ಆ್ಯಪ್ನಗರ

ಪ್ರಚಲಿತ ವಿದ್ಯಮಾನಗಳಿಗೆ ಸಾಹಿತಿಗಳು ಸ್ಪಂದಿಸಲಿ

ಚನ್ನಮ್ಮನ ಕಿತ್ತೂರು: ಪ್ರಚಲಿತ ವಿದ್ಯಮಾನಗಳಿಗೆ ...

Vijaya Karnataka 26 Oct 2019, 5:00 am
ಚನ್ನಮ್ಮನ ಕಿತ್ತೂರು: ಪ್ರಚಲಿತ ವಿದ್ಯಮಾನಗಳಿಗೆ ಕವಿ, ಸಾಹಿತಿಗಳು ಸ್ಪಂದಿಸಬೇಕು. ತಮ್ಮ ಸುತ್ತಲಿನ ಸಮಾಜವನ್ನು ನೆಟ್ಟಗಣ್ಣಿನಿಂದ ನೋಡುತ್ತಿರಬೇಕು ಎಂದು ಬೈಲಹೊಂಗಲ ಕೆಆರ್‌ಸಿಇ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಡಾ.ಸಂಗಮನಾಥ ಲೋಕಾಪುರ ಹೇಳಿದರು.
Vijaya Karnataka Web 25KTR2_53


ಕಿತ್ತೂರು ಉತ್ಸವದ ಮೂರನೇ ದಿನವಾದ ಶುಕ್ರವಾರ ಬೆಳಗ್ಗೆ ಆಯೋಜಿಸಿದ್ದ 'ರೈತರ ತವಕ ತಲ್ಲಣಗಳು ಮತ್ತು ನೆರೆ ಹಾವಳಿ' ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿಅವರು ಉಪನ್ಯಾಸ ನೀಡಿದರು. ಒಳ್ಳೆಯದನ್ನು ಮೆಚ್ಚಿಕೊಳ್ಳುವ ಹಾಗೂ ಕೆಟ್ಟದ್ದನ್ನು ಛೇಡಿಸುವ ಶಕ್ತಿ ಸಾಹಿತಿಗಳಿಗೆ ಇರುತ್ತದೆ. ಹೀಗಾಗಿ ಇವರನ್ನು ಸಾಂಸ್ಕೃತಿಕ ರಾಯಬಾರಿಗಳು ಎಂದು ಕರೆಯುತ್ತಾರೆ. ಅಕ್ಷರಸ್ಥರಷ್ಟೇ ಕವಿಗಳಾಗಬೇಕೆಂದಿಲ್ಲ, ಅನಕ್ಷರಸ್ಥರು ಕೂಡ ಕವಿಗಳಾಗಬಹುದು ಎಂದರು.

ಕುಂದರ ನಾಡಿನ ಕಂದ ಎಂದು ಬಿರುದು ಪಡೆದ ಖ್ಯಾತ ಸಾಹಿತಿ ಬಸವರಾಜ ಕಟ್ಟಿಮನಿಯವರು ವಾಸ್ತವ ಸ್ಥಿತಿಯ ಕೃತಿಗಳನ್ನು ರಚಿಸಿದ್ದಾರೆ. ಜ್ವಾಲಾಮುಖಿ, ಜೋಳದ ಬೆಳೆಯ ನಡುವೆ, ಗಿರಿಜಾಕಂಡ ಸಿನೆಮಾ, ಬೂಟ್‌ಪಾಲಿಸ್‌ ಹೀಗೆ ಅನೇಕ ಅತ್ಯುತ್ತಮ ಕೃತಿಗಳನ್ನು ರಚಿಸಿದ್ದಾರೆ ಎಂದು ಅವರು ಬಣ್ಣಿಸಿದರು.

ಧಾರವಾಡದ ಹಿರಿಯ ಸಾಹಿತಿ ಡಾ.ವಿದ್ಯಾ ಕುಂದರಗಿ ಗೋಷ್ಠಿಯ ಅಧ್ಯಕ್ಷತೆ ವಹಿಸಿ, ಬ್ರಿಟಿಷ್‌ ಕಾಲದಲ್ಲಿಕನ್ನಡವನ್ನು ಬಿರುಸು ಮಾಡಲಾಗಿತ್ತು. ಅಂತಹ ಬಿರುಸು ಕನ್ನಡವನ್ನು ಮೃದು ಕನ್ನಡವಾಗಿ ಮಾಡಿದ್ದು ಕಿತ್ತೂರು ನಾಡು. ಕಿತ್ತೂರು ಗಂಡು ಮೆಟ್ಟಿನ ನಾಡು ಎಂದು ಹೇಳುತ್ತಾರೆ, ಆದರೆ ಇದು ಹೆಣ್ಣು ಮೆಟ್ಟಿನ ನಾಡು ಎಂದರು.

ಕವಿ ಭಾವನಾತ್ಮಕವಾಗಿ ಚಿಂತನೆ ಮಾಡುತ್ತಾನೆ. ಸಿನಿಮಾ, ಕ್ರಿಕೆಟ್‌, ರಾಜಕೀಯ ಕ್ಷೇತ್ರಕ್ಕೆ ಜನರು ಬೆನ್ನು ಬೀಳುತ್ತಾರೆ. ಆದರೆ, ಕಣ್ಣಲ್ಲಿಕಣ್ಣು ಇಟ್ಟು ಅಧ್ಯಯನ ಮಾಡಿ ಒಳ್ಳೆಯ ವಿಚಾರಗಳನ್ನು ಇಂತಹ ಕಾರ್ಯಕ್ರಮ ಮಾಡುವ ಮೂಲಕ ಜನರಿಗೆ ತಿಳಿಸಲು ಬಂದರೆ ಜನರು ಆಗಮಿಸುವುದಿಲ್ಲಎಂದು ಬೇಸರ ವ್ಯಕ್ತ ಪಡಿಸಿದ ಅವರು, 'ಹಗಲು ಮಳೆ ಬಿದ್ದಿದ್ದು, ರಾತ್ರಿ ಮನೆ ಬಿದ್ದಿತ್ತು, ಬೆಳಗೆದ್ದು ನೋಡಿದರೆ ಮಗು ಒಂದು ಕಡೆ ಅಮ್ಮ ಒಂದು ಕಡೆ' ಎಂದು ನೆರೆ ಹಾವಳಿ ಕುರಿತು ಚುಟುಕು ಕಾವ್ಯ ವಾಚಿಸಿದರು.

ಧಾರವಾಡದ ಹಿರಿಯ ಸಾಹಿತಿ ಡಾ.ಲೀಲಾ ಕಲಕೋಟಿ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಸೋಮಶೇಖರ ಹಲಸಗಿ ಸ್ವಾಗತಿಸಿದರು. ವಿವೇಕ ಕುರಗುಂದ ನಿರೂಪಿಸಿದರು. ನಿವೃತ್ತ ಪ್ರಾಚಾರ್ಯ ಎಸ್‌.ಬಿ. ದಳವಾಯಿ ವಂದಿಸಿದರು. ಸುಮಾರ 30 ಕವಿಗಳು ಭಾಗವಹಿಸಿದ್ದರು. ಮಳೆ ಸುರಿಯುತ್ತಿದ್ದರಿಂದ ಕಾರ್ಯಕ್ರಮಕ್ಕೆ ಜನರ ಕೊರತೆ ಕಾಣಿಸುತ್ತಿತ್ತು.

ಕವನ ವಾಚಿಸಿದವರು:
ಶಿವಾ ಕುಲಕರ್ಣಿ, ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ, ಬಸವರಾಜ ಗಾರ್ಗಿ, ಲಲಿತಾ ಕಾಶನ್ನವರ, ಆಶಾ ಯಮಕನಮರಡಿ, ರಾಜಶೇಖರ ಕೋಟಿ, ಸಂಜೀವ ಲದ್ದಿಮಠ, ಮೀನಾಕ್ಷಿ ಸೂಡಿ, ಸೌಜನ್ಯ ಇಟ್ನಾಳ, ಚಂದ್ರಗೌಡ ಪಾಟೀಲ, ವಿಜಯಲಕ್ಷಿತ್ರ್ಮೕ ಉಳ್ಳಾಗಡ್ಡಿ, ರಾಘವೇಂದ್ರ ಪತಂಗಿ, ಸುಮಾ ಕಿತ್ತೂರು, ನಾಗೇಶ ನಾಯಕ, ಭುವನಾ ಹಿರೇಮಠ, ಅರುಣಕುಮಾರ ರಾಜಮಾನೆ, ಶಶಿಕಲಾ ಯಲಿಗಾರ, ಈರಣ್ಣ ಒಕ್ಕೂದ, ಪಾರ್ವತಿ ಪಾಟೀಲ, ಸಿರಿಗೆರೆ ಎರಿಸ್ವಾಮಿ, ಸುನಂದಾ ಎಮ್ಮಿ, ಆನಂದ ಮಾಲಗತ್ತಿಮಠ, ಜಯಶಿಲಾ ಬ್ಯಾಕೂಡ, ಜಯಶ್ರೀ ನಿರಾಕಾರಿ, ಗುರುಸಿದ್ದಯ್ಯ ಹಿರೇಮಠ, ಮಂಜುನಾಥ ಹೆಗಡೆ, ಅರಿಹಂತ ಬಿರಾದರ ಪಾಟೀಲ, ಶಿವಾನಂದ ಮಾವಿನಕೊಪ್ಪ, ಚಂದ್ರಕಾಂತ ಹೈಬತ್ತಿ ಕವನ ವಾಚಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ