ಆ್ಯಪ್ನಗರ

ನಿಪ್ಪಾಣಿಯಲ್ಲಿ ಅಪರಾಧ ಪ್ರಕರಣಗಳ ನಿಗ್ರಹಕ್ಕೆ ಶಾಸಕಿ ಸೂಚನೆ

ಯಕ್ಸಂಬಾ : ನಿಪ್ಪಾಣಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣ ಹಾಗೂ ಅಪರಾಧಗಳ ಪ್ರಮಾಣ ಹೆಚ್ಚಾಗುತ್ತಿದ್ದು, ಅವುಗಳ ಮೇಲಿನ ...

Vijaya Karnataka 24 Oct 2018, 5:00 am
ಯಕ್ಸಂಬಾ : ನಿಪ್ಪಾಣಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣ ಹಾಗೂ ಅಪರಾಧಗಳ ಪ್ರಮಾಣ ಹೆಚ್ಚಾಗುತ್ತಿದ್ದು, ಅವುಗಳ ಮೇಲಿನ ನಿಯಂತ್ರಣಕ್ಕೆ ಪೊಲೀಸ್‌ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು. ತಪ್ಪಿತಸ್ಥರ ಮೆಲೆ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೆಕೆಂದು ಶಾಸಕಿ ಶಶಿಕಲಾ ಜೊಲ್ಲೆ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.
Vijaya Karnataka Web BEL-23EXA3


ನಿಪ್ಪಾಣಿಯ ಸ್ಥಳೀಯ ಶಾಸಕರ ಕಾರ್ಯಾಲಯದಲ್ಲಿ ನಿಪ್ಪಾಣಿ ನಗರದಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕರೆದ ಸಭೆಯಲ್ಲಿ ಪೊಲೀಸ್‌ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಅವರು ಇತ್ತೀಚೆಗೆ ನಿಪ್ಪಾಣಿ ನಗರದ ಮೂರು ಕಡೆಗಳಲ್ಲಿ ಲಕ್ಷಾಂತರ ರೂ. ಸಾಮಗ್ರಿಗಳನ್ನು ಕಳುವು ಮಾಡಲಾಗಿದೆ. ಇಂಥ ಪ್ರಕರಣಗಳಿಗೆ ಕಡಿವಾಣ ಹಾಕಬೇಕಿದೆ. ಅದೇ ರೀತಿ ನಿಪ್ಪಾಣಿ ನಗರದಲ್ಲಿನ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಯೋಗ್ಯ ರೀತಿಯಲ್ಲಿ ನಿಯೋಜನೆ ಕೈಗೊಂಡು ಸೂಕ್ತ ಕ್ರಮ ಜರುಗಿಸಬೇಕೆಂದು ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ನಗರ ಪೊಲೀಸ್‌ ಅಧಿಕಾರಿ ಸಂತೋಷ ಸತ್ಯನಾಯಿಕ, ನಗರ ಪೊಲೀಸ್‌ ಠಾಣೆಯ ಉಪ ನಿರೀಕ್ಷ ಕ ಹೆಚ್‌.ಡಿ. ಮುಲ್ಲಾ, ಬಸವೇಶ್ವರ ವೃತ್ತ ಪೊಲೀಸ್‌ ಠಾಣೆಯ ಉಪನಿರೀಕ್ಷ ಕ ಎ.ಕೆ. ನದಾಫ್‌ ನಗರಸೇವಕರಾದ ಜಯವಂತ ಭಾಟಲೆ, ವಿನಾಯಕ ವಡೆ, ರಾಜು ಗುಂಡೇಶಾ, ಸದ್ದಾಂ ನಾಗಾರ್ಜಿ, ಸಂತೋಷ ಸಾಂಗಾವಕರ, ನಗರ ಸೇವಕಿಯರಾದ ಸೋನಲ್‌ ಕೋಠಾಡಿಯಾ, ನೀತಾ ಬಾಗಡಿ, ದೀಪಾಲಿ ಗಿರಿ, ಪ್ರಭಾವತಿ ಸೂರ್ಯವಂಶಿ, ರಂಜನಾ ಇಂಗವಲೆ, ಸುಜಾತಾ ಕದಮ, ಉಪಾಸನಾ ಗಾರವೆ, ಅರುಣಾ ಮುದುಕುಡೆ, ರಾಣಿ ಶೇಲಾರ್‌, ಕಾವೇರಿ ಮಿರ್ಜೆ, ಆಶಾ ಟವಳೆ ಹಾಗೂ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ