ಆ್ಯಪ್ನಗರ

ನೀರು ಹರಿಸದೇ ರಾಜಕೀಯ ದ್ವೇಷ ಸಾಧಿಸಿದ ಕುಮಾರಸ್ವಾಮಿ

ಕಾಗವಾಡ(ಬೆಳಗಾವಿ): ''ಹಿಂದಿನ ಮುಖ್ಯಮಂತ್ರಿ ...

Vijaya Karnataka 29 Nov 2019, 5:00 am
ಕಾಗವಾಡ(ಬೆಳಗಾವಿ): ''ಹಿಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಿರ್ಲಕ್ಷ್ಯದಿಂದಲೇ ಕೃಷ್ಣಾ ನದಿ ತೀರದ ಜನರಿಗೆ ನೀರಿನ ಸಮಸ್ಯೆ ಎದುರಾಗಿತ್ತು. ಸಾವಿರಾರು ಕೋಟಿ ರೂ. ಮೌಲ್ಯದ ಬೆಳೆಗಳು ಒಣಗಿ ಹೋದವು'' ಎಂದು ಕುಡಚಿ ಶಾಸಕ, ಚುನಾವಣೆ ಉಸ್ತುವಾರಿ ಪಿ.ರಾಜೀವ್‌ ಆರೋಪಿಸಿದರು.
Vijaya Karnataka Web kumaraswamy who achieved political hatred without water
ನೀರು ಹರಿಸದೇ ರಾಜಕೀಯ ದ್ವೇಷ ಸಾಧಿಸಿದ ಕುಮಾರಸ್ವಾಮಿ


ಕೆಂಪವಾಡ ಗ್ರಾಮದಲ್ಲಿಆಯೋಜಿಸಿದ್ದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್‌ ಪರ ಪ್ರಚಾರ ಸಭೆಯಲ್ಲಿಮಾತನಾಡಿದ ಅವರು, ''ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಶ್ರೀಮಂತ ಪಾಟೀಲ ಮೇಲಿನ ರಾಜಕೀಯ ದ್ವೇಷದಿಂದ ಯಾವುದೇ ಬೇಡಿಕೆಗಳಿಗೆ ಸ್ಪಂದಿಸಿಲ್ಲ. ಬೇಸಿಗೆಯಲ್ಲಿಕೃಷ್ಣಾ ನದಿಗೆ ನೀರು ಹರಿಸುವಂತೆ ಶ್ರೀಮಂತ ಪಾಟೀಲ್‌ ಹಲವು ಬಾರಿ ಮನವಿ ಮಾಡಿದರೂ ಕ್ರಮ ಕೈಗೊಳ್ಳಲಿಲ್ಲ. ಕುಮಾರಸ್ವಾಮಿ ಒಣ ಪ್ರತಿಷ್ಠೆ ತೋರಿ ಶ್ರೀಮಂತ ಪಾಟೀಲರಿಗೆ ತೊಂದರೆ ಕೊಟ್ಟಿದ್ದಾರೆ'' ಎಂದು ಆರೋಪಿಸಿದರು.

ಜಿಲ್ಲಾಉಸ್ತುವಾರಿ ಸಚಿವ ಜಗದೀಶ್‌ ಶೆಟ್ಟರ್‌, ಸಚಿವರಾದ ಸಿ.ಸಿ.ಪಾಟೀಲ, ವಿಧಾನ ಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ