ಆ್ಯಪ್ನಗರ

ಸದಾಶಿವ ಆಯೋಗ ವರದಿ ಶಿಫಾರಸು ಮಾಡುವ ಪಕ್ಷಕ್ಕೆ ಮಾದಿಗರ ಬೆಂಬಲ

ಐನಾಪುರ: ಕಳೆದ 20 ವರ್ಷಗಳಿಂದ ನ್ಯಾಯಮೂರ್ತಿ ಎಜೆ...

Vijaya Karnataka 2 Oct 2019, 5:00 am
ಐನಾಪುರ: ಕಳೆದ 20 ವರ್ಷಗಳಿಂದ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೆ ಹೋರಾಟ ನಡೆಸಲಾಗುತ್ತಿದ್ದರೂ ರಾಜ್ಯದಲ್ಲಿಆಡಳಿತಕ್ಕೆ ಬಂದ ಎಲ್ಲಪಕ್ಷಗಳು ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಲು ಮೀನಾಮೇಷ ಎಣಿಸುತ್ತಿವೆ. ಹೀಗಾಗಿ ಯಾವ ಪಕ್ಷದವರು ಆಯೋಗದ ವರದಿಯನ್ನು ಯಥಾವತ್ತಾಗಿ ಕೇಂದ್ರಕ್ಕೆ ಶಿಫಾರಸು ಮಾಡಿ ಒಳಮೀಸಲಾತಿ ದೊರಕಿಸಿಕೊಡುವ ಭರವಸೆ ನೀಡುವರೋ ಆ ಪಕ್ಷದವರಿಗೆ ಮುಂದಿನ ಉಪಚುನಾವಣೆಯಲ್ಲಿಮಾದಿಗ ಸಮುದಾಯದವರು ಬೆಂಬಲಿಸಲಿದ್ದಾರೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ರಾಜೇಂದ್ರ ಐಹೊಳೆ ಹೇಳಿದರು.
Vijaya Karnataka Web 01 AINAPUR 02_53


ಅವರು, ಸೊಮವಾರ ಪಟ್ಟಣದ ಶಿವಲಿಂಗೇಶ್ವರ ಮಠದಲ್ಲಿನಡೆದ ಕಾಗವಾಡ ತಾಲೂಕು ಮಾದಿಗ ಮಿಸಲಾತಿ ಹೊರಾಟ ಸಮಿತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿಮಾತನಾಡಿದರು.

ಸಭೆಯಲ್ಲಿಸಂಘಟನೆಯ ಅಥಣಿ ತಾಲೂಕು ಸಮಾವೇಶ ಹಾಗೂ ವಿಜಾಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಅಸಂತಾಪುರ ಗ್ರಾಮದ ಕಾಲೇಜು ವಿದ್ಯಾರ್ಥಿನಿ ರೇಣುಕಾ ಮಾದರ ಅತ್ಯಾಚಾರ, ಕೊಲೆ ಪ್ರಕರಣದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳುವ ಬಗ್ಗೆ ನಿರ್ಧರಿಸಲಾಯಿತು.

ಈ ಸಂದರ್ಭದಲ್ಲಿಕಾಗವಾಡ ತಾಲೂಕಾಧ್ಯಕ್ಷರಾಗಿ ಉಗಾರ ಬಿ.ಕೆಯ ಶೇಖರ ಕಾಟಕರ, ಉಪಾಧ್ಯಕ್ಷರಾಗಿ ಪರಶರಾಮ ಅವಳೆ ಮತ್ತು ಮತ್ತೋರ್ವ ಉಪಾಧ್ಯಕ್ಷರಾಗಿ ಐನಾಪುರದ ರಮೇಶ ಐಹೊಳೆ, ಪ್ರಧಾನ ಕಾರ್ಯದರ್ಶಿಯಾಗಿ ಕವಲಗುಡ್ಡದ ಪರಶು ಅವಳೆ, ಕಾರ್ಯದರ್ಶಿಯಾಗಿ ಐನಾಪುರದ ಮುರಗೇಶ ಗಸ್ತಿ, ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ಸಂದೀಪ ಬಿರಣಗಿ, ಐನಾಪುರ ಶಾಖಾ ಅಧ್ಯಕ್ಷರಾಗಿ ಸುರೇಶ ಐಹೊಳೆ ಅವರನ್ನು ಆಯ್ಕೆಮಾಡಿ ಆದೇಶಿಸಲಾಯಿತು.

ರಾಜ್ಯಪ್ರಧಾನ ಕಾರ್ಯದರ್ಶಿ ಮಹಾವೀರ ಐಹೊಳೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಬಸವರಾಜ ಹೂಳಿಕಟ್ಟಿ, ಹಣಮಂತ ಅರ್ದಾವುರ್‌, ಅಡಿವೆಪ್ಪ ಐಹೋಳೆ, ನಿಂಗಪ್ಪಾ ತಳವಾರ, ಸದಾಶಿವ ಮಾಂಗ, ವಸಂತ ಮಾದರ, ಶ್ರೀಶೈಲ ಗಸ್ತಿ, ಆನಂದ ವಂಟಗೋಡೆ ಇತರರು ಉಪಸ್ಥಿತರಿದ್ದರು. ಶೇಖರ ಕಾಟಕರ ನಿರೂಪಿಸಿ, ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ