ಆ್ಯಪ್ನಗರ

ರಾತ್ರಿ 10 ಗಂಟೆಗೆ ಧಾಬಾ ಬಂದ್‌ ಮಾಡಲು ಮನವಿ

ಹಿರೇಬಾಗೇವಾಡಿ: ಧಾಬಾಗಳಲ್ಲಿಪದೇ ಪದೆ ಗಲಾಟೆ ನಡೆಯುತ್ತಿರುವ ...

Vijaya Karnataka 27 Dec 2019, 5:00 am
ಹಿರೇಬಾಗೇವಾಡಿ: ಧಾಬಾಗಳಲ್ಲಿಪದೇ ಪದೆ ಗಲಾಟೆ ನಡೆಯುತ್ತಿರುವ ಹಿನ್ನೆಲೆಯಲ್ಲಿರಾತ್ರಿ 10 ಗಂಟೆಯ ನಂತರ ಧಾಬಾ, ಹೊಟೇಲ್‌ಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು ಎಂದು ಗುರುವಾರ ಹಿರೇಬಾಗೇವಾಡಿ ಠಾಣೆಗೆ ಭೇಟಿ ನೀಡಿದ ಸ್ಥಳೀಯರು ಒತ್ತಾಯಿಸಿದರು.
Vijaya Karnataka Web memorandum for closing dhabas at 10pm
ರಾತ್ರಿ 10 ಗಂಟೆಗೆ ಧಾಬಾ ಬಂದ್‌ ಮಾಡಲು ಮನವಿ


ತಡರಾತ್ರಿ ವರೆಗೂ ಧಾಬಾಗಳು ತೆರೆದು ಇರುವುದರಿಂದ ಅಲ್ಲಿಸೇರಿದ ಜನ ಗಲಾಟೆ ಮಾಡುತ್ತಾರೆ. ಈಚೆಗೆ ಕಳ್ಳತನದ ಪ್ರಕರಣಗಳೂ ಹೆಚ್ಚಿವೆ. ಕಳ್ಳರು ಧಾಬಾಗಳಲ್ಲಿಗ್ರಾಹಕರಂತೆ ಬಂದು ಕಳ್ಳತನ ಮಾಡುವ ಸಾಧ್ಯತೆಯಿದೆ. ಹೊರಗಿನಿಂದ ಬರುವ ಜನರಿಂದ ಧಾಬಾಗಳಲ್ಲಿಗಲಾಟೆಯಾಗುತ್ತದೆ ಎಂದು ಗಮನ ಸೆಳೆದರು. ಪಿಎಸ್‌ಐ ಅಯೂಬಖಾನ ಪಠಾಣ ಪ್ರತಿಕ್ರಿಯಿಸಿ, ಧಾಬಾ ಮತ್ತು ಕೈಗಾಡಿ ಅಂಗಡಿಗಳನ್ನು ರಾತ್ರಿ 10 ಗಂಟೆಗೆ ಬಂದ್‌ ಮಾಡಲು ಸೂಚಿಸಲಾಗುವುದು ಎಂದರು. ಸಿಪಿಐ ಎನ್‌.ಎನ್‌.ಅಂಬಿಗೇರ ಮಾತನಾಡಿ, ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲರೂ ಸಹಕಾರ ನೀಡಬೇಕು ಎಂದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಿ.ಸಿ. ಪಾಟೀಲ, ಪ್ರಶಾಂತ ದೇಸಾಯಿ, ಕಾದ್ರಿ ದರ್ಗಾದ ಅಶ್ರಫ್‌ ಅಜ್ಜ, ಗ್ರಾಮ ಪಂಚಾಯಿತಿ ಸದಸ್ಯ ಗೌಸಮೋದ್ದೀನ್‌ ಜಾಲಿಕೊಪ್ಪ, ಬಸನಗೌಡ ಪಾಟೀಲ, ಅನಿಲ ಪಾಟೀಲ, ನಿಂಗಪ್ಪ ತಳವಾರ, ಮಹಾಂತೇಶ ಹಂಚಿನಮನಿ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ