ ರಸ್ತೆಯ ಬಿಎಸ್‌...

Vijaya Karnataka 25 Jan 2019, 5:00 am
ಬೆಳಗಾವಿ : ಹಳೇ ಪಿಬಿ ರಸ್ತೆಯ ಬಿ.ಎಸ್‌.ಯಡಿಯೂರಪ್ಪ ಮಾರ್ಗದ ಮಾಲಿನಿ ಸಿಟಿಯ ಮೈದಾನದಲ್ಲಿ 9ನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದ ಮುಂದುವರಿದ ಭಾಗವಾಗಿ ಗುರುವಾರ ಸಂಜೆ ಆಯೋಜಿಸಿದ್ದ ಬಲೂನ್‌ ಉತ್ಸವ ಚಿಣ್ಣರ ಉತ್ಸಾಹವನ್ನು ಇಮ್ಮಡಿಗೊಳಿಸಿತು.
Vijaya Karnataka Web BLG-2401-2-52-24RAJU-4


ಉತ್ಸವ ಉದ್ಘಾಟಿಸಿ ಮಾತನಾಡಿದ ಗಣ್ಯರಾದ ಸ್ವಾತಿ ಮತ್ತು ಶ್ರೀನಿವಾಸ್‌ ದೇಶಪಾಂಡೆ ಬಲೂನ್‌ ಅವರು, ಶಾಸಕ ಅಭಯ್‌ ಪಾಟೀಲ ಅವರು ಮಕ್ಕಳು, ಯುವಕ-ಯುವತಿಯರು, ಗೃಹಣಿಯರಿಗಾಗಿ ವರ್ಷದುದ್ದಕ್ಕೂ ಏರ್ಪಡಿಸುವ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದಿವೆ. ಇಂಥ ಕಾರ‍್ಯಕ್ರಮಗಳು ಜನರಲ್ಲಿ ಕ್ರಿಯಾಶೀಲತೆ ತುಂಬುತ್ತಿವೆ ಎಂದರು.

ವಿಶೇಷ ಆಹ್ವಾನಿತರಾಗಿದ್ದ ವಾಣಿ ಮತ್ತು ಜಯಸಿಂಹ ಬೆಳಗಲ್‌, ಮಮತಾ ಮತ್ತು ವಿಕ್ರಮ ಜೈನ್‌ ಹಾಗೂ ಪೂಜಾ ಮತ್ತು ಸ್ವಪ್ನಿಲ್‌ ಪಾಟನೇಕರ್‌ ಗಾಳಿಪಟ ಉತ್ಸವ ಹಾಗೂ ಅಭಯ ಪಾಟೀಲರ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಉತ್ಸವ ಉದ್ಘಾಟನೆಯಾಗುತ್ತಿದ್ದಂತೆ ಚಿಣ್ಣರೆಲ್ಲ ಸಂಘಟಕರು ನೀಡಿದ ಬಲೂನ್‌ಗಳ ಜತೆಗೆ ಆಟ ಆಡಿದರು. ಆಕಾಶಕ್ಕೆ ತೂರಿ ಬಿಟ್ಟು ಕೇಕೆ ಹಾಕಿ ಹರ್ಷಪಟ್ಟರು. ಇವರೊಂದಿಗೆ ಹಿರಿಯರೂ ಸೇರಿಕೊಂಡು ಮಕ್ಕಳನ್ನು ಉತ್ತೇಜಿಸಿದರು. ತಾವೂ ಮಕ್ಕಳಾಗಿ ಬಲೂನ್‌ ಹಾರಿಸಿದರು. ಸಾವಿರಾರು ಸಂಖ್ಯೆಯ ಮಕ್ಕಳು ಪಾಲ್ಗೊಂಡಿದ್ದರು.

ಬಲೂನ್‌ ಉತ್ಸವದ ನಂತರ ಅಭಯ ಪಾಟೀಲ್‌, ಡ್ರಾಯಿಂಗ್‌ ಸ್ಪರ್ಧೆಯಲ್ಲಿ ವಿಜೇತ ಪ್ರತಿಭಾವಂತರಿಗೆ ಬಹುಮಾನ ವಿತರಿಸಿದರು. ಸೋಲೋ ಡ್ಯಾನ್ಸ್‌ ಮತ್ತು ಹಿಪಾಪ್‌ ಡ್ಯಾನ್ಸ್‌ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಇಂದಿನ ಕಾರ‍್ಯಕ್ರಮಗಳು :
ಜ.25 ರಂದು ಸಂಜೆ 6 ಗಂಟೆಗೆ ಫ್ಯಾಶನ್‌ ಶೋ, ಮಾಕ್‌ ಪ್ರೆಸ್‌, ಗ್ರೂಪ್‌ ಫ್ಯಾಶನ್‌ ಶೋ, 8 ಗಂಟೆಗೆ ಸಿಡಿಮದ್ದುಗಳ ಪ್ರದರ್ಶನ, 8.30ಕ್ಕೆ ಉಮಂಗ್‌ ಮತ್ತು ಚಿಲ್ಡ್ರನ್‌ ಫೆಸ್ಟಿವಲ್‌ನ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಕಾರ‍್ಯಕ್ರಮ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ