ಆ್ಯಪ್ನಗರ

ಇಂದಿನಿಂದ ಮಹಾಲಿಂಗೇಶ್ವರ ದೇವರ ಅದ್ಧೂರಿ ಜಾತ್ರೆ

ಪಾಲಬಾವಿ: ರಾಯಬಾಗ ತಾಲೂಕಿನ ...

Vijaya Karnataka 15 Sep 2019, 5:00 am
ಪಾಲಬಾವಿ: ರಾಯಬಾಗ ತಾಲೂಕಿನ ಸುಕ್ಷೇತ್ರ ಕಂಕಣವಾಡಿ ಗ್ರಾಮದಲ್ಲಿಸೆ.15ರಿಂದ 19ರವರೆಗೆ ಅದ್ಧೂರಿಯಾಗಿ ಮಹಾಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವದ ನಡೆಯಲಿದೆ. ಈ ನಿಮಿತ್ತ ಪ್ರತಿದಿನ ಸಂಜೆ 7ರಿಂದ ರಾತ್ರಿ 10 ಗಂಟೆಯವರೆಗೆ ಮಹಾತ್ಮರಿಂದ 'ವೇದಾಂತ್‌ ಪರಿಷತ್‌' ಪ್ರವಚನ ಜರುಗಲಿದೆ.
Vijaya Karnataka Web 14PALABAVI2, PHOTO_53


ಹುಬ್ಬಳ್ಳಿ ಶಾಂತಾಶ್ರಮದ ಅಭಿನವ ಶಿವಪುತ್ರ ಸ್ವಾಮಿಗಳ ಪಾವನ ಸಾನ್ನಿಧ್ಯದಲ್ಲಿನಡೆಯುವ 'ವೇದಾಂತ ಪರಿಷತ್‌' ಪ್ರವಚನದಲ್ಲಿಸುಕ್ಷೇತ್ರ ತವಗ ಮೇಲಿನ ಮಠದ ದಾಸೋಹಮೂರ್ತಿ ಬಾಳಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಕನ್ನಡದ ಕಬೀರ ಇಬ್ರಾಹಿಂ ಸುತಾರ ಪ್ರವಚನದ ಅಧ್ಯಕ್ಷತೆ ವಹಿಸಲಿದ್ದಾರೆ. ಪಾಲಬಾವಿ ಶಾಂತಮಲ್ಲಕುಟೀರದ ವೀರಯ್ಯ ಸ್ವಾಮೀಜಿ ಹಾಗೂ ಕಂಕಣವಾಡಿ ಅಭಿನವ ಶಿವಾನಂದ ಶರಣರು ಪ್ರವಚನ ನೀಡುವರು.

ಭವ್ಯ ಜಾನುವಾರು ಪ್ರದರ್ಶನ:
ಸೆ.18ರಂದು ಬೆಳಗ್ಗೆ 9 ಗಂಟೆಗೆ ಆಕಳು, ಎತ್ತುಗಳ ಭವ್ಯ ಜಾನುವಾರು ಪ್ರದರ್ಶನ ನಡೆಯಲಿದೆ. ಇದೇ ವೇಳೆ ಎತ್ತು, ಕುದುರೆ, ಸೈಕಲ್‌ ಸ್ಪರ್ಧೆಗಳನ್ನೂ ಆಯೋಜಿಲಾಗಿದೆ. ಮಧ್ಯಾಹ್ನ 3 ಗಂಟೆಗೆ ಆರತಿ ಹಾಗೂ ಪೂರ್ಣಕುಂಭ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿಮಹಾಲಿಂಗೇಶ್ವರರ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಲಿದೆ. ಇದೇ ವೇಳೆ ಮಹಾಲಿಂಗೇಶ್ವರ ದೇವಸ್ಥಾನದ ದಾಸೋಹದ ಮನೆಯಲ್ಲಿಅನ್ನ ಸಂತರ್ಪಣೆ ನೆರವೇರುವುದು. ಸಂಜೆ 4 ಗಂಟೆಗೆ ಭವ್ಯ ರಥೋತ್ಸವ ಆರಂಭವಾಗಲಿದೆ.

ಸೆ.19ರಂದು ಬೆಳಗಿನ ಜಾವ 5 ಗಂಟೆಗೆ ದೇವಸ್ಥಾನದ ಅರ್ಚಕ ಚನ್ನಪರಯ್ಯ ಸ್ವಾಮೀಜಿ ಮಠಪತಿ ಅವರಿಂದ ದೇವಸ್ಥಾನದ ಶಿವಲಿಂಗಕ್ಕೆ ಪಂಚಾಕ್ಷರಿ ಮಹಾಮಂತ್ರದೊಂದಿಗೆ ಮಹಾ ರುದ್ರಾಭಿಷೇಕ, ಪತ್ರಿ, ಬಿಲ್ವಾರ್ಚನೆ, ಜಲಾಭಿಷೇಕ, ಭಸ್ಮಧಾರಣೆ ಹಾಗೂ ವಿಷೇಶಪೂಜೆ ನೆರವೇರುವುದು. ಪ್ರಜಾಪತಿ ಸುವರ್ಣಖಂಡಿ ಅವರು ಬುತ್ತಿಪೂಜೆ ನೆರವೇರಿಸುವರು. ಬೆಳಗ್ಗೆ 11 ಗಂಟೆಗೆ ವಿಶ್ವಕರ್ಮ ಸಮಾಜದದವರು ತೇರಿನಲ್ಲಿಡುವ ಮಹಾಲಿಂಗೇಶ್ವರ ಬೆಳ್ಳಿ ಮೂರ್ತಿಯ ಭವ್ಯ ಮೆರವಣಿಗೆಗೆ ಆರತಿ, ಪೂರ್ಣ ಕುಂಭಮೇಳಗಳು ಮೆರಗು ನೀಡಲಿವೆ. ಸಂಜೆ 4 ಗಂಟೆಗೆ ಸುಣಧೋಳಿ ಜಡಿಸಿದ್ದೇಶ್ವರ ಮಠದ ಶಿವಾನಂದ ಸ್ವಾಮಿಗಳು ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡುವರು. ಮಹಾಲಿಂಗೇಶ್ವರ ದೇವಸ್ಥಾನದಿಂದ ಆರಂಭವಾಗುವ ರಥೋತ್ಸವವು ಗ್ರಾಮದ ಈಶ್ವರಲಿಂಗ ದೇವಸ್ಥನದವರೆಗೆ ಹೋಗಿ ದೇವಸ್ಥಾನಕ್ಕೆ ಮರಳಿ ಬರಲಿದೆ.

ನಾನಾ ಶರ್ತುಗಳು:
ಇದೇ ದಿನ ಗುರುವಾರ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಜೋಡುಗಾಡಿ, ಕುದುರೆ ಗಾಡಿ, ಹಲ್ಲುಹಚ್ಚದ ಹೋರಿ, ಕುದುರೆ ಶರ್ತು, ಎಕ್ಕಾಗಾಡಿ ಓಡಿಸುವ ಶರ್ತುಗಳು ನಡೆಯಲಿವೆ. ರಾತ್ರಿ 8 ಗಂಟೆಗೆ ಮಹಾಲಿಂಗೇಶ್ವರ ದೇವಸ್ಥಾನದ ಭವ್ಯ ಸಭಾ ಮಂಟಪದಲ್ಲಿಶ್ರೀಶೈಲಯ್ಯ ಮಠಪತಿ ಹಾಗೂ ಶಿವಲಿಂಗಯ್ಯ ಹಿರೇಮಠ ಅವರ ಸಾನ್ನಿಧ್ಯದಲ್ಲಿ'ರಾಜ್ಯ ಮಟ್ಟದ ಭಜನಾ ಸ್ಪರ್ಧೆಗಳು' ಜರುಗಲಿವೆ ಎಂದು ಮಹಾಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ಕಮಿಟಿಯವರು ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ