ಆ್ಯಪ್ನಗರ

ನೇಣು ಬಿಗಿದುಕೊಂಡು ವಿವಾಹಿತೆ ಆತ್ಮಹತ್ಯೆ

ರಾಮದುರ್ಗ: ತಾಲೂಕಿನ ಕಟಕೋಳದಲ್ಲಿಹೊಟ್ಟೆ ನೋವು ತಾಳಲಾರದೆ ಗೃಹಣಿಯೊಬ್ಬರು ...

Vijaya Karnataka 29 Sep 2019, 5:00 am
ರಾಮದುರ್ಗ: ತಾಲೂಕಿನ ಕಟಕೋಳದಲ್ಲಿಹೊಟ್ಟೆ ನೋವು ತಾಳಲಾರದೆ ಗೃಹಣಿಯೊಬ್ಬರು ಮನೆಯಲ್ಲಿಶನಿವಾರ ಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Vijaya Karnataka Web 28RAMDURGA 1101644


ಗ್ರಾಮದ ಲಕ್ಷ್ಮೇ ಬಾಲಪ್ಪ ಅರಟಗಲ್ಲ(19) ಮೃತರು. ಅವರನ್ನು ಸವದತ್ತಿ ತಾಲೂಕಿನ ಚುಳಕಿ ಗ್ರಾಮದ ಬಾಲಪ್ಪನೊಂದಿಗೆ 9 ತಿಂಗಳಹಿಂದೆಯೇ ಮದುವೆ ಮಾಡಿಕೊಡಲಾಗಿತ್ತು. ಗಂಡ-ಹೆಂಡತಿ ಇಬ್ಬರು ಕಟಕೋಳದಲ್ಲಿಬಾಡಿಗೆ ಮನೆಯಲ್ಲಿವಾಸವಾಗಿದ್ದರು.

ಶನಿವಾರ ಹೊಟ್ಟೆ ನೋವಿನ ಸಮಸ್ಯೆ ಉಲ್ಬಣವಾದ್ದರಿಂದ ಸಹನೆ ಕಳೆದುಕೊಂಡ ಅವರು, ಬೆಳಗ್ಗೆ ಗಂಡ ಬಾಲಪ್ಪ ಕೂಲಿ ಕೆಲಸಕ್ಕೆ ಹೊಲಕ್ಕೆ ಹೋಗಿದ್ದ ಸಂದರ್ಭದಲ್ಲಿಅಟ್ಟದ ಮೇಲಿನ ತೊಲೆಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರ ತಂದೆ ಗಂಗಪ್ಪ ಹರಳಕಟ್ಟಿ ಕಟಕೋಳ ಠಾಣೆಯಲ್ಲಿಪ್ರಕರಣ ದಾಖಲಿಸಿದ್ದು ಪೊಲೀಸರು ತನಿಖೆ ನಡೆಸಿದ್ದಾರೆ.

ಬಟ್ಟೆ ಅಂಗಡಿಯಲ್ಲಿಕಳುವು:
ಕಟಕೋಳ ಗ್ರಾಮದ ರೆಡಿಮೇಡ್‌ ಬಟ್ಟೆ ಅಂಗಡಿಯೊಂದರ ಬೀಗ ಮುರಿದು ಶುಕ್ರವಾರ ರಾತ್ರಿ ಒಳನುಗ್ಗಿದ ಕಳ್ಳರು ಬಟ್ಟೆ, ಕಂಪ್ಯೂಟರ್‌ ಸಿಪಿಯು ಹಾಗೂ 20 ಸಾವಿರ ರೂ. ನಗದು ಕಳುವು ಮಾಡಿದ್ದಾರೆ.

ಅಂಗಡಿ ಮಾಲೀಕರ ದೂರಿನ ಮೇರೆಗೆ ಪೊಲೀಸ್‌ ಶ್ವಾನದಳದವರು ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ತೆರಳಿ ಪರಿಶೀಲನೆ ಕೈಗೊಂಡಿದ್ದಾರೆ. ಈ ಕುರಿತು ಕಟಕೋಳ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ