ಆ್ಯಪ್ನಗರ

ವಿದ್ಯಾರ್ಥಿಗಳಿಗೆ ಉದ್ಯಮ ವಲಯದಲ್ಲಿ ವಿಪುಲ ಅವಕಾಶ

ವಿಕ ಸುದ್ದಿಲೋಕ ಬೆಳಗಾವಿ ಇಂದಿನ ಜಾಗತಿಕ ಯುಗದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಾತ್ಮಕತೆ ಹೆಚ್ಚಾಗುತ್ತಿದೆ...

Vijaya Karnataka 13 Mar 2018, 5:00 am

ಬೆಳಗಾವಿ: ಇಂದಿನ ಜಾಗತಿಕ ಯುಗದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಾತ್ಮಕತೆ ಹೆಚ್ಚಾಗುತ್ತಿದೆ. ಉದ್ಯಮ ಕ್ಷೇತ್ರದಲ್ಲಿಯೂ ಸಾಕಷ್ಟು ಬದಲಾವಣೆಗಳು ಆಗುತ್ತಿದ್ದು, ವಿದ್ಯಾರ್ಥಿಗಳಿಗೆ ಉದ್ಯಮ ವಲಯದಲ್ಲಿ ವಿಪುಲ ಅವಕಾಶಗಳಿವೆ. ಈ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಪುಣೆಯ ಮಹಾರಾಷ್ಟ್ರ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಾಜಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವೀಂದ್ರ ಎಚ್‌. ಬಿರ್ಜೆ ಹೇಳಿದರು.

ಪುಣೆಯ ಎಂಐಟಿ ಟೆಕ್ನಾಲಜಿ ಬಿಸಿನೆಸ್‌ ಇನ್‌ಕ್ಯೂಬೇಟರ್‌ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗಳ ಆಶ್ರಯದಲ್ಲಿ ನಗರದ ಭರತೇಶ ಶಿಕ್ಷಣ ಸಂಸ್ಥೆಯ ಮೋತಿಚಂದ ಲೆಂಗಡೆ ಭರತೇಶ ಪಾಲಿಟೆಕ್ನಿಕ್‌ನಲ್ಲಿ ಉದ್ಯಮಶೀಲತೆಯ ಅಲ್ಪಾವಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪಾಲಿಟೆಕ್ನಿಕ್‌ ಮತ್ತು ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಸ್ವ ಉದ್ಯೋಗ ಕೈಗೊಳ್ಳಲು ಪ್ರೇರೇಪಿಸುವುದು, ತಾಂತ್ರಿಕ ಯೋಚನೆಗಳನ್ನು ಕೌಶಲಗಳೊಂದಿಗೆ ಸ್ಟಾರ್ಟ್‌ಅಪ್‌ ಪ್ರಾರಂಭಿಸಿ ಕಾರ್ಯರೂಪಕ್ಕೆ ತರುವುದರ ಬಗ್ಗೆ , ಭಾರತ ಸರಕಾರದ ಟೆಕ್ನಾಲಜಿ ಬಿಸಿನೆಸ್‌ ಇನ್‌ಕ್ಯೂಬೇಟರ್‌ ಸೆಂಟರ್‌ಗಳ ಮೂಲಕ ಸೌಲಭ್ಯವನ್ನು ಪಡೆದು ಸ್ವತಂತ್ರ ಉದ್ಯಮಿಯಾಗಲು ಬೇಕಾಗುವ ತರಬೇತಿ ನೀಡುವ ಉದ್ದೇಶ ಹೊಂದಲಾಗಿದೆ ಎಂದರು.

ಪ್ರಾಚಾರ್ಯ ಸುರೇಶ ತುಳಸಿಗೇರಿ ಮಾತನಾಡಿದರು. ವಿನೀತಸಿಂಗ ಸವಣೂರ ಸ್ವಾಗತಿಸಿದರು. ಅಶೋಕ ಬಿ. ನಿರೂಪಿಸಿದರು. ಬಸಗೌಡ ಪಾಟೀಲ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ