ಆ್ಯಪ್ನಗರ

ಕೃಷ್ಣಾ ನದಿಯಲ್ಲಿ ಹೆಚ್ಚಿದ ನೀರಿನ ಹರಿವು: ಉಗಾರ ಬ್ಯಾರೇಜ್‌ ಮುಳುಗಡೆ

ಕಾಗವಾಡ: ಬೆಳಗಾವಿ ಜಿಲ್ಲೆಯಲ್ಲಿ ಹೇಳಿಕೊಳ್ಳುವಂಥ ಮಳೆಯಾಗದಿದ್ದರೂ ಮಹಾರಾಷ್ಟ್ರದ ಕೊಂಕಣ ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೃಷ್ಣಾ ನದಿಗೆ ಮಂಗಳವಾರ ...

Vijaya Karnataka 28 Jun 2018, 5:00 am
ಕಾಗವಾಡ: ಬೆಳಗಾವಿ ಜಿಲ್ಲೆಯಲ್ಲಿ ಹೇಳಿಕೊಳ್ಳುವಂಥ ಮಳೆಯಾಗದಿದ್ದರೂ ಮಹಾರಾಷ್ಟ್ರದ ಕೊಂಕಣ ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೃಷ್ಣಾ ನದಿಗೆ ಮಂಗಳವಾರ ರಾತ್ರಿಯಿಂದ 9 ಅಡಿಗಿಂತಲೂ ಹೆಚ್ಚು ನೀರು ಹರಿದುಬರುತ್ತಿದೆ. ಹೀಗಾಗಿ, ಉಗಾರ ಪಟ್ಟಣದ ಹತ್ತಿರ ನಿರ್ಮಿಸಿದ ಬ್ಯಾರೇಜ್‌ ನೀರಿನಲ್ಲಿ ಮುಳುಗಿದ್ದು, ಬ್ಯಾರೇಜ್‌ ಮೇಲೆ 3 ಅಡಿ ನೀರು ಹರಿದು ಹೋಗುತ್ತಿದೆ.
Vijaya Karnataka Web BEL-27 KAGWAD 1 NEWS PHOTO


ಮಂಗಳವಾರ ಸಂಜೆವರೆಗೂ ಉಗಾರ ಬ್ಯಾರೇಜ್‌ ಖಾಲಿ ಇತ್ತು. ಬ್ಯಾರೇಜ್‌ ಕೆಳಗೆ 7 ಅಡಿ ನೀರು ಇತ್ತು. ಬೆಳಗಾಗುವುದರೊಳಗೆ ಬ್ಯಾರೇಜ್‌ ಮೇಲಿಂದ 3 ಅಡಿ ನೀರು ಹರಿದು ಹೋಗುತ್ತಿದ್ದುದನ್ನು ಕಂಡ ರೈತರು ಅಚ್ಚರಿ ವ್ಯಕ್ತಪಡಿಸಿದರು.

ನದಿಗೆ ನೀರು ಬಂದಿದ್ದರಿಂದ ರಾಜಾಪುರ ಬ್ಯಾರೇಜ್‌ನಿಂದ ಹಿಪ್ಪರಗಿ ಅಣೆಕಟ್ಟೆಯವರೆಗೆ ನದಿಯ ಎರಡೂ ದಡದಲ್ಲಿ ರೈತರು ಹೊಲಕ್ಕೆ ನೀರು ಸೆಳೆಯಲು ಅಳವಡಿಸಿರುವ ನೂರಾರು ಪಂಪ್‌ಸೆಟ್‌ಗಳು ಮುಳುಗಿಹೋಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ