ಆ್ಯಪ್ನಗರ

ಕಲ್ಲುದೇಮವ್ವನ ಗುಡಿಯಲ್ಲಿ ಭೂಕುಸಿತ

ಬೈಲಹೊಂಗಲ: ಪಟ್ಟಣದ ಗೊಂಬಿಗುಡಿ ...

Vijaya Karnataka 14 Aug 2019, 5:00 am
ಬೈಲಹೊಂಗಲ: ಪಟ್ಟಣದ ಗೊಂಬಿಗುಡಿ ಹಿಂದೆ ಇರುವ ಇತಿಹಾಸ ಪ್ರಸಿದ್ಧ ಕಲ್ಲುದೇಮವ್ವನ ಗುಡಿಯಲ್ಲಿ ಇಟ್ಟಿದ್ದ 30ಚೀಲ ಅಕ್ಕಿ ಭೂಕುಸಿತದಿಂದ ಮಾಯವಾಗಿದೆ. ಮಂಗಳವಾರ ಸಂಜೆ ದೇವಿಗೆ ಪೂಜೆ ನೆರವೇರಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
Vijaya Karnataka Web BEL-13HTP9


300 ವರ್ಷಗಳ ಹಳೆಯದಾದ ಈ ಮಂದಿರದಲ್ಲಿ ಪೂರ್ತಿ ಒಂದು ಅಂಕಣ ಜಾಗ ಕಣ್ಣಿಗೆ ಕಾಣದಷ್ಟು ಆಳಕ್ಕೆ ಕುಸಿದಿದೆ. ಈ ಅಂಕಣದ ಮೇಲೆ ಇಟ್ಟಿದ್ದ 30 ಅಕ್ಕಿಚೀಲಗಳು ಭೂಕುಸಿತದಲ್ಲಿ ಪೂರ್ತಿ ಕಾಣೆಯಾಗಿವೆ. ಈ ಜಾಗದಲ್ಲಿ ಹಿಂದಿನ ಕಾಲದಲ್ಲಿ ಧಾನ್ಯಗಳ ಸಂಗ್ರಹಕ್ಕೆ ನಿರ್ಮಿಸಿದ ಹಗೆ ಇರಬಹುದೆಂದು ಶಂಕಿಸಲಾಗಿದೆ. ಮಳೆ ಪ್ರಮಾಣ ಹೆಚ್ಚಾಗಿದ್ದರಿಂದ ಭೂ ಕುಸಿತ ಆಗಿರಬಹುದಾಗಿದೆ. ಹಗೆ ಇದ್ದ ಬಗ್ಗೆ ಯಾರಿಗೂ ಮಾಹಿತಿ ಇಲ್ಲದ್ದರಿಂದ ನಿಜವಾದ ಕಾರಣ ತನಿಖೆಯಿಂದ ತಿಳಿದು ಬರಬೇಕಾಗಿದೆ.

ತಪ್ಪಿದ ಅನಾಹುತ: ಮಕ್ಕಳು, ವೃದ್ಧರು, ದೇವಿ ದರ್ಶನಕ್ಕೆ ಬರುವ ಮಹಿಳೆಯರು ನಿತ್ಯ ಈ ಅಂಕಣದ ಸುತ್ತಮುತ್ತ ಕೂರುವುದು, ನಿಲ್ಲುವುದು ಮಾಡುತ್ತಿದ್ದರು. ಪಕ್ಕದ ವ್ಯಾಪಾರಿ ಕುಟುಂಬಗಳು ಇಲ್ಲಿ ಧಾನ್ಯ ಸಂಗ್ರಹ ಮಾಡಿಡುತ್ತಿದ್ದರು. ಚೀಲಗಳನ್ನು ಜೋಡಿಸುವಾಗ ನೆಲ ಕುಸಿದಿದ್ದರೆ ಜೀವಕ್ಕೆ ಅಪಾಯವಾಗುತ್ತಿತ್ತು. ಸುದ್ದಿ ತಿಳಿದ ಸಾರ್ವಜನಿಕರು ಸಂಜೆ ಮಂದಿರ ಹತ್ತಿರ ಜಮಾಯಿಸಿದ್ದರು. ಆದರೆ, ಇನ್ನೂ ಭೂಮಿ ಕುಸಿಯುವ ಸಾಧ್ಯತೆ ಇರುವುದರಿಂದ ಯಾರನ್ನೂ ಸ್ಥಳಕ್ಕೆ ಹೋಗದಂತೆ ಪೊಲೀಸರು ತಡೆಯೊಡ್ಡಿದ್ದರು.

ತಹಸೀಲ್ದಾರ ಡಾ.ದೊಡ್ಡಪ್ಪ ಹೂಗಾರ ಮಾರ್ಗದರ್ಶನದಲ್ಲಿ ಅಗ್ನಿಶಾಮಕ ದಳ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಸುರಕ್ಷ ತೆ ಕ್ರಮ ಕೈಗೊಂಡಿದ್ದಾರೆ. ಗ್ರಾಮಲೆಕ್ಕಾಧಿಕಾರಿ ಅಭಿಷೇಕ್‌, ಅಗ್ನಿಶಾಮಕದಳ ಮುಖ್ಯ ಫೈರ್‌ಮನ್‌ ದುಂಡಯ್ಯ ಹಿರೇಮಠ, ಸಿಬ್ಬಂದಿ ಚನ್ನಬಸಯ್ಯ ಮಠದ, ಬಸಪ್ಪ ಹೀರನ್ನವರ, ಬ್ರಮೇಶ ತಪರಿ, ಚಂದ್ರಪ್ಪ ಉಳ್ಳಾಗಡ್ಡಿ, ಬಸವರಾಜ ಚಂದರಗಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ