ಆ್ಯಪ್ನಗರ

ಎಚ್‌ಡಿಕೆ ಮೊದಲು ತಮ್ಮ ಮನೆ ಸ್ವಚ್ಛ ಮಾಡಲಿ: ಬಿಎಸ್‌ವೈ

'ಎಚ್‌.ಡಿ. ಕುಮಾರಸ್ವಾಮಿ ಮೊದಲು ತಮ್ಮ ಮನೆ ಸ್ವಚ್ಛ ಮಾಡಿಕೊಳ್ಳಲಿ. ಪರಸ್ಪರ ಮುಖ ನೋಡಲೂ ಹಿಂಜರಿಯುತ್ತಿರುವ ಜೆಡಿಎಸ್‌ ನಾಯಕರನ್ನು ಸಂತೈಸಿ ಪಕ್ಷ ಕಟ್ಟುವ ಕೆಲಸ ಮಾಡಲಿ', ಎಂದು ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಲೇವಡಿ ಮಾಡಿದರು.

ವಿಕ ಸುದ್ದಿಲೋಕ 9 May 2017, 10:20 am

ಬೆಳಗಾವಿ: 'ಎಚ್‌.ಡಿ. ಕುಮಾರಸ್ವಾಮಿ ಮೊದಲು ತಮ್ಮ ಮನೆ ಸ್ವಚ್ಛ ಮಾಡಿಕೊಳ್ಳಲಿ. ಪರಸ್ಪರ ಮುಖ ನೋಡಲೂ ಹಿಂಜರಿಯುತ್ತಿರುವ ಜೆಡಿಎಸ್‌ ನಾಯಕರನ್ನು ಸಂತೈಸಿ ಪಕ್ಷ ಕಟ್ಟುವ ಕೆಲಸ ಮಾಡಲಿ', ಎಂದು ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಲೇವಡಿ ಮಾಡಿದರು.

Vijaya Karnataka Web lets clean up their home before hatching bsy
ಎಚ್‌ಡಿಕೆ ಮೊದಲು ತಮ್ಮ ಮನೆ ಸ್ವಚ್ಛ ಮಾಡಲಿ: ಬಿಎಸ್‌ವೈ


ನಾನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ನಿಮಿತ್ತ ಸೋಮವಾರ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಕುಮಾರಸ್ವಾಮಿ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದನ್ನೇ ಕಡಿಮೆ ಮಾಡಿದ್ದೇನೆ,' ಎಂದರು. 'ರಾಜ್ಯದಲ್ಲಿ ಯಾರಿಗೆ ಟಿಕೆಟ್‌ ನೀಡಬೇಕು ಎಂಬುದನ್ನು ಪಕ್ಷದ ಅಧ್ಯಕ್ಷ ಅಮಿತ್‌ ಶಾ ನಿರ್ಧರಿಸುತ್ತಾರೆ. ಎರಡು ಬಾರಿ ಸರ್ವೇ ನಡೆಸಿದ ಬಳಿಕ ಟಿಕೆಟ್‌ ನೀಡುವುದನ್ನು ಅಂತಿಮಗೊಳಿಸಲಾಗುತ್ತದೆ. ಮೇ 18 ರಿಂದ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಒಂದೊಂದು ದಿನ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದೇನೆ', ಎಂದು ತಿಳಿಸಿದರು.

'ರಾಜ್ಯದಲ್ಲಿನ ಭೀಕರ ಬರಕ್ಕೆ ಸರಕಾರ ಸ್ಪಂದಿಸುತ್ತಿಲ್ಲ. ಬರದಲ್ಲಿ ಜನರ ಕಷ್ಟಕ್ಕೆ ಬರದ ಸಿಎಂ ಸಿದ್ದರಾಮಯ್ಯ ಮತ್ತು ಸಚಿವರು ಮೋಜಿನಲ್ಲಿ ತೊಡಗಿಕೊಂಡಿದ್ದಾರೆ' ಎಂದು ಆರೋಪಿಸಿದ ಬಿಎಸ್‌ವೈ, 'ಬಿಜೆಪಿ ಮಿಷನ್‌ 150 ಅಲ್ಲ, 420 ಎಂದಿರುವ ಸಚಿವ ಆಂಜನೇಯ ಅವರ ವರ್ತನೆ ಮೂರ್ಖತನದ ಪರಮಾವಧಿ', ಎಂದರು. ಸಂಸದ ಸುರೇಶ ಅಂಗಡಿ, ಶಾಸಕ ಹಾಗೂ ಪಕ್ಷದ ಜಿಲ್ಲಾಧ್ಯಕ್ಷ ಡಾ. ವಿ.ಐ.ಪಾಟೀಲ, ಶಶಿಕಾಂತ ನಾಯಕ್‌, ಅಭಯ ಪಾಟೀಲ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ