ಆ್ಯಪ್ನಗರ

ದಲಿತ ವ್ಯಕ್ತಿಯ ಬೆತ್ತಲೆ ಮೆರವಣಿಗೆ ಖಂಡಿಸಿ ಮನವಿ

ತೆಲಸಂಗ: ದಲಿತ ವ್ಯಕ್ತಿಯ ಬೆತ್ತಲೆ ಮೆರವಣಿಗೆ ಖಂಡಿಸಿರುವ ಗ್ರಾಮದ ದಲಿತ ಮುಖಂಡರು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ತೆಲಸಂಗ ...

Vijaya Karnataka 15 Jun 2019, 5:00 am
ತೆಲಸಂಗ: ದಲಿತ ವ್ಯಕ್ತಿಯ ಬೆತ್ತಲೆ ಮೆರವಣಿಗೆ ಖಂಡಿಸಿರುವ ಗ್ರಾಮದ ದಲಿತ ಮುಖಂಡರು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ತೆಲಸಂಗ ಉಪತಹಸೀಲ್ದಾರ್‌ ಸಿ.ಎಸ್‌. ಕಬಾಡೆ ಅವರ ಮೂಲಕ ಸರಕಾರಕ್ಕೆ ಶುಕ್ರವಾರ ಮನವಿ ಸಲ್ಲಿಸಿದರು.
Vijaya Karnataka Web BEL-14TELSANG1


ಈ ವೇಳೆ ಮುಖಂಡ ರಾಜು ಪರ್ನಾಕರ ಮಾತನಾಡಿ, ದಲಿತ ಸಮುದಾಯದ ವ್ಯಕ್ತಿಯನ್ನು ಬೆತ್ತಲೆ ಮೆರವಣಿಗೆ ಮಾಡುವುದು ಇನ್ನೂ ಪ್ರಸ್ತುತವಾಗಿರುವ ಜಾತಿ ವ್ಯವಸ್ಥೆಯ ಕ್ರೂರತೆಗೆ ನಿದರ್ಶನ. ಬೆತ್ತಲಾದ ವ್ಯಕ್ತಿಗೆ ಬಟ್ಟೆ, ಗುಟುಕು ನೀರು ಕೊಡದೆ, ರಕ್ತ ಸೋರುತ್ತಿದ್ದರೂ ರಕ್ಷಣೆಗೆ ಮುಂದಾಗದೆ ಅಮಾನವೀಯತೆ ಮೆರೆಯಲಾಗಿದೆ. ಸಂವಿಧಾನ ಬಾಹಿರವಾಗಿರುವ ಇಂತಹ ಪೈಶಾಚಿಕ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ. ದೌರ್ಜನ್ಯಕ್ಕೊಳಗಾದ ವ್ಯಕ್ತಿ ದೂರು ದಾಖಲಿಸಿಲ್ಲ ಎಂಬ ನೆಪವೊಡ್ಡಿ ದೌರ್ಜನ್ಯ ಎಸಗಿದವರಿಗೆ ತಕ್ಕ ಶಿಕ್ಷೆ ನೀಡದಿದ್ದರೆ ತೀವ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಉಪತಹಸೀಲ್ದಾರ್‌ ಸಿ.ಎಸ್‌. ಕಬಾಡೆ ಅವರು ಮನವಿಯನ್ನು ಸರಕಾರಕ್ಕೆ ತಲುಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವುದಾಗಿ ತಿಳಿಸಿದರು. ಗ್ರಾಪಂ ಉಪಾಧ್ಯಕ್ಷ ಅನೀಲ ಪಾಂಗಿ, ಗ್ರಾಪಂ ಸದಸ್ಯ ರಾಕೇಶ ಮಣ್ಣಪ್ಪಗೋಳ, ಸಿದ್ದಲಿಂಗ ಮಾದರ, ಚಂದು ಪರ್ನಾಕರ, ಅಪ್ಪು ಬಿಜ್ಜರಗಿ, ರಾಘು ಬಂಗೆನ್ನವರ್‌, ಮಾಳು ಟೋಪಣಗೋಳ, ಗುಂಡು ನಾಯಕ, ಹರೀಶ ಅರ್ದಾಊರ, ಆಕಾಶ ಬಜಂತ್ರಿ, ಸಂತೋಷ ಕಾಂಬಳೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ