ಆ್ಯಪ್ನಗರ

ದಾಖಲೆ ಪಡೆಯಲು ಆರ್‌ಟಿಒ ಕಚೇರಿ ಎದುರು ಸಾಲು

ಬೆಳಗಾವಿ: ವಾಹನ ಲೈಸನ್ಸ್‌ ಮತ್ತು ಇತರೆ ದಾಖಲೆಗಳನ್ನು ...

Vijaya Karnataka 31 May 2020, 5:00 am
ಬೆಳಗಾವಿ: ವಾಹನ ಲೈಸನ್ಸ್‌ ಮತ್ತು ಇತರೆ ದಾಖಲೆಗಳನ್ನು ಪಡೆದುಕೊಳ್ಳಲು ಸಂಬಂಧಿತರು ನಗರದ ಆರ್‌ಟಿಒ ಕಚೇರಿಯಲ್ಲಿಶನಿವಾರ ದೊಡ್ಡ ಸಂಖ್ಯೆಯಲ್ಲಿಸೇರಿ ಸರತಿ ಸಾಲಿನಲ್ಲಿನಿಂತುಕೊಂಡಿದ್ದರು.
Vijaya Karnataka Web 30RAJU-4075614
ಆರ್‌ಟಿಒ ಕಚೇರಿಯಲ್ಲಿಶನಿವಾರ ನಿರ್ಮಾಣವಾಗಿದ್ದ ಸರತಿ ಸಾಲು.


ಲಾಕ್‌ಡೌನ್‌ ಪ್ರಯುಕ್ತ ಕಳೆದ ಎರಡು ತಿಂಗಳಿಂದ ಕಾರ್ಯ ಸ್ಥಗಿತ ಮಾಡಿದ್ದ ಆರ್‌ಟಿಒ ಕಚೇರಿ ಈಗ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಈ ಹಿಂದೆಯೇ ಅರ್ಜಿ ಕೊಟ್ಟವರು, ಈಗ ಕೊಡಲು ಬಂದವರು ಒಟ್ಟಿಗೆ ಸೇರಿದ್ದರಿಂದ ದಟ್ಟಣೆ ನಿರ್ಮಾಣವಾಗಿತ್ತು. ಸರಕಾರ ನೀಡುವ ಕೊರೊನಾ ಸಹಾಯಧನ ಪಡೆದುಕೊಳ್ಳಲು ಆಟೋ ಚಾಲಕರು ತಮ್ಮ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇವರೆಲ್ಲರಿಗೂ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್‌ ಧರಿಸಿ ಸ್ಯಾನಿಟೈಜರ್‌ ಬಳಸಲು ಸೂಚಿಸಲಾಗಿದೆ ಎಂದು ಆರ್‌ಟಿಒ ಶಿವಾನಂದ ಮಗದುಮ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ