ಆ್ಯಪ್ನಗರ

ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಕೆಎಲ್‌ಇ ಕೊಡುಗೆ ಅಪಾರ

ಬೆಳಗಾವಿ: ಇಡೀ ಉತ್ತರ ಕರ್ನಾಟಕದ ಆರೋಗ್ಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ...

Vijaya Karnataka 2 Jul 2019, 5:00 am
ಬೆಳಗಾವಿ: ಇಡೀ ಉತ್ತರ ಕರ್ನಾಟಕದ ಆರೋಗ್ಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಕೆಎಲ್‌ಇ ಸಂಸ್ಥೆ ಕೊಡುಗೆ ಅಪಾರ ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿದರು.
Vijaya Karnataka Web BLG-0107-2-52-1KLE


ಸೋಮವಾರ ಯಳ್ಳೂರಿನ ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್‌ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ವೈದ್ಯರ ದಿನಾಚರಣೆ, ರಕ್ತಭಂಡಾರ, ಔಷಧಾಲಯ, ಹೋಮ್‌ ನರ್ಸಿಂಗ್‌ ಸೇವೆ ಉದ್ಘಾಟಿಸಿ ಅವರು ಮಾತನಾಡಿದರು. ನಗರ ಬೆಳೆದಂತೆ ಜನಸಂಖ್ಯೆಯೂ ಹೆಚ್ಚುತ್ತದೆ. ಜತೆಗೆ ಅಭಿವೃದ್ಧಿ ಮತ್ತು ಆರ್ಥಿಕ ಚಟುವಟಿಕೆಗಳು ಅಧಿಕಗೊಳ್ಳುತ್ತವೆ. ಇವೆಲ್ಲವುಗಳ ಜತೆಗೆ ರೋಗಗಳ ಸಂಖ್ಯೆಯೂ ಹೆಚ್ಚುವುದರಿಂದ ಎಲ್ಲರಲ್ಲೂ ಆರೋಗ್ಯ ಜಾಗೃತಿ ಮೂಡಬೇಕು. ಇಂತಹ ಜಾಗೃತಿ ಮೂಡಿಸುವಲ್ಲಿ ಕೆಎಲ್‌ಇ ಒಂದು ಹೆಜ್ಜೆ ಮುಂದಿದೆ ಎಂದರು.

ಕೆಎಲ್‌ಇ ಸಂಸ್ಥೆ ನಿರ್ದೇಶಕ ಡಾ.ವಿ.ಎಸ್‌. ಸಾಧುನವರ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ನಾಗರಿಕರ ಆರೋಗ್ಯ ರಕ್ಷಣೆಯ ಉದ್ದೇಶದಿಂದ ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್‌ ಆಸ್ಪತ್ರೆ ಆರಂಭಗೊಂಡಿದೆ. ಆಸ್ಪತ್ರೆ ನಿರ್ಮಾಣದ ಉದ್ದೇಶವನ್ನು ಈಡೇರಿಸುವಲ್ಲಿ ವೈದ್ಯರ ಕಾರ್ಯ ಎಂದೂ ಮರೆಯಲಾಗದು ಎಂದರು.

ಚಾರಿಟೆಬಲ್‌ ಆಸ್ಪತ್ರೆ ನಿರ್ದೇಶಕ ಡಾ.ಎಸ್‌.ಸಿ. ಧಾರವಾಡ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್‌ ಆಸ್ಪತ್ರೆಯ ಹಿರಿಯ ಶಸ್ತ್ರ ಚಿಕಿತ್ಸಕ ಡಾ.ಅಶೋಕ ಗೋದಿ ಹಾಗೂ ಮಕ್ಕಳ ತಜ್ಞೆ ಡಾ.ವಿಜಯಲಕ್ಷ್ಮಿ ಕುಲಗೋಡ ಅವರನ್ನು ಸನ್ಮಾನಿಸಲಾಯಿತು.

ಪ್ರಾಚಾರ್ಯ ಡಾ.ಎಂ.ಎ. ಉಡಚನಕರ, ವೈದ್ಯರಾದ ಡಾ.ಅಶೋಕ ಪಾಂಗಿ, ಮಾಜಿ ಮೇಯರ್‌ ವಿಜಯ ಮೋರೆ, ಮಾಜಿ ನಗರ ಸೇವಕರಾದ ಸಂಜಯ ಸವಾಸೇರಿ, ರಮೇಶ ಸೊಂಟಕ್ಕಿ, ದೀಪಕ ಮುಚ್ಚಂಡಿ, ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಗುರುನಾಥ ಶಿಂಧೆ, ಪ್ರಭಾಕರ ಕುಲಕರ್ಣಿ ಇತರರು ಪಾಲ್ಗೊಂಡಿದ್ದರು. ಅರುಣ ನಾಗಣ್ಣವರ ನಿರೂಪಿಸಿದರು. ಡಾ.ಬಿ.ಎಸ್‌. ಮಹಾಂತಶೆಟ್ಟಿ ಸ್ವಾಗತಿಸಿದರು. ಡಾ.ಕಿಶೋರ ಬಂಡಗಾರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ