ಬೆಳಗಾವಿ: ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಈಗ ಡಬಲ್ ಖುಷಿಯಲ್ಲಿದ್ದಾರೆ. ಒಂದು ಕಡೆ ಮೊದಲ ಬಾರಿಗೆ ಸಚಿವ ಸ್ಥಾನ ಒಲಿದು ಬಂದಿದ್ದರೆ, ಮತ್ತೊಂದು ಕಡೆ ಅಜ್ಜಿಯೂ ಆಗಿದ್ದಾರೆ. ಮಂತ್ರಿಗಿರಿ ಸಿಕ್ಕ ದಿನವೇ ಲಕ್ಷ್ಮೀ ಹೆಬ್ಬಾಳ್ಕರ್ ಮನೆಗೆ ಮೊಮ್ಮಗಳ ಆಗಮನವಾಗಿದ್ದು, ಡಬಲ್ ಧಮಾಕಾ ಎಂದೇ ಹೇಳಬಹುದು.
ಇದೇ ಮೊದಲ ಬಾರಿಗೆ ಲಕ್ಷ್ಮೀ ಹೆಬ್ಬಾಳ್ಕರ್ಗೆ ಸಚಿವ ಸ್ಥಾನ ಒಲಿದಿದೆ. ಸತತ ಎರಡು ಬಾರಿ ಶಾಸಕಿಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಇರುವ ಏಕೈಕ ಮಹಿಳೆಯಾಗಿದ್ದಾರೆ. ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಸ್ವೀಕರಿಸಿರುವ ಲಕ್ಷ್ಮೀ ಹೆಬ್ಬಾಳ್ಕರ್ ಮನೆಯಲ್ಲಿ ಈಗ ಎರಡೆರಡು ಸಂಭ್ರಮ. ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಹಾಗೂ ಸೊಸೆ ಹಿತಾಗೆ ಶುಕ್ರವಾರ ರಾತ್ರಿ ಹೆಣ್ಣುಮಗು ಜನಿಸಿದೆ. ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಹಿತಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹೀಗಾಗಿ ಹೆಬ್ಬಾಳ್ಕರ್ ಡಬಲ್ ಖುಷಿಯಲ್ಲಿದ್ದಾರೆ. ನೂತನ ಸಚಿವರ ಪ್ರಮಾಣ ವಚನ ಹಿನ್ನೆಲೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ತಾವು ಅಜ್ಜಿ ಆಗಿರುವ ವಿಚಾರವನ್ನು ಬಹಿರಂಗಪಡಿಸಿದರು. ನನಗೆ ಇಂದು ಡಬಲ್ ಧಮಾಕ ಹೊಡೆದಿದೆ. ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದೇನೆ. ಅದರ ಜತೆಗೆ ನನಗೆ ಮೊಮ್ಮಗಳು ಹುಟ್ಟಿದ್ದಾಳೆ, ಮನೆಗೆ ಮಹಾಲಕ್ಷ್ಮಿ ಬಂದಿದ್ದಾಳೆ ಎಂದು ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ಲಕ್ಷ್ಮೀ ಹೆಬ್ಬಾಳ್ಕರ್ಗೆ ಸಚಿವ ಸ್ಥಾನ ಒಲಿದಿದೆ. ಸತತ ಎರಡು ಬಾರಿ ಶಾಸಕಿಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಇರುವ ಏಕೈಕ ಮಹಿಳೆಯಾಗಿದ್ದಾರೆ. ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಸ್ವೀಕರಿಸಿರುವ ಲಕ್ಷ್ಮೀ ಹೆಬ್ಬಾಳ್ಕರ್ ಮನೆಯಲ್ಲಿ ಈಗ ಎರಡೆರಡು ಸಂಭ್ರಮ. ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಹಾಗೂ ಸೊಸೆ ಹಿತಾಗೆ ಶುಕ್ರವಾರ ರಾತ್ರಿ ಹೆಣ್ಣುಮಗು ಜನಿಸಿದೆ. ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಹಿತಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹೀಗಾಗಿ ಹೆಬ್ಬಾಳ್ಕರ್ ಡಬಲ್ ಖುಷಿಯಲ್ಲಿದ್ದಾರೆ.