ಆ್ಯಪ್ನಗರ

ಸಿಎಂ ಹೇಳಿಕೆಗೆ ಶಾಸಕ ರಾಜೀವ್‌ ಖಂಡನೆ

ಬೆಳಗಾವಿ: ಮಠಾಧೀಶರು ರಾಜಕೀಯದಲ್ಲಿ ಪಾಲ್ಗೊಳ್ಳಬಾರದು ಎಂದು ಸಿಎಂ ಕುಮಾರ ಸ್ವಾಮೀಜಿ ಅವರು ನೀಡಿರುವ ಹೇಳಿಕೆಯನ್ನು ಕುಡಚಿ ಶಾಸಕ ಪಿ ರಾಜೀವ ಖಂಡಿಸಿದ್ದಾರೆ...

Vijaya Karnataka 27 May 2018, 5:00 am
ಬೆಳಗಾವಿ: ಮಠಾಧೀಶರು ರಾಜಕೀಯದಲ್ಲಿ ಪಾಲ್ಗೊಳ್ಳಬಾರದು ಎಂದು ಸಿಎಂ ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆಯನ್ನು ಕುಡಚಿ ಶಾಸಕ ಪಿ.ರಾಜೀವ ಖಂಡಿಸಿದ್ದಾರೆ.
Vijaya Karnataka Web mla rajiv condamned for cms statement
ಸಿಎಂ ಹೇಳಿಕೆಗೆ ಶಾಸಕ ರಾಜೀವ್‌ ಖಂಡನೆ


ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿ ಹುಕ್ಕೇರಿ ಹಿರೇಮಠಕ್ಕೆ ಆಗಮಿಸಿ ಚಂದ್ರಶೇಖರ ಮಹಾಸ್ವಾಮಿಗಳ ದರ್ಶನ ಹಾಗೂ ಆಶೀರ್ವಾದ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ನಾನು ಮುಗಳಖೋಡದ ಮುರುಘರಾಜೇಂದ್ರ ಸ್ವಾಮೀಜಿ ಹಾಗೂ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳ ಆಶೀರ್ವಾದದಿಂದ ಎರಡನೇ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಹಾಗಾಗಿ ಅವರ ಆಶೀರ್ವಾದ ಪಡೆದು ಕ್ಷೇತ್ರದ ಅಭಿವೃದ್ಧಿಗೆ ತೆರಳುತ್ತೇನೆ'', ಎಂದರು.

''ಕುಮಾರಸ್ವಾಮಿಯವರು ನೈತಿಕತೆ ಇಲ್ಲದ ರಾಜಕಾರಣಿ. ಗುರುಗಳ ಸಂದೇಶಗಳನ್ನು ಪಾಲಿಸಿ ಸಮಾಜದಲ್ಲಿ ಪ್ರತಿಧ್ವನಿಸಬೇಕು. ಅದಕ್ಕಾಗಿ ಮುಖ್ಯಮಂತ್ರಿಗಳ ಹೇಳಿಕೆಯನ್ನು ಖಂಡಿಸುತ್ತೇನೆ. ಮೌಲ್ಯವಿಲ್ಲದ ರಾಜಕಾರಣಕ್ಕೆ ಅರ್ಥವಿಲ್ಲ . ಅಧಿಕಾರ ಶಾಶ್ವತವಲ್ಲ. ಅದರ ಮೌಲ್ಯ ಶಾಶ್ವತ'', ಎಂದರು.

ಚಂದರಗಿಯ ವೀರಭದ್ರೇಶ್ವರ ಮಹಾಸ್ವಾಮಿಗಳು , ಗುಂಡು ಶಾಸ್ತ್ರಿಗಳು, ಬೀರಪ್ಪಾ ಸಾರಥಿಗಳು ಹಾಗೂ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ