ಆ್ಯಪ್ನಗರ

ಬೆಳಗಾವಿಯಲ್ಲಿ ರಾಸುಗಳ ತಳಿ ಉನ್ನತೀಕರಣ ಯೋಜನೆಗೆ ಚಾಲನೆ!

ಪಟ್ಟಣದ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಆವರಣದಲ್ಲಿರಾಷ್ಟ್ರೀಯ ಗೋಕುಲ್‌ ಮಿಷನ್‌ ಕೃತಕ ಗರ್ಭಧಾರಣೆ ಮೂಲಕ ರಾಸುಗಳ ತಳಿ ಉನ್ನತೀಕರಣ ಯೋಜನೆಗೆ ಶಾಸಕ ಮಹಾಂತೇಶ ಕೌಜಲಗಿ ಶನಿವಾರ ಚಾಲನೆ ನೀಡಿದರು.

Vijaya Karnataka Web 3 Aug 2020, 7:00 pm
ಬೈಲಹೊಂಗಲ: ಪಟ್ಟಣದ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಆವರಣದಲ್ಲಿರಾಷ್ಟ್ರೀಯ ಗೋಕುಲ್‌ ಮಿಷನ್‌ ಕೃತಕ ಗರ್ಭಧಾರಣೆ ಮೂಲಕ ರಾಸುಗಳ ತಳಿ ಉನ್ನತೀಕರಣ ಯೋಜನೆಗೆ ಶಾಸಕ ಮಹಾಂತೇಶ ಕೌಜಲಗಿ ಶನಿವಾರ ಚಾಲನೆ ನೀಡಿದರು.
Vijaya Karnataka Web Livestock


ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ. ಐ.ಎಸ್‌. ಕೋಲ್ಹಾರ ಮಾತನಾಡಿ, ತಾಲೂಕಿನಲ್ಲಿಆಯ್ಕೆಯಾದ 60 ಹಳ್ಳಿಗಳ ರೈತರ ಮನೆ ಬಾಗಿಲಿಗೆ ತೆರಳಿ ಆ. 31ರವರೆಗೆ ರಾಸುಗಳಿಗೆ ಕೃತಕ ಗರ್ಭಧಾರಣೆ ಸೌಲಭ್ಯ ಕಲ್ಪಿಸಲಾಗುವುದು. ಈಗಾಗಲೇ 1ನೇ ಹಂತದ ಯೋಜನೆ ಯಶಸ್ಸಿಯಾಗಿದೆ ಎಂದರು.

ಗ್ರಾಮೀಣ ಆರ್ಥಿಕತೆಯ ಸುಧಾರಣೆಯಲ್ಲಿ ಪಶುಸಂಗೋಪನೆ ಪ್ರಮುಖ ಪಾತ್ರ ವಹಿಸುತ್ತದೆ. ಇತ್ತೀಚಿನ ತಂತ್ರಜ್ಞಾನಗಳನ್ನು ಬಳಸಿಕೊಂಡು ಜಾನುವಾರುಗಳ ತಳಿ ಅಭಿವೃದ್ಧಿಯಲ್ಲಿ ವ್ಯಾಪಕ ಸಂಶೋಧನೆ ನಡೆಸಲಾಗುತ್ತಿದೆ. ಸುಧಾರಿತ ತಳಿಗಳಿಂದ ರೈತರು ಪಶುಸಂಗೋಪನೆಯತ್ತ ಗಮನಹರಿಸುವಂತೆ ಆಗಿದೆ.

ಬಿ. ಎಸ್‌. ಯಡಿಯೂರಪ್ಪ ಶೀಘ್ರವೇ ಗುಣವಾಗಲಿ: ಡಿಕೆಶಿ ಸೇರಿ ಹಲವು ಮುಖಂಡರ ಹಾರೈಕೆ!

ಮುಖ್ಯ ಪಶು ವೈದ್ಯಾಧಿಕಾರಿ ಡಾ. ಮಹೇಶ ಮೇಟಿ, ಜಾನುವಾರ ಅಭಿವೃದ್ಧಿ ಅಧಿಕಾರಿ ಆರ್‌.ಬಿ. ಪಾಟೀಲ, ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಬಿ.ಎನ್‌. ಮಡಿವಾಳರ, ಎನ್‌.ಎನ್‌. ಜಾಧವ, ವಿದ್ಯಾಶ್ರೀ ಬಡವಣ್ಣಿ, ಮೀನಾಕ್ಷಿ ಮೇಲಸರ್ಜಿ, ಬಸವರಾಜ ಗಣಾಚಾರಿ, ಮಲ್ಲಿಕಾರ್ಜುನ ಕೊಡ್ಲಿವಾಡ, ಮಲ್ಲಪ್ಪ ಗೊರವನಕೊಳ್ಳ, ವೈದ್ಯಕೀಯ ಸಹಾಯಕರು, ಅನುಚರರು ಉಪಸ್ಥಿತರಿದ್ದರು.

ಯಾದಗಿರಿಯ ಜೆಡಿಎಸ್ ಶಾಸಕ 'ನಾಗನಗೌಡ ಕಂದಕೂರ' ಗೆ ಕೊರೊನಾ ಪಾಸಿಟಿವ್!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ