ಆ್ಯಪ್ನಗರ

ಮಹಾರಾಷ್ಟ್ರದೊಂದಿಗೆ ನೀರಿನ ಒಡಂಬಡಿಕೆ ಮಾಡಿಕೊಳ್ಳಿ

ಅಥಣಿ: ಪಟ್ಟಣದ ಕೃಷ್ಣಾ ನದಿ ನೀರು ಹೋರಾಟ ಸಮಿತಿ ನೇತೃತ್ವದಲ್ಲಿ ಹಲವು ಸಂಘಟನೆಗಳ ...

Vijaya Karnataka 26 May 2019, 5:00 am
ಅಥಣಿ : ಪಟ್ಟಣದ ಕೃಷ್ಣಾ ನದಿ ನೀರು ಹೋರಾಟ ಸಮಿತಿ ನೇತೃತ್ವದಲ್ಲಿ ಹಲವು ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನೀರಿನ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ನಡೆಸಲಾಗುತ್ತಿರುವ ನಿರಂತರ ಧರಣಿ ಸತ್ಯಾಗ್ರಹ 6 ನೇ ದಿನಕ್ಕೆ ಕಾಲಿಟ್ಟಿತು.
Vijaya Karnataka Web BEL-25 ATHANI-01


ಹೋರಾಟ ಬೆಂಬಲಿಸಿ ಮಾತನಾಡಿದ ಕಾಗವಾಡ ಮಾಜಿ ಶಾಸಕ ರಾಜು ಕಾಗೆ, ಮಹಾರಾಷ್ಟ್ರ ರಾಜ್ಯಕ್ಕೆ ನೀರಿನ ಬದಲಾಗಿ ನೀರು ಕೊಡಲು ನಮ್ಮದೇನೂ ಅಭ್ಯಂತರವಿಲ್ಲ. ಕಾರಣ ಮಳೆ ನೀರು ಸಮುದ್ರಕ್ಕೆ ಸೇರುವ ಬದಲು ಮಹಾರಾಷ್ಟ್ರ ಜತ್ತ, ಅಕ್ಕಲಕೋಟ ಹಾಗೂ ಸೋಲಾಪುರ ಜಿಲ್ಲೆಗೆ ಹರಿದು ಹೋಗುವ 4 ಟಿಎಂಸಿ ನೀರನ್ನು ಮಹಾರಾಷ್ಟ್ರದವರಿಗೆ ನೀಡಲು ಮಹಾರಾಷ್ಟ್ರ ಸರಕಾರದೊಂದಿಗೆ ನಮ್ಮ ಕರ್ನಾಟಕ ಸರಕಾರ ಒಡಂಬಡಿಕೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಕೃಷ್ಣಾ ನದಿ ತಟದ ಜನ ಜಾನವಾರುಗಳಿಗೆ ನೀರು ಒದಗಿಸುವುದರ ಜತೆಗೆ ನೀರಿನ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ನೀರಿನ ಸಮಸ್ಯೆ ಹೀಗೆಯೇ ಮುಂದುವರಿದರೆ ಈ ಭಾಗದ ಬಿಜೆಪಿ ಮುಖಂಡರ ಜತೆಗೆ ಕೃಷ್ಣಾ ನದಿ ನೀರು ಹೋರಾಟ ಸಮಿತಿಯ ಕೆಲ ಪ್ರಮುಖ ಸದಸ್ಯರ ನಿಯೋಗ ದಿಲ್ಲಿಗೆ ಕರೆದುಕೊಂಡು ಹೋಗಲು ಸಿದ್ಧ ಎಂದರು.

ಕರವೇ ಅಧ್ಯಕ್ಷ ಬಸನಗೌಡ ಪಾಟೀಲ ಮಾತನಾಡಿ, ಕೃಷ್ಣಾ ನದಿಗೆ ನೀರು ಹರಿಸುವುದಕ್ಕಾಗಿ ಮತ್ತು ಶಾಶ್ವತ ಪರಿಹಾರ ಕಂಡುಕೊಳ್ಳಲು ಮಹಾರಾಷ್ಟ್ರ-ಕರ್ನಾಟಕ ಎರಡೂ ರಾಜ್ಯಗಳು ಒಮ್ಮತದಿಂದ ಒಡಂಬಡಿಕೆ ಮಾಡಿಕೊಂಡು ಕರ್ನಾಟಕ್ಕೆ ನಾಲ್ಕು ಟಿಎಂಸಿ ನೀರು ಹರಿಸುವಂತಾಗಬೇಕು. ಒಂದು ವೇಳೆ ಒಡಂಬಡಿಕೆ ಮಾಡಿಕೊಳ್ಳದಿದ್ದರೆ ಸಂಸದ ಹಾಗೂ ಶಾಸಕರ ಮನೆಗಳ ಮುಂದೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ವಿಜಯಕುಮಾರ ಅಡಹಳ್ಳಿ ಮಾತನಾಡಿದರು. ಬಾಬುರಾವ್‌ ಮಹಾರಾಜರು, ಸುರೇಶ ಮಹಾರಾಜರು ಮತ್ತು ಶೆಟ್ಟರ ಮಠದ ಮರುಳಸಿದ್ದ ಸ್ವಾಮೀಜಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕಲ್ಲಪ್ಪ ವಣಜೋಳಿ ನ್ಯಾಯವಾದಿ ಸುನೀಲ ಸಂಕ, ಜ್ಯೋತಗೌಡಾ ಪಾಟೀಲ ಪ್ರಕಾಶ ಪೂಜಾರಿ, ಶಬ್ಬೀರ್‌ ಸಾತಬಚ್ಚೆ, ಎಸ್‌ ಎಸ್‌ ಪಾಟೀಲ, ರಮೇಶ ಬಾದವಾಡಗಿ, ಸುಭಾಷ ಕಾಂಬಳೆ, ದೀಪಕ ಶಿಂಧೆ, ರಾಕೇಶ ಮೈಗೂರ, ದಯಾನಂದ ಶೇಗುಣಶಿ, ರವಿ ಪೂಜಾರಿ, ಜಗನ್ನಾಥ ಬಾಮನೆ, ಮಂಜು ಹೋಳಿಕಟ್ಟಿ, ಕುಮಾರ ಮಾಕನ್ನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ