ಆ್ಯಪ್ನಗರ

ಕೆರೆ ಸ್ವಚ್ಛಗೊಳಿಸಿದ ‘ಅರಣ್ಯ’ ಸಿಬ್ಬಂದಿ

ಬೆಳಗಾವಿ : ವಿಶ್ವ ಜಲ ದಿನದ ಅಂಗವಾಗಿ ಶುಕ್ರವಾರ ಬೆಳಗಾವಿ ಅರಣ್ಯ ವಿಭಾಗದ ವತಿಯಿಂದ ಆಟೋ ನಗರದ ಕೆರೆ ಸ್ವಚ್ಛಗೊಳಿಸಲಾಯಿತು...

Vijaya Karnataka 23 Mar 2019, 5:00 am
ಬೆಳಗಾವಿ: ವಿಶ್ವ ಜಲ ದಿನದ ಅಂಗವಾಗಿ ಶುಕ್ರವಾರ ಬೆಳಗಾವಿ ಅರಣ್ಯ ವಿಭಾಗದ ವತಿಯಿಂದ ಆಟೋ ನಗರದ ಕೆರೆ ಸ್ವಚ್ಛಗೊಳಿಸಲಾಯಿತು.
Vijaya Karnataka Web BEL-22 LBS 14


ಸ್ವಚ್ಛತೆ ಮತ್ತು ನೀರಿನ ಮಹತ್ವದ ಕುರಿತು ಸಾರ್ವಜನಿಕರಿಗೆ ತಿಳಿವಳಿಕೆ ನೀಡಲು ಈ ಪ್ರಯತ್ನ ಮಾಡಲಾಗಿದೆ ಎಂದು ಎಸಿಎಫ್‌ ಎಸ್‌.ಎಂ. ಸಂಗೊಳ್ಳಿ ತಿಳಿಸಿದರು.

ನೀರು ಎಲ್ಲ ಜೀವಿಗಳಿಗೆ ಅಮೂಲ್ಯ ಧಾತು. ನೀರಿನ ಸ್ವಚ್ಛತೆ ಮತ್ತು ಸದ್ಭಳಕೆ ಇಂದು ಆಗುತ್ತಿಲ್ಲ. ಮಾನವ ಬುದ್ಧಿಜೀವಿಯಾಗಿಯೂ ಜಲ ಆವಾಸಗಳ ಸ್ವಚ್ಚತೆ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ವಿಷಾದಿಸಿದರು.

ಆರ್‌ಎಫ್‌ಓ ಸಂಗಮೇಶ ಪ್ರಭಾಕರ ಮಾತನಾಡಿ, ಜಗತ್ತಿನಲ್ಲಿ ಕುಡಿಯುವ ನೀರು ಶೇ.1 ರಷ್ಟು ಮಾತ್ರ ಇದ್ದು, ಇನ್ನುಳಿದ ನೀರು ಕುಡಿಯಲು ಯೋಗ್ಯವಲ್ಲ. ಸಮುದ್ರದ ಹೊರತಾದ ನದಿ, ಕೆರೆ, ಬಾವಿ ಮತ್ತು ಅಂತರ್ಜಲಗಳ ನೀರಿನ ನ್ಯಾಯಯುತ ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು.

ಅರಣ್ಯ ಅಧಿಕಾರಿ ನಾಗರಾಜ ಬಾಳೆಹೊಸೂರ, ಸಂಗಮೇಶ ಪ್ರಭಾಕರ, ಶ್ರೀನಾಥ ಕಡೋಲಕರ, ನಾಗರಾಜ ಭೀಮಗೋಳ, ಎಂ.ಬಿ. ಕುಸನಾಳ, ಪ್ರಶಾಂತ ಕರಿಗಾರ, ಎಂ.ಜಿ. ಆಂದೊಲೆ, ಎಸ್‌.ಎಂ. ನದಾಫ್‌, ಸಾಗರ ಪಣಗುತ್ತಿ, ಎಂ.ಪಿ. ಪೂಜಾರಿ, ದಿನಕರ ಕಾಂಬಳೆ, ಸಿ.ಎ. ಪುಟಾಣೆ, ಮೊಹಮ್ಮದ್‌ ಕಿಲ್ಲೇದಾರ, ರಾಜಣ್ಣವರ ಸಿ.ಬಿ. ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ