ಆ್ಯಪ್ನಗರ

ಕಿತ್ತೂರಿನಲ್ಲಿ ಬಸ್‌ ಡಿಪೊ ನಿರ್ಮಾಣಕ್ಕೆ ಸಚಿವರಿಗೆ ಶಾಸಕರ ಮನವಿ

ಚನ್ನಮ್ಮನ ಕಿತ್ತೂರು : ರಾಜ್ಯ ಸಾರಿಗೆ ಸಚಿವ ಡಿಸಿ...

Vijaya Karnataka 11 Dec 2018, 5:00 am
ಚನ್ನಮ್ಮನ ಕಿತ್ತೂರು : ರಾಜ್ಯ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಸ್ಥಳೀಯ ಕೇಂದ್ರೀಯ ಬಸ್‌ ನಿಲ್ದಾಣಕ್ಕೆ ಭಾನುವಾರ ರಾತ್ರಿ ದಿಢೀರನೆ ಭೇಟಿ ನೀಡಿ ಸಮಸ್ಯೆ-ಸೌಲಭ್ಯಗಳ ಕುರಿತು ವೀಕ್ಷ ಣೆ ನಡೆಸಿದರು.
Vijaya Karnataka Web BEL-10 KITTUR PHOTO 2


ಈ ವೇಳೆ ಶಾಸಕ ಮಹಾಂತೇಶ ದೊಡಗೌಡರ ಪಟ್ಟಣದಲ್ಲಿ ಬಸ್‌ ಡಿಪೊ ನಿರ್ಮಾಣಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿದರು. ''ಕಿತ್ತೂರಿನಲ್ಲಿ ಬಸ್‌ ಡಿಪೊ ನಿರ್ಮಾಣಗೊಂಡರೆ ಶೇ.90ರಷ್ಟು ಸಮಸ್ಯೆಗಳು ಪರಿಹಾರವಾದಂತೆ. ಇಲ್ಲಿ ಬಸ್‌ಗಳು ದುರಸ್ತಿಗೆ ಬಂದರೆ ಬೆಳಗಾವಿ, ಖಾನಾಪುರ ಅಥವಾ ಬೈಲಹೊಂಗಲದಿಂದ ಇಲಾಖೆಯ ಮೇಸ್ತ್ರಿಗಳು ಬಂದು ರಿಪೇರಿ ಮಾಡಬೇಕಿದೆ. ಗ್ರಾಮೀಣ ಪ್ರದೇಶಗಳಿಗೆ ಸರಿಯಾಗಿ ಬಸ್‌ ಸಂಚಾರ ಇಲ್ಲದ್ದರಿಂದ ಜನರು ಖಾಸಗಿ ವಾಹನಗಳನ್ನು ಅವಲಂಬಿಸಬೇಕಾಗಿದೆ. ವೇಳೆಗೆ ಸರಿಯಾಗಿ ಗ್ರಾಮೀಣ ಬಸ್‌ಗಳು ಸಂಚರಿಸುವುದಿಲ್ಲ. ಕೋಟೆ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಅನುಕೂಲಕರವಾಗುವ ರೀತಿಯಲ್ಲಿ ಬಸ್‌ ಸಂಚಾರವಿಲ್ಲದಂತಾಗಿದೆ'', ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಮನವಿ ಸ್ವೀಕರಿಸಿದ ಸಚಿವರು ಸಾರಿಗೆ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ರಾತ್ರಿ 8 ಗಂಟೆ ಸುಮಾರಿಗೆ ಬಸ್‌ ನಿಲ್ದಾಣಕ್ಕೆ ಭೇಟಿ ನೀಡಿದ ಸಚಿವರು ಪ್ರಯಾಣಿಕರ ಜತೆ ಮಾತನಾಡಿದರು. ಗ್ರಾಮೀಣ ಭಾಗದ ಬಸ್‌ ಸೌಕರ್ಯ ಹಾಗೂ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಹೋಗಲು ತೊಂದರೆಯಾಗುತ್ತಿದ್ದುದರ ಬಗ್ಗೆ ಶಾಸಕ ಮಹಾಂತೇಶ ದೊಡಗೌಡರ ಹಾಗೂ ಸಾರಿಗೆ ಅಧಿಕಾರಗಳ ಜತೆ ಚರ್ಚೆ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ