ಆ್ಯಪ್ನಗರ

ಮಟ್ಕಾ ದಂಧೆ: ಎಎಸ್‌ಐ, ಪೇದೆ ಅಮಾನತು

ಬೆಳಗಾವಿ: ಮಟ್ಕಾ ದಂಧೆ ನಿಯಂತ್ರಿಸುವಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಸವದತ್ತಿ ...

Vijaya Karnataka 26 Aug 2019, 5:00 am
ಬೆಳಗಾವಿ: ಮಟ್ಕಾ ದಂಧೆ ನಿಯಂತ್ರಿಸುವಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಸವದತ್ತಿ ಠಾಣೆಯ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ (ಎಎಸ್‌ಐ) ಹಾಗೂ ಒಬ್ಬ ಕಾನ್‌ಸ್ಟೆಬಲ್‌ ಅನ್ನು ಅಮಾನತು ಮಾಡಲಾಗಿದೆ.
Vijaya Karnataka Web matka racket asi constable suspended
ಮಟ್ಕಾ ದಂಧೆ: ಎಎಸ್‌ಐ, ಪೇದೆ ಅಮಾನತು


ಎಎಸ್‌ಐ ಕೆ.ಎಂ. ಕಲ್ಲೂರು ಮತ್ತು ಕಾನ್‌ಸ್ಟೆಬಲ್‌ ಎಸ್‌.ಆರ್‌. ರಾಮದುರ್ಗ ಅಮಾನತಾದವರು.

ಸವದತ್ತಿ ತಾಲೂಕಿನ ಸಿಂದೋಗಿ ಗ್ರಾಮದಲ್ಲಿ ಈರಪ್ಪ ಉಳ್ಳಾಗಡ್ಡಿ ಮತ್ತು ಅವನ ಮಗ ಸೇರಿಕೊಂಡು ತಮ್ಮ ಮನೆಯಲ್ಲೇ ಸುತ್ತಮುತ್ತಲಿನ ಗ್ರಾಮದ ನಿವಾಸಿಗಳಿಂದ ಮಟ್ಕಾ, ಜೂಜಾಟ ಆಡಿಸುತ್ತಿರುವ ಬಗ್ಗೆ ದೂರು ಬಂದಿತ್ತು. ಇದಕ್ಕೆ ಎಎಸ್‌ಐ ಮತ್ತು ಕಾನ್‌ಸ್ಟೆಬಲ್‌ ನಿರ್ಲಕ್ಷ್ಯವೇ ಕಾರಣ ಎನ್ನುವುದು ಪ್ರಾಥಮಿಕ ತನಿಖೆಯಿಂದ ಕಂಡು ಬಂದಿದೆ. ಹಾಗಾಗಿ ಅವರನ್ನು ತಕ್ಷಣದಿಂದ ಅಮಾನತು ಮಾಡಿ ಮುಂದಿನ ವಿಚಾರಣೆ ನಡೆಸಿ ವರದಿ ಕೊಡುವಂತೆ ರಾಮದುರ್ಗದ ಡಿಎಸ್‌ಪಿಗೆ ಸೂಚಿಸಲಾಗಿದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ