ಆ್ಯಪ್ನಗರ

ಅಭಿಪ್ರಾಯ ಸಂಗ್ರಹಿಸಿ ಬಜಾರ್‌ ಏರಿಯಾ ಘೋಷಣೆ

ಬೆಳಗಾವಿ: ಕ್ಯಾಂಪ್‌ ಪ್ರದೇಶದಲ್ಲಿ ಸಿವಿಲ್‌ ಬಾಂಡರಿ ...

Vijaya Karnataka 30 Aug 2018, 5:00 am
ಬೆಳಗಾವಿ: ಕ್ಯಾಂಪ್‌ ಪ್ರದೇಶದಲ್ಲಿ ಸಿವಿಲ್‌ ಬಾಂಡರಿ ಫಿಲ್ಲರ್ಸ್‌ ಫಿಕ್ಸ್‌ ಮಾಡುವ ಸಂಗತಿಯಲ್ಲಿ ಸಂಬಂಧಿತ ಬಂಗಲೋ ನಿವಾಸಿಗಳ ಅಭಿಪ್ರಾಯ ಪಡೆದು ಅಂತಿಮ ನಿರ್ಧಾರ ಕೈಗೊಳ್ಳಲು ಬುಧವಾರ ಜರುಗಿದ ಕಾಂಟೋನ್ಮೆಂಟ್‌ ಬೋರ್ಡ್‌ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದೆ.
Vijaya Karnataka Web market area will be declared after collecting the opinions
ಅಭಿಪ್ರಾಯ ಸಂಗ್ರಹಿಸಿ ಬಜಾರ್‌ ಏರಿಯಾ ಘೋಷಣೆ


ಕ್ಯಾಂಪ್‌ನ ಖಾನಾಪುರ ರಸ್ತೆಯ ಪೂರ್ವಭಾಗದಲ್ಲಿ ಇರುವ ಸುಮಾರು 30 ಬಂಗಲೋಗಳನ್ನು ಬಜಾರ್‌ ಏರಿಯಾದಲ್ಲಿ ಸೇರ್ಪಡೆ ಮಾಡುವ ಸಂಗತಿಯಲ್ಲಿ ವರದಿ ನೀಡಲು ಬೋರ್ಡ್‌ನ ಸದಸ್ಯರ ಕಮಿಟಿ ರಚನೆ ಮಾಡಲಾಗಿತ್ತು. ಈ ಕಮಿಟಿ ಉದ್ದೇಶಿತ ಬಂಗಲೋ ಏರಿಯಾವನ್ನು ಬಜಾರ್‌ ಏರಿಯಾದಲ್ಲಿ ಸೇರ್ಪಡೆ ಮಾಡಲು ಸಮ್ಮತಿ ನೀಡಿದೆ. ಇಂದಿನ ಸಭೆಯಲ್ಲಿ ಇದು ಚರ್ಚೆಗೊಂಡಿತು. ಚುನಾಯಿತ ಸದಸ್ಯರೆಲ್ಲರೂ ಒಪ್ಪಿಗೆ ಸೂಚಿಸಿದರು.

ಆದರೆ, ಕಾಂಟೋನ್ಮೆಂಟ್‌ ಬೋರ್ಡ್‌ ಅಧ್ಯಕ್ಷರೂ ಆಗಿರುವ ಎಂಎಲ್‌ಐಆರ್‌ಸಿ ಬ್ರಿಗೇಡಿಯರ್‌ ಗೋವಿಂದ ಕಲವಾಡ, ಒಮ್ಮೆಲೇ ಈ ನಿರ್ಧಾರ ಮಾಡುವುದು ಬೇಡ. ಮುಂದೆ ಸಮಸ್ಯೆ, ಆಕ್ಷೇಪಗಳಿಗೆ ಕಾರಣವಾಗಬಹುದು. ಇದಕ್ಕೂ ಮೊದಲು ಸಂಬಂಧಿತ ವಾರ್ಡ್‌ನ ಸದಸ್ಯರು ತಮ್ಮ ವ್ಯಾಪ್ತಿಯ ಬಂಗಲೋ ನಿವಾಸಿಗಳ ಲಿಖಿತ ಹೇಳಿಕೆ ಪಡೆದುಕೊಂಡು ಬರಬೇಕು ಎಂದು ತಿಳಿಸಿದರು.

ಇದಕ್ಕೆ ಆಕ್ಷೇಪಿಸಿದ ಸದಸ್ಯ ಸಾಜೀದ್‌ ಶೇಖ್‌, ಸದಸ್ಯರು ಪಡೆಯುವುದಕ್ಕಿಂತ ಕಾಂಟೋನ್ಮೆಂಟ್‌ ಬೋರ್ಡ್‌ನಿಂದಲೇ ಬಂಗಲೋ ನಿವಾಸಿಗಳಿಗೆ ಸೂಚನಾ ಪತ್ರ ಕಳಿಸಿ ಅಭಿಪ್ರಾಯ ಪಡೆಯಬೇಕು. ಇದಕ್ಕಾಗಿ ಸೆ. 20ರವರೆಗೆ ಕಾಲಾವಕಾಶ ನಿಗದಿ ಮಾಡಿ ಎಂದು ಕೋರಿದರು.

ಮಾರ್ಕೆಟ್‌ ಪೊಲೀಸ್‌ ಠಾಣೆಯಿಂದ ಸರ್ಕಿಟ್‌ ಹೌಸ್‌ವರೆಗಿನ ಮಾರ್ಗದಲ್ಲಿ ವಿದ್ಯುತ್‌ ವೈರಿಂಗ್‌ ಬದಲಾವಣೆ ಮಾಡಲು 10.75 ಲಕ್ಷ ರೂ.ಗಳ ವæಚ್ಚದ ಕಾಮಗಾರಿ ಕೈಗೊಳ್ಳಲು ಸಭೆ ಒಪ್ಪಿಗೆ ನೀಡಿತು. ಕೋಟೆ ಒಳಗಡೆ ಹಂದಿಗಳ ಕಾಟ ಹೆಚ್ಚಾಗಿದ್ದು, ಬೋರ್ಡ್‌ನ ಆರೋಗ್ಯ ನಿರೀಕ್ಷಕರು ಅವುಗಳನ್ನು ಹಿಡಿದು ಬೇರೆ ಕಡೆಗೆ ಬಿಡಬೇಕೆಂದು ಅಧ್ಯಕ್ಷ ಗೋವಿಂದ ಕಲಾವಾಡ ನಿರ್ದೇಶನ ನೀಡಿದರು.

ಉಪಾಧ್ಯಕ್ಷ ರಿಜ್ವಾನ್‌ ಬೇಪಾರಿ, ಸದಸ್ಯರಾದ ವಿಕ್ರಮ ಪುರೋಹಿತ, ನಿರಂಜನ ಅಷ್ಟೇಕರ್‌, ಆರ್ಬಿಯಾ ಧಾರವಾಡಕರ್‌, ಅಲ್ಲೇದ್ಧಿನ್‌ ಕಿಲ್ಲೇದಾರ, ಡಾ. ಮದನ್‌ ಡೋಂಗರೆ, ಗ್ಯಾರೋಸಿನ್‌ ಇಂಜಿನಿಯರ್‌ ಲೆಫ್ಟಿನಂಟ್‌ ಕರ್ನಲ್‌ ನಿತಿನ್‌ಕುಮಾರ, ಇಂಜಿನಿಯರ್‌ ಸತೀಶ್‌ ಮಣ್ಣೂರಕರ್‌, ಸಿಇಒ ದಿವ್ಯಾ ಶಿವರಾಂ ಹಾಗೂ ಇತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ