ಆ್ಯಪ್ನಗರ

ಸರಕಾರದಿಂದ ಒಕ್ಕುಂದ ಉತ್ಸವ ಜರುಗಲಿ

ಬೈಲಹೊಂಗಲ: ನಾಡಿನ ಐತಿಹಾಸಿಕ ಹಿನ್ನಲೆಯ ಒಕ್ಕುಂದ ಗ್ರಾಮ ...

Vijaya Karnataka 3 Feb 2020, 5:00 am
ಬೈಲಹೊಂಗಲ: ನಾಡಿನ ಐತಿಹಾಸಿಕ ಹಿನ್ನಲೆಯ ಒಕ್ಕುಂದ ಗ್ರಾಮ ಸಾಂಸ್ಕೃತಿಕ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದು, ಸರಕಾರದಿಂದ ಉತ್ಸವ ಆಚರಣೆ ಮಾಡಲು ಎಲ್ಲರೂ ಸೇರಿ ಪ್ರಯತ್ನಿಸೋಣ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
Vijaya Karnataka Web 2HTP1_53
ಒಕ್ಕುಂದ ಗ್ರಾಮದಲ್ಲಿಆಯೋಜಿಸಿದ್ದ ತಿರುಳ್ಗನ್ನಡ ನಾಡು ಒಕ್ಕುಂದ ಉತ್ಸವವನ್ನು ಗಣ್ಯರು ಉದ್ಘಾಟಿಸಿದರು.


ಸಮೀಪದ ಒಕ್ಕುಂದ ಗ್ರಾಮದಲ್ಲಿತಿರುಳ್ಗನ್ನಡನಾಡು ಒಕ್ಕುಂದ ಉತ್ಸವ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ತಿರುಳ್ಗನ್ನಡನಾಡು ಒಕ್ಕುಂದ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಶಿಲ್ಪ ಕಲೆ, ಸಾಹಿತ್ಯ, ರಾಜಕೀಯ, ಸಾಮಾಜಿಕವಾಗಿ ಹಲವು ವೈಶಿಷ್ಠತೆ ಹೊಂದಿರುವ ಈ ತಿರುಳ್ಗನ್ನಡನಾಡಿನ ಇತಿಹಾಸ, ಪರಂಪರೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ರಾಣಿ ಚನ್ನಮ್ಮ ವಿವಿ ಪ್ರಾಧ್ಯಾಪಕ ಡಾ. ಎಸ್‌.ಒ. ಹಲಸಗಿ ಮಾತನಾಡಿ, ಕನ್ನಡದ ಮೊಟ್ಟ ಮೊದಲ ಆದಿಗ್ರಂಥ ಕವಿರಾಜ ಮಾರ್ಗದಲ್ಲಿಉಲ್ಲೇಖಿಸಿರುವ ನಾಲ್ಕು ತಿರುಳ್ಗನ್ನಡನಾಡುಗಳಲ್ಲಿಒಕ್ಕುಂದವೂ ಒಂದು ಎನ್ನುವುದು ಅತ್ಯಂತ ಹೆಮ್ಮೆಯ ಸಂಗತಿ. ಯುವಕರು ಉತ್ಸವ ಆಯೋಜಿಸುವ ಮೂಲಕ ಇತಿಹಾಸ ಸಂರಕ್ಷಣೆ ಮಾಡುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು.

ಸಲಹಾ ಸಮಿತಿ ಅಧ್ಯಕ್ಷ ಸಿ.ಕೆ. ಮೆಕ್ಕೇದ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗ್ರಾಪಂ ಅಧ್ಯಕ್ಷ ಪರ್ವತಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಧಾರವಾಡ ರಂಗಾಯಣ ಧಾರವಾಡ ರಮೇಶ ಪರವಿನಾಯ್ಕರ, ತಾಪಂ ಸದಸ್ಯ ಬಸನಗೌಡ ಪಾಟೀಲ, ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ, ಡಾ. ರವಿ ಜಕನೂರ, ಡಾ. ಅಶೋಕ ದೊಡವಾಡ, ಡಾ. ಮಂಜುನಾಥ ಮುದಕನಗೌಡರ, ಡಾ. ಶರಣಕುಮಾರ ಅಂಗಡಿ, ಡಾ. ಚಿದಂಬರ ಕುಲಕರ್ಣಿ ಮುಖ್ಯ ಅತಿಥಿಗಳಾಗಿದ್ದರು. ಉತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಸಿ.ಬಿ. ಗಣಾಚಾರಿ, ಎಸ್‌.ಆರ್‌. ಕಮ್ಮಾರ, ರಾಮನಗೌಡ ಪಾಟೀಲ, ಅಶೋಕ ಭದ್ರಶೆಟ್ಟಿ ಇತರರು ಉಪಸ್ಥಿತರಿದ್ದರು.

ಗಂಗಾಧರಗೌಡ ಪಾಟೀಲ ನಿರೂಪಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಬಸನಗೌಡ ಪೊಲೀಸಪಾಟೀಲ ಸ್ವಾಗತಿಸಿದರು. ಸುನೀಲ ಕತ್ತಿ ವಂದಿಸಿದರು.

ಅದ್ಧೂರಿ ನೃಪತುಂಗ ಜ್ಯೋತಿ ಮೆರವಣಿಗೆ:
ಬೆಳಗ್ಗೆ ತ್ರಿಕೂಟೇಶ್ವರ ದೇವಸ್ಥಾನದಿಂದ ನಡೆದ ವಿಜೃಂಭಣೆಯ ನೃಪತುಂಗ ಜ್ಯೋತಿ ಮೆರವಣಿಗೆಯನ್ನು ಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮೀಜಿ ಉದ್ಘಾಟಿಸಿದರು. ಉತ್ಸವದ ಯಶಸ್ಸಿಗಾಗಿ ಸಿದ್ದನಗೌಡ ಪಾಟೀಲ, ಪ್ರಕಾಶಗೌಡ ಪಾಟೀಲ, ಸುನೀಲಗೌಡ ಪಾಟೀಲ, ಸುನೀಲ ಕತ್ತಿ, ಸತೀಶಗೌಡ ಪಾಟೀಲ ಇತರರನೇಕರು ಶ್ರಮಿಸಿದರು.

ತ್ರಿಕೂಟೇಶ್ವರ ಶಿಲಾ ಮಂದಿರದ ಪುನರುಜ್ಜೀವನ ಆಗಬೇಕು. ತೂಗು ಸೇತುವೆ ನಿರ್ಮಿಸಿ ಒಕ್ಕುಂದವನ್ನು ಪ್ರವಾಸಿ ಕೇಂದ್ರವನ್ನಾಗಿಸಬೇಕು.
- ಬಿ.ಬಿ. ಗಣಾಚಾರಿ, ಗಣಾಚಾರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ