ಆ್ಯಪ್ನಗರ

ಸ್ವಾಮೀಜಿ ಕೊಟ್ಟ ನಾಟಿ ಔಷಧಿಗೆ ಗೊಟಕ್!

ಸಾರಾಯಿ ಚಟ ಬಿಡಿಸಲು ಸ್ವಾಮೀಜಿ ನೀಡಿದ ನಾಟಿ ಔಷಧಿ ನೀಡಿದ್ದು ವ್ಯಕ್ತಿಯ ಪ್ರಾಣವನ್ನು ಬಲಿ ತೆಗೆದಿದೆ.

ವಿಕ ಸುದ್ದಿಲೋಕ 22 Mar 2017, 3:53 pm
ಬೆಳಗಾವಿ: ಸಾರಾಯಿ ಚಟ ಬಿಡಿಸಲು ಸ್ವಾಮೀಜಿ ನೀಡಿದ ನಾಟಿ ಔಷಧಿ ನೀಡಿದ್ದು ವ್ಯಕ್ತಿಯ ಪ್ರಾಣವನ್ನು ಬಲಿ ತೆಗೆದಿದೆ. ಜುಮನಾಳ ಗ್ರಾಮದ ನಿವಾಸಿ ಸಿದ್ದರಾಯ್ ನಾಯಕ್ (28) ಮೃತಪಟ್ಟ ವ್ಯಕ್ತಿ. ಮಾರ್ಚ್‌ 14ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
Vijaya Karnataka Web man died after eating nati medicine given by swamiji
ಸ್ವಾಮೀಜಿ ಕೊಟ್ಟ ನಾಟಿ ಔಷಧಿಗೆ ಗೊಟಕ್!


ಮಗ ತುಂಬಾ ಸಾರಾಯಿ ಕುಡಿಯುತ್ತಾನೆ, ಅವನ ಚಟವನ್ನು ಬಿಡಿಸಿ ಎಂದು ಸ್ವಾಮೀಜಿ ಬಳಿ ಕರೆ ತಂದಿದ್ದರು. ಸ್ವಾಮೀಜಿ ನೀಡಿದ ನಾಟಿ ಔಷಧಿಯನ್ನು ಸೇವಿಸಿದ ತಕ್ಷಣವೇ ಸಿದ್ದನಾಯಕ್ ಮೃತಪಟ್ಟಿದ್ದಾರೆ.

ಆದರೆ ಈ ಪ್ರಕರಣವನ್ನು ಮೃತನ ಮನೆಯವರಿಗೆ 3.5 ಲಕ್ಷಕೊಟ್ಟು ರಾಜಿ ಪಂಚಾಯಿತಿ ಮೂಲಕ ಮುಚ್ಚಿ ಹಾಕಲು ನೇಸರ್ಗಿ ಪೊಲೀಸರು ಪ್ರಯತ್ನಿಸಿದರು ಎಂದು ದೂರಲಾಗಿದೆ.

ಬೈಲಹೊಂಗಲ ತಾಲೂಕಿನ ಹಣ್ಣಿಕೇರಿಯಲ್ಲಿ ನಡೆದ ಪ್ರಕರಣವನ್ನು ಕೇಸ್‌ ದಾಖಲಿಸಿಕೊಳ್ಳದ ಪೊಲೀಸರು ರಾಜಿ ಸಂಧಾನ ಮೂಲಕ ಮುಚ್ಚಿ ಹಾಕಲು ಪ್ರಯತ್ನಿಸಿದರು. ರಾಜಿ ಸಂಧಾನದಲ್ಲಿ 3.5 ಲಕ್ಷ ಮೃತನ ಮನೆಯವರಿಗೆ ನೀಡಬೇಕೆಂದು ಒಪ್ಪಂದವಾಗಿತ್ತು.

ಆದರೆ ಈ ವಿಷಯ ಮಾಧ್ಯಮಗಳಿಗೆ ತಿಳಿಯುತ್ತಿದ್ದಂತೆ ಸ್ವಾಮಿಜೀ ಶಿವಪ್ಪ ಭಾವಿ ವಿರುದ್ಧ ರಾತ್ರೋರಾತ್ರಿ ಕೇಸ್‌ ದಾಖಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ