ಆ್ಯಪ್ನಗರ

ದ್ರಾಕ್ಷಿ ಬೆಳೆಗಾರರ ಹೆಗಲೇರಿದ ಸಮಸ್ಯೆಗಳ ಮೂಟೆ; ಎಲೆ ಉದುರುವ ರೋಗ ಜತೆಗೆ ಅಕಾಲಿಕ ಮಳೆ ಕಾಟ

ತೆಲಸಂಗ (ಬೆಳಗಾವಿ): ಲಾಕ್‌ ಡೌನ್‌ ಸಂದರ್ಭದಲ್ಲಿಸೂಕ್ತ ಬೆಲೆ ...

Vijaya Karnataka 20 Oct 2020, 5:00 am
ತೆಲಸಂಗ (ಬೆಳಗಾವಿ): ಲಾಕ್‌ ಡೌನ್‌ ಸಂದರ್ಭದಲ್ಲಿಸೂಕ್ತ ಬೆಲೆ ಸಿಗದೆ ಕಂಗಾಲಾಗಿದ್ದ ದ್ರಾಕ್ಷಿ ಬೆಳೆಗಾರರಿಗೆ ಪ್ರಸಕ್ತ ವರ್ಷದಲ್ಲಾದರೂ ಹಣ್ಣು ಚೆನ್ನಾಗಿ ಬೆಳೆದು ಕಳೆದ ವರ್ಷದ ನಷ್ಟ ಭರಿಸಿಕೊಡಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಪ್ರತಿಕೂಲ ಹವಾಮಾನದ ಜತೆಗೆ ನಾನಾ ಸಮಸ್ಯೆಗಳ ಮೂಟೆಯೇ ಬೆಳೆಗಾರರನ್ನು ಬೆಂಬಿಡದಂತೆ ಕಾಡತೊಡಗಿವೆ.
Vijaya Karnataka Web 19TELSANG1A_53
ದ್ರಾಕ್ಷಿ ಬಳ್ಳಿಯಲ್ಲಿ ಸಂಪೂರ್ಣ ಉದುರಿರುವ ಎಲೆ.


ಕೊರೊನಾ ಲಾಕ್‌ಡೌನ್‌ನಲ್ಲಿಹಣ್ಣುಗಳಿಗೆ ಸೂಕ್ತ ಬೆಲೆ ಸಿಗಲಿಲ್ಲ. ಇದರ ಮಧ್ಯೆ, ಮಳೆಗಾಲ ಆರಂಭವಾಗುತ್ತಿದ್ದಂತೆ ಹೂವು ಬಿಡುವ ಮುಂಚೆಯೇ ಎಲೆ ಉದುರುವಿಕೆ ರೋಗಕ್ಕೆ ತುತ್ತಾಗಿ ಶೇ.60ರಷ್ಟು ಬೆಳೆ ನಾಶವಾಯಿತು. ಆ ಆಘಾತದಿಂದ ಸಾವರಿಸಿಕೊಳ್ಳುವ ಮೊದಲೇ ವಾರದಿಂದ ಸುರಿಯುತ್ತಿರುವ ಮಳೆಗೆ ದ್ರಾಕ್ಷಿ ಬೆಳೆ ಸರ್ವನಾಶವಾಗಿದ್ದು ರೈತರ ಬದುಕಿಗೇ ಕೊಳ್ಳಿ ಇಟ್ಟಂತಾಗಿದೆ.

ಪ್ರಸಕ್ತ ವರ್ಷ ಅಥಣಿ ತಾಲೂಕಿನ ತೆಲಸಂಗ ಹೋಬಳಿಯಲ್ಲೇ ಶೇ. 90ರಷ್ಟು ದ್ರಾಕ್ಷಿ ಬೆಳೆ ನಾಶವಾಗಿದೆ. ಎರಡು ವರ್ಷಗಳಿಂದ ಲಕ್ಷಾಂತರ ರೂ. ಹಣ ಸುರಿದು ಸಾಲಗಾರರಾಗಿರುವ ರೈತನಿಗೆ ಸರಕಾರ ಕೈ ಹಿಡಿಯದಿದ್ದರೆ ಹೊಲ, ಮನೆ ಮಾರಿಕೊಂಡು ಊರು ಬಿಡುವ ಪರಿಸ್ಥಿತಿ ಬಿಟ್ಟರೆ ಅನ್ಯ ಮಾರ್ಗಗಳಿಲ್ಲ.

ಕಳೆದ ವರ್ಷ ಬಾಧಿಸಿದ್ದ ಎಲೆ ಉದುರುವಿಕೆ ರೋಗ ಈಗಲೂ ಮುಂದುವರಿದಿದೆ. ಸೆಪ್ಟೆಂಬರ್‌ ಮಾಸಾಂತ್ಯ ಮತ್ತು ಅಕ್ಟೋಬರ್‌ ಎರಡನೇ ವಾರದ ವರೆಗೆ ನಡೆಯುವ ದ್ರಾಕ್ಷಿ ಬೆಳೆ ಚಾಟ್ನಿ ಸಮಯದಲ್ಲಿಹಳೆಯ ರೋಗ ಮತ್ತೆ ವಕ್ಕರಿಸಿದೆ. ಈ ಬೆಳೆ ರಕ್ಷಣೆಗೆ ಸತತ ಔಷಧ ಸಿಂಪಡಿಸಬೇಕಿದೆ. ಆದರೆ ಸೂರ್ಯನ ದರ್ಶನಕ್ಕೂ ಅವಕಾಶ ನೀಡದ ಮಳೆಯಿಂದಾಗಿ ಸಿಂಪಡಿಸಿದ ಔಷಧ ಹೊಳೆಯಲ್ಲಿಹುಣಸೆ ಹಣ್ಣು ತೊಳೆದಂತಾಗುತ್ತಿದೆ.

ಉ.ಕ.ದಲ್ಲೇ ಸಿಂಹಪಾಲು

ರಾಜ್ಯದಲ್ಲಿ31000 ಹೆಕ್ಟೇರ್‌ ಪ್ರದೇಶದಲ್ಲಿದ್ರಾಕ್ಷಿ ಬೆಳೆಯಲಾಗುತ್ತಿದ್ದು, ಅದರಲ್ಲಿಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಯಲ್ಲಿಯೇ ಶೇ.80ರಷ್ಟು ಬೆಳೆ ಬೆಳೆಯಲಾಗುತ್ತದೆ. ಅಥಣಿ ತಾಲೂಕಿನ ತೆಲಸಂಗ ಹೋಬಳಿಯಲ್ಲೇ 4500 ಹೆಕ್ಟರ್‌ ದ್ರಾಕ್ಷಿ ಬೆಳೆಯಲಾಗುತ್ತಿದೆ.

ಕಳೆದ ವರ್ಷ ಅಷ್ಟಿಷ್ಟು ಬೆಳೆ ಬಂದಿದ್ದರೂ ಲಾಕ್‌ಡೌನ್‌ ಪರಿಣಾಮ ಮಾರಾಟವಾಗಲಿಲ್ಲ. ಅಲ್ಪಸ್ವಲ್ಪ ಇದ್ದ ಒಣ ದ್ರಾಕ್ಷಿ ಇನ್ನೂ ಮಾರಾಟವಾಗದೆ ವರ್ಷದಿಂದ ಕೋಲ್ಡ್‌ ಸ್ಟೋರೇಜ್‌ನಲ್ಲಿದೆ. ಸ್ಟೋರೇಜ್‌ ಬಾಡಿಗೆಯೂ ಹೊರೆ. ಈ ವರ್ಷ ಎಲೆ ಉದುರಿ ಕಡ್ಡಿಯೇ ಹಣ್ಣಾಗಲಿಲ್ಲ. ಮಳೆ, ತಂಪಾದ ವಾತಾವರಣಕ್ಕೆ ಇಡೀ ದ್ರಾಕ್ಷಿ ಬೆಳೆ ಬಾರದ ಸ್ಥಿತಿ ಇದೆ. ಸರಕಾರ ಮತ್ತು ವಿಮೆ ಕಂಪನಿಗಳು ಕೈ ಹಿಡಿಯಬೇಕಷ್ಟೆ.
-ರಾಮು ಬಳ್ಳೊಳ್ಳಿ, ದ್ರಾಕ್ಷಿ ಬೆಳೆಗಾರ, ತೆಲಸಂಗ.

ಪ್ರಸಕ್ತ ವರ್ಷ ಎಲೆ ಉದುರುವ ರೋಗ ಕಾಣಿಸಿಕೊಂಡಿದ್ದು, ವಿಶ್ವವಿದ್ಯಾಲಯದ ತಂಡ ಬಂದು ಅಧ್ಯಯನ ನಡೆಸಿದೆ. ಎಲೆ ಉದುರುವಿಕೆಯಿಂದಾದ ಹಾನಿಗೆ ಸಂಬಂಧಿಸಿದಂತೆ ಸರ್ವೆ ಮಾಡಿ ಅರ್ಧದಷ್ಟು ಗ್ರಾಮಗಳ ಆನ್‌ಲೈನ್‌ ಎಂಟ್ರಿ ಕೆಲಸ ಮುಗಿಸಲಾಗಿದೆ.
-ಅಕ್ಷಯ್‌ಕುಮಾರ್‌ ಉಪಾಧ್ಯಾಯ, ತೋಟಗಾರಿಕೆ ಇಲಾಖೆ ಅಧಿಕಾರಿ, ತೆಲಸಂಗ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ