ಆ್ಯಪ್ನಗರ

ಪ್ರವಾಸ ಹೊರಟ ಅಧಿಕಾರಿಗಳು, ಶಾಸಕರ ದಂಡು

ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಆರಂಭವಾಗಿರುವ ಚಳಿಗಾಲದ...

Vijaya Karnataka 16 Dec 2018, 5:00 am
ಬೆಳಗಾವಿ : ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಆರಂಭವಾಗಿರುವ ಚಳಿಗಾಲದ ಅಧಿವೇಶನದ ಮಧ್ಯದ ಎರಡು ದಿನಗಳ ಬಿಡುವು ಕಳೆಯಲು ಶಾಸಕ, ಸಚಿವರು ಮತ್ತು ಹಿರಿಯ ಅಧಿಕಾರಿಗಳ ದಂಡು ರಾಜ್ಯ, ಹೊರ ರಾಜ್ಯದ ಹಲವೆಡೆ ಪ್ರವಾಸ ನಡೆಸಿವೆ.
Vijaya Karnataka Web BLG-1512-2-52-15PRAMOD3


ಶನಿವಾರ, ಭಾನುವಾರ ಅಧಿವೇಶನಕ್ಕೆ ಬಿಡುವು ಇದ್ದು, ಸೋಮವಾರದಿಂದ ಮತ್ತೆ ಶುರುವಾಗಲಿದೆ. ಹಾಗಾಗಿ ಶನಿವಾರ ಬೆಳಗ್ಗೆಯೇ ಶಾಸಕರ ತಂಡವೊಂದು ಗೋವಾಕ್ಕೆ ಹೋಗಿದೆ. ಕಾರ್ಮಿಕ ಇಲಾಖೆ ಸಚಿವ ವೆಂಕಟರಮಣಪ್ಪ ಅವರು ತಮ್ಮ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಶನಿವಾರ ಬೆಳಗ್ಗೆ ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ಹೋಗಿ ದೇವಿ ದರ್ಶನ ಪಡೆದು ಸಂಜೆ ಬೆಳಗಾವಿಗೆ ಮರಳಿದ್ದಾರೆ.

ಅವರ ಜತೆಯಲ್ಲಿಯೇ ವಿಧಾನಪರಿಷತ್‌ ಸದಸ್ಯರಾದ ಸಂದೇಶ್‌ ನಾಗರಾಜ್‌, ತೇಜಸ್ವಿನಿ ಗೌಡ ಅವರು ಕೂಡ ದೇವಿಯ ಸನ್ನಿಧಾನಕ್ಕೆ ಭೇಟಿ ನೀಡಿದರು. ತೇಜಸ್ವಿನಿ ಗೌಡ ಅವರ ಜತೆಗೆ ವಿಧಾನ ಪರಿಷತ್‌ ಕಾರ್ಯದರ್ಶಿ ಮಹಾಲಕ್ಷ್ಮಿ ಹಾಗೂ ಇನ್ನೊಬ್ಬ ಮಹಿಳಾ ಅಧಿಕಾರಿ ಇದ್ದರು. ಇವರೆಲ್ಲರ ಹೊರತಾಗಿ ವಿವಿಧ ಇಲಾಖೆಗಳ ಕಾರ್ಯದರ್ಶಿಗಳು ಸೇರಿದಂತೆ ಅನೇಕ ಅಧಿಕಾರಿಗಳು ತಂಡೋಪ ತಂಡವಾಗಿ ಬಂದು ದೇವಿಯ ದರ್ಶನ ಪಡೆದಿದ್ದಾರೆ. ದೇವಸ್ಥಾನದ ಆಡಳಿತಾಧಿಕಾರಿ ರವಿ ಕೊಟಾರಗಸ್ತಿ ಎಲ್ಲರನ್ನೂ ಸತ್ಕರಿಸಿದರು.

ಅಧಿವೇಶನಕ್ಕಾಗಿ ದೂರದ ಊರುಗಳಿಂದ ಬಂದ ಪತ್ರಕರ್ತರಿಗಾಗಿ ಶನಿವಾರ ಮತ್ತು ಭಾನುವಾರ ಸವದತ್ತಿ ಯಲ್ಲಮ್ಮ, ಕೊಲ್ಲಾಪುರ ಮಹಾಲಕ್ಷ್ಮೇ ದೇವಸ್ಥಾನ ಸೇರಿ ಕೆಲ ಪ್ರದೇಶಗಳಿಗೆ ವಾರ್ತಾ ಇಲಾಖೆ ಅಧ್ಯಯನ ಪ್ರವಾಸ ಆಯೋಜಿಸಿದೆ.

ಬಹುತೇಕರು ತವರಿನತ್ತ : ಅಧಿವೇಶನಕ್ಕಾಗಿ ಬಂದಿದ್ದ ಬಹುತೇಕ ಶಾಸಕ, ಸಚಿವರು ಎರಡು ದಿನಗಳ ಬಿಡುವು ಕಳೆಯಲು ತವರಿಗೆ ಮರಳಿದ್ದಾರೆ. ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ, ಕಾರ್ಕಳ ಶಾಸಕ ಸುನೀಲ ಕುಮಾರ, ಟಿ. ನರಸೀಪುರ ಶಾಸಕ ಅಶ್ವಿನ್‌ಕುಮಾರ ಸೇರಿದಂತೆ ಒಂದಷ್ಟು ಶಾಸಕರು ಮಾತ್ರ ಬೆಳಗಾವಿಯಲ್ಲಿ ಉಳಿದುಕೊಂಡಿದ್ದಾರೆ. ಕೆಲವರು ಕೊಲ್ಲಾಪುರ ಮಹಾಲಕ್ಷ್ಮೇ ದೇವಸ್ಥಾನಕ್ಕೂ ಹೋಗಿದ್ದಾರೆ ಎಂದು ಗೊತ್ತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ