ಆ್ಯಪ್ನಗರ

ಮತದಾರನ ಕಾತರಕ್ಕೆ ಬಿಕೋ ಎಂದ ಬೆಳಗಾವಿ

ಬೆಳಗಾವಿ: ಲೋಕಸಭೆ ಚುನಾವಣೆಯ ಫಲಿತಾಂಶದ ದಿನವಾದ ಗುರುವಾರ ನಗರದ ಜನತೆಯ ಮನದ ಚಿತ್ತವನ್ನು ಅಕ್ಷರಶಃ ಕಲಕಿತ್ತು...

Vijaya Karnataka 24 May 2019, 5:00 am
ಬೆಳಗಾವಿ : ಲೋಕಸಭೆ ಚುನಾವಣೆಯ ಫಲಿತಾಂಶದ ದಿನವಾದ ಗುರುವಾರ ನಗರದ ಜನತೆಯ ಮನದ ಚಿತ್ತವನ್ನು ಅಕ್ಷ ರಶಃ ಕಲಕಿತ್ತು. ಮತ ಎಣಿಕೆ ಕ್ರಿಕೆಟ್‌ ಕುತೂಹಲ ತಾಳಿದ್ದರಿಂದ ಬಹುತೇಕ ಎಲ್ಲರೂ ಮನೆಯಿಂದ ಹೊರಬರದೇ ಟಿವಿ ಮುಂದೆ ಕುಳಿತುಕೊಂಡಿದ್ದರಿಂದ ಸಂಜೆವರೆಗೂ ಬೆಳಗಾವಿ ಬೀದಿಗಳು ಬಿಕೋ ಎಂದವು.
Vijaya Karnataka Web BLG-2305-2-52-23RAJU-7


ಬೆಳಗಾವಿಯ ಒಟ್ಟು ವಾಣಿಜ್ಯ-ವಹಿವಾಟಿನ ಕೇಂದ್ರ ಬಿಂದುಗಳಾದ ಖಡೇಬಜಾರ ಮತ್ತು ರವಿವಾರಪೇಟೆ ಮಾರುಕಟ್ಟೆಗಳು ಗುರುವಾರ ಭಣಗುಟ್ಟಿದವು. ಜನ, ವಾಹನ ಸಂಚಾರ ತೀರಾ ನೀರಸವಾಗಿತ್ತು. ವೃತ್ತ, ರಸ್ತೆಗಳಲ್ಲಿ ಪೊಲೀಸರು, ಅರೆಸೇನಾ ಪಡೆ ಹಾಗೂ ಪ್ರಾಫಿಕ್‌ ಪೊಲೀಸರು ಕಂಡು ಬಂದರು.

ನಗರ ಬಸ್‌ ನಿಲ್ದಾಣದಲ್ಲೂ ಪ್ರಯಾಣಿಕರ ದಟ್ಟಣೆ ಇರಲಿಲ್ಲ. ಚಾಲಕರು ಪ್ರಯಾಣಿಕರ ಬರುವಿಕೆಗಾಗಿ ಕಾಯಬೇಕಾಯಿತು. ಆಟೋರಿಕ್ಷಾಗಳ ಪರಿಸ್ಥಿತಿಯೂ ಇದೇ ಆಗಿತ್ತು. ಕೇಂದ್ರ ಬಸ್‌ ನಿಲ್ದಾಣದ ಪರಿಸ್ಥಿತಿಯೂ ಇದಕ್ಕೆ ಹೊರತಾಗಿರಲಿಲ್ಲ. ಈ ನಡುವೆಯೂ ಇಂದು ನಿಗದಿತ ಮದುವೆಗಳು ನಡೆದದ್ದು ವಿಶೇಷವಾಗಿತ್ತು. ಜನರೊಳಗಿನ ಎಣಿಕೆಯ ತಳಮಳದ ನಡುವೆಯೂ ಅನೇಕ ಬೀದಿಗಳಲ್ಲಿ ಮದುವೆ ದಿಬ್ಬಣದ ಸಂಭ್ರಮ ಕಂಡು ಬಂದಿತು. ಮತ ಎಣಿಕೆ ಆರಂಭದಿಂದ ಕೊನೆವರೆಗೂ, ಜನರು ಪಕ್ಷ ದ ಪ್ರತಿ ಅಪ್‌ಡೇಟ್‌ಗಳನ್ನು ನೋಡಿ ತಮ್ಮ ತಮ್ಮ ವಿಚಾರಗಳನ್ನು ಮಾತನಾಡಿಕೊಳ್ಳುತ್ತಿದ್ದರು.

ಬಿಜೆಪಿ ಕಾರ್ಯಕರ್ತ, ನಾಯಕರ ವಿಜಯೋತ್ಸವ, ಸಾಮಾನ್ಯ ಸ್ಥಿತಿಯ ಜನಜೀವನ, ಉರಿ ಬಿಸಿಲು ಮತ್ತು ರಾಜಕೀಯ ಪಕ್ಷಗಳ ಕಾರ್ಯಕರ್ತರ ಚಲನವಲನದ ನಡುವೆಯೂ ನಗರ ಶಾಂತವಾಗಿತ್ತು. ಎಲ್ಲೂ ಸಂಘರ್ಷ, ಗಲಾಟೆ ಮತ್ತು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಸೂಕ್ಷ ್ಮ, ಆಯಕಟ್ಟಿನ ಹಾಗೂ ಅಗತ್ಯ ಕಡೆಗಳಲ್ಲೆಲ್ಲ ಬಿಗಿ ಬಂದೋಬಸ್ತ್‌ ಏರ್ಪಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ