ಆ್ಯಪ್ನಗರ

ಚಿಕ್ಕೋಡಿಯಲ್ಲಿ ಕೋವಿಡ್‌ ತಪಾಸಣೆ ಕೇಂದ್ರ ಆರಂಭಿಸಿ; ಸಚಿವ ಡಾ.ಕೆ.ಸುಧಾಕರ್‌ಗೆ ಶಾಸಕ ಗಣೇಶ್‌ ಹುಕ್ಕೇರಿ ಮನವಿ

ಬೆಳಗಾವಿ: ಚಿಕ್ಕೋಡಿ ಪಟ್ಟಣದಲ್ಲಿಕೋವಿಡ್‌-19 ಗಂಟಲು ದ್ರವ ...

Vijaya Karnataka 22 Nov 2020, 5:00 am
ಬೆಳಗಾವಿ: ಚಿಕ್ಕೋಡಿ ಪಟ್ಟಣದಲ್ಲಿಕೋವಿಡ್‌-19 ಗಂಟಲು ದ್ರವ ತಪಾಸಣಾ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ಶಾಸಕ ಗಣೇಶ್‌ ಹುಕ್ಕೇರಿ ಅವರು ಶನಿವಾರ ನಗರದಲ್ಲಿಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರಿಗೆ ಮನವಿ ಸಲ್ಲಿಸಿದರು.
Vijaya Karnataka Web 21GANESH073258
ಚಿಕ್ಕೋಡಿ ಭಾಗದಲ್ಲಿಕೋವಿಡ್‌ ಟೆಸ್ಟಿಂಗ್‌ ಕೇಂದ್ರ ಸ್ಥಾಪಿಸುವಂತೆ ಒತ್ತಾಯಿಸಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ ಅವರಿಗೆ ಶಾಸಕ ಗಣೇಶ ಹುಕ್ಕೇರಿ ಮನವಿ ಸಲ್ಲಿಸಿದರು.


ಮಹಾರಾಷ್ಟ್ರದ ಗಡಿ ಹಂಚಿಕೊಂಡಿರುವುದರಿಂದ ಚಿಕ್ಕೋಡಿ ಭಾಗದಲ್ಲಿಕೋವಿಡ್‌ ಟೆಸ್ಟಿಂಗ್‌ ಕೇಂದ್ರದ ಅವಶ್ಯ ಹೆಚ್ಚಿದೆ. ಚಿಕ್ಕೋಡಿ ಸೇರಿದಂತೆ ಉಪವಿಭಾಗದಲ್ಲಿನ ಜನರು ಮಹಾರಾಷ್ಟ್ರ ರಾಜ್ಯದೊಂದಿಗೆ ಹೆಚ್ಚಿನ ಸಂಪರ್ಕ ಹೊಂದಿದ್ದಾರೆ. ವ್ಯಾಪಾರ, ವಹಿವಾಟು ಹಾಗೂ ಕೌಟುಂಬಿಕ ಸಂಬಂಧ ಹೊಂದಿರುವುದರಿಂದ ಅಂತಾರಾಜ್ಯ ಸಂಚಾರ ಹೆಚ್ಚಾಗಿ ಕಂಡು ಬರುತ್ತದೆ. ವಿಜಯಪುರ, ಬಾಗಲಕೋಟ ಜಿಲ್ಲೆಗಳ ಕೂಲಿಕಾರ್ಮಿಕರೂ ಚಿಕ್ಕೋಡಿ ಮಾರ್ಗವಾಗಿ ಸಂಚರಿಸುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಸೋಂಕು ಪತ್ತೆ ಮಾಡಿದಷ್ಟು ಹರಡುವಿಕೆ ಮೇಲೆ ನಿಯಂತ್ರಣ ಕಾಯ್ದುಕೊಳ್ಳಬಹುದಾಗಿದೆ.

ರಾಜ್ಯದ ದೊಡ್ಡ ಜಿಲ್ಲೆಬೆಳಗಾವಿಯಲ್ಲಿಮಾತ್ರ ಪ್ರಯೋಗಾಲಯ ಇರುವುದರಿಂದ ಪರೀಕ್ಷಾ ಫಲಿತಾಂಶ ವಿಳಂಬವಾಗುತ್ತಿದೆ. ಹಾಗಾಗಿ ಚಿಕ್ಕೋಡಿ ಭಾಗದಲ್ಲಿಕೋವಿಡ್‌ ತಪಾಸಣೆ ಕೇಂದ್ರ ಆರಂಭಿಸಬೇಕು. ಈ ಬಗ್ಗೆ ಹಿಂದಿನ ಆರೋಗ್ಯ ಸಚಿವ ಶ್ರೀರಾಮುಲು ಅವರಿಗೂ ಮನವಿ ಸಲ್ಲಿಸಲಾಗಿತ್ತು ಎಂದು ಗಣೇಶ ಹುಕ್ಕೇರಿ ಸಚಿವರ ಗಮನ ಸೆಳೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ