ಆ್ಯಪ್ನಗರ

ಮೃತನ ಕುಟುಂಬಕ್ಕೆ ಶಾಸಕ ಯಾದವಾಡ ಸಾಂತ್ವನ

ಸುರೇಬಾನ : ಸಿಡಿಲು ಬಡಿದು ಸೋಮವಾರ ಮೃತಪಟ್ಟಿದ್ದ ಸುರೇಬಾನ ಸಮೀಪದ ಚಿಕ್ಕೊಪ್ಪ ಎಸ್‌ಕೆ ಗ್ರಾಮದ ಬಾಲಪ್ಪ ನಾಗಪ್ಪ ಕಳಸದ ಅವರ ಮನೆಗೆ ಮಂಗಳವಾರ ಭೇಟಿ ನೀಡಿದ ಶಾಸಕ ...

Vijaya Karnataka 21 Nov 2018, 5:00 am
ಸುರೇಬಾನ : ಸಿಡಿಲು ಬಡಿದು ಸೋಮವಾರ ಮೃತಪಟ್ಟಿದ್ದ ಸುರೇಬಾನ ಸಮೀಪದ ಚಿಕ್ಕೊಪ್ಪ ಎಸ್‌ಕೆ ಗ್ರಾಮದ ಬಾಲಪ್ಪ ನಾಗಪ್ಪ ಕಳಸದ ಅವರ ಮನೆಗೆ ಮಂಗಳವಾರ ಭೇಟಿ ನೀಡಿದ ಶಾಸಕ ಮಹಾದೇವಪ್ಪ ಯಾದವಾಡ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
Vijaya Karnataka Web BEL-20 SBN 1


ಪ್ರಕೃತಿಯಲ್ಲಿ ನಡೆಯುವ ವೈಪರಿತ್ಯದಿಂದಾಗುವ ಅವಘಡಕ್ಕೆ ಸರಕಾರದಿಂದ ಸುಮಾರು 4 ಲಕ್ಷ , ಜಿಲ್ಲಾಧಿಕಾರಿಗಳ ನಿಧಿಯಿಂದ 1 ಲಕ್ಷ ಸೇರಿದಂತೆ ಒಟ್ಟು ರೂ. 5 ಲಕ್ಷ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ ಅವರು, ಅವಿವಾಹಿತ ಯುವಕ ಬಲಿಯಾಗಿದ್ದು ಕುಟುಂಬಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಮೃತನ ಕುಟುಂಬಕ್ಕೆ ತಲುಪಿಸುವಲ್ಲಿ ಅಧಿಕಾರಿಗಳು ಗಮನ ಹರಿಸಬೇಕು. ಪರಿಹಾರದಿಂದ ಬಂದ ಹಣವನ್ನು ಮೃತನ ತಾಯಿಯ ಭವಿಷ್ಯತ್ತಿನ ದೃಷ್ಟಿಯಿಂದ ಉಪಯುಕ್ತವಾಗುವ ನಿಟ್ಟಿನಲ್ಲಿ ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ರಾಮದುರ್ಗ ಗ್ರೇಡ್‌-2 ತಹಸೀಲ್ದಾರ್‌ ವಿಜಯಕುಮಾರ ಕಡಕೋಳ, ರಾಮದುರ್ಗ ಸಹಾಯಕ ಕೃಷಿ ನಿರ್ದೇಶಕ ಎಸ್‌.ಎಫ್‌. ಬೆಳವಟಗಿ, ಜಿಪಂ ಸದಸ್ಯೆ ಶಿವಕ್ಕ ಬೆಳವಡಿ, ಎಪಿಎಂಸಿ ಸದಸ್ಯ ದ್ಯಾವಪ್ಪ ಬೆಳವಡಿ, ಬಾಬು ವಾಲಿ, ಮಹಾದೇವ ಲಕ್ಕಣ್ಣವರ, ರವಿ ಅಜ್ಜಿ, ಚಿನ್ನಪ್ಪ ಮುಳ್ಳೂರ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ