ಆ್ಯಪ್ನಗರ

ಸಚಿವ ಸ್ಥಾನ; ತಂದೆ ಪರ ಪುತ್ರಿ ಬ್ಯಾಟಿಂಗ್‌

ಬೆಳಗಾವಿ: ''ರಾಮಲಿಂಗಾ ರೆಡ್ಡಿ ಅವರು ಐದು ಬಾರಿ ಸಚಿವರಾಗಿ ಕೆಲಸ ಮಾಡಿದ್ದು, ಏಳು ಬಾರಿ ಶಾಸಕರಾಗಿ ...

Vijaya Karnataka 20 Dec 2018, 5:00 am
ಬೆಳಗಾವಿ : ''ರಾಮಲಿಂಗಾ ರೆಡ್ಡಿ ಅವರು ಐದು ಬಾರಿ ಸಚಿವರಾಗಿ ಕೆಲಸ ಮಾಡಿದ್ದು, ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದ್ದರಿಂದ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅವರಿಗೆ ಸಚಿವ ಸ್ಥಾನ ನೀಡಬೇಕು'' ಎಂದು ಶಾಸಕಿ ಸೌಮ್ಯಾ ರೆಡ್ಡಿ ಒತ್ತಾಯಿಸಿದ್ದಾರೆ.
Vijaya Karnataka Web ministry daughters bating in favor of dad
ಸಚಿವ ಸ್ಥಾನ; ತಂದೆ ಪರ ಪುತ್ರಿ ಬ್ಯಾಟಿಂಗ್‌


ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ನಾನು ರಾಮಲಿಂಗಾ ರೆಡ್ಡಿ ಅವರ ಮಗಳಾಗಿ ಈ ಮಾತು ಹೇಳುತ್ತಿಲ್ಲ. ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತೆಯಾಗಿ ಹೇಳುತ್ತಿದ್ದೇನೆ'' ಎಂದರು.

ಸಿಎಲ್‌ಪಿ ಸಭೆಗೆ ಗೈರಾಗಿರುವ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ ಸೌಮ್ಯಾ ರೆಡ್ಡಿ, ''ಅನ್ಯ ಕೆಲಸದ ನಿಮಿತ್ತ ನಾನು ಸಭೆಗೆ ಹಾಜರಾಗಿಲ್ಲ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವೆಲ್ಲ ಬಂದಾಗಿದ್ದೇವೆ'' ಎಂದರು.

''ವಿಧಾನಸಭೆಯಲ್ಲಿ ಮಹಿಳೆಯರನ್ನು ಹುಡುಕುವ ಪರಿಸ್ಥಿತಿ ಇದೆ. ಮಹಿಳೆಯರಿಗೂ ಎಲ್ಲ ರಂಗದಲ್ಲಿ ಕೆಲಸ ಮಾಡುವ ಅರ್ಹತೆ ಇದೆ. ನಮಗೂ ಅವಕಾಶ ನೀಡಬೇಕು. 2014ರ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಶೇ.33ರಷ್ಟು ಮಹಿಳಾ ಮೀಸಲಾತಿ ಜಾರಿಗೆ ತರುವುದಾಗಿ ತಿಳಿಸಿತ್ತು. ಆದರೆ, ಇದುವರೆಗೆ ಜಾರಿಗೊಳಿಲ್ಲ'' ಎಂದು ಶಾಸಕಿ ಸೌಮ್ಯಾಅಸಮಾಧಾನ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ