ಆ್ಯಪ್ನಗರ

ಎಂಇಎಸ್‌, ಶಿವಸೇನೆ ನಿಷೇಧಕ್ಕೆ ರಕ್ತದಲ್ಲಿಪತ್ರ

ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಮತ್ತು ಶಿವಸೇನೆ ...

Vijaya Karnataka 4 Feb 2020, 5:00 am
ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಮತ್ತು ಶಿವಸೇನೆ ಸಂಘಟನೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ಸೋಮವಾರ ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷರಿಗೆ ರಕ್ತದಲ್ಲಿಬರೆದ ಮನವಿಪತ್ರ ನೀಡಿದರು.
Vijaya Karnataka Web 3BGM2074536
ಎಂಇಎಸ್‌ ಮತ್ತು ಶಿವಸೇನೆ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ರಕ್ತದಲ್ಲಿಬರೆದ ಪತ್ರದ ಮೂಲಕ ಮನವಿ ಸಲ್ಲಿಸಿದ ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು.


''ಗಡಿ ರಕ್ಷಣೆಗಾಗಿ ಆಯೋಗ ರಚನೆಯಾದ ದಿನದಿಂದಲೂ ಅದರ ಸಾಧನೆ ಶೂನ್ಯವಾಗಿದೆ. ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ದಾಖಲೆ ಸಲ್ಲಿಸುವಲ್ಲೂಆಯೋಗದ ಕೆಲಸ ತೃಪ್ತಿಕರವಾಗಿಲ್ಲ. ಇದರ ನಡುವೆ ಎಂಇಎಸ್‌ ಮತ್ತು ಶಿವಸೇನೆ ಭಾಷಾ ಸೌಹಾರ್ದ ಹಾಳು ಮಾಡುತ್ತಿವೆ'', ಎಂದು ಕಾರ್ಯಕರ್ತರು ದೂರಿದರು.

ಆದರೆ ಮನವಿ ಸ್ವೀಕರಿಸಿ ಭರವಸೆ ನೀಡುವ ಅಧಿಕಾರ ತಮ್ಮ ಕಾರ್ಯವ್ಯಾಪ್ತಿಗೆ ಬರುವುದಿಲ್ಲಎಂದು ಮನವಿ ಸ್ವೀಕರಿಸಲು ಆಯೋಗದ ಅಧ್ಯಕ್ಷ ಕೆ.ಎಲ್‌.ಮಂಜುನಾಥ್‌ ನಿರಾಕರಿಸಿದರು. ಹೀಗಾಗಿ, ಕಾರ್ಯಕರ್ತರು ಪಕ್ಕದಲ್ಲಿದ್ದ ಜಿಲ್ಲಾಧಿಕಾರಿ ಡಾ.ಎಸ್‌.ಬಿ.ಬೊಮ್ಮನಹಳ್ಳಿ ಅವರಿಗೆ ರಕ್ತದಲ್ಲಿಬರೆದ ಪತ್ರದ ಜತೆಗೆ ಲಿಖಿತ ಮನವಿ ಸಲ್ಲಿಸಿದರು. ಸಂಘಟನೆ ಜಿಲ್ಲಾಧ್ಯಕ್ಷ ಬಾಬು ಸಂಗೋಡಿ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ