ಆ್ಯಪ್ನಗರ

ಮರಡಿ ಬಸವೇಶ್ವರ ಜಾತ್ರೆ: ರಂಜಿಸಿದ ಚಕ್ಕಡಿ ಶರ್ಯತ್ತು

ಬೈಲಹೊಂಗಲ : ಪಟ್ಟಣದ ಇತಿಹಾಸ ಪ್ರಸಿದ್ಧ ಮರಡಿ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ನಿಮಿತ್ತ ಮರಡಿ ಬಸವೇಶ್ವರ ತರುಣ ಸಂಘದಿಂದ ನಡೆದ ಜೋಡೆತ್ತುಗಳ ಖಾಲಿ ...

Vijaya Karnataka 2 Dec 2018, 5:00 am
ಬೈಲಹೊಂಗಲ : ಪಟ್ಟಣದ ಇತಿಹಾಸ ಪ್ರಸಿದ್ಧ ಮರಡಿ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ನಿಮಿತ್ತ ಮರಡಿ ಬಸವೇಶ್ವರ ತರುಣ ಸಂಘದಿಂದ ನಡೆದ ಜೋಡೆತ್ತುಗಳ ಖಾಲಿ ಗಾಡಾ ಓಡಿಸುವ ಚಕ್ಕಡಿ ಶರ್ಯತ್ತು ನೋಡುಗರನ್ನು ರಂಜಿಸಿತು.
Vijaya Karnataka Web BEL-1HTP3


ದೇವಲಾಪುರ ರಸ್ತೆಯ ಸಾರ್ವಜನಿಕ ಆಸ್ಪತ್ರೆ ಎದುರು ನಡೆದ ಶರ್ಯತ್ತು ನೋಡುಗರ ಗಮನ ಸೆಳೆಯಿತು. ಉದ್ಯಮಿ ವಿಜಯ ಮೆಟಗುಡ್ಡ ಶರ್ಯತ್ತು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಕಲೆ, ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಚಕ್ಕಡಿ ಶರ್ಯತ್ತು ನಡೆಸಲಾಗುತ್ತಿದೆ. ಕ್ರೀಡಾಸಕ್ತರು ಗ್ರಾಮೀಣ ಕ್ರೀಡಾ ಚಟುವಟಿಕೆಗಳನ್ನು ನೋಡಿ ಪ್ರೋತ್ಸಾಹಿಸಬೇಕೆಂದರು.

ಮಹಾಂತೇಶ ತುರಮರಿ, ಬಸವರಾಜ ಜನ್ಮಟ್ಟಿ, ಕುಮಾರ ದೇಶನೂರ, ಚಿತ್ರನಟ ಶಿವರಂಜನ ಬೋಳನ್ನವರ, ಸಂಘಟಕರಾದ ಗುರು ಮೆಟಗುಡ್ಡ, ಸುನೀಲ ಮರಕುಂಬಿ, ಮಹಾಂತೇಶ ಹೊಸೂರ, ಶಿವಾನಂದ ಹೊಸೂರ, ಸುಭಾಸ ತುರಮರಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ