ಆ್ಯಪ್ನಗರ

ಕುರಿಗಾರರಿಗೆ ಸಂಚಾರಿ ಟೆಂಟ್‌, ಪರಿಕರ ವಿತರಣೆ

ಯಮಕನಮರಡಿ: ನೆರೆ ಸಂತ್ರಸ್ತರಿಗೆ ರಾಜ್ಯ ಸರಕಾರ ಘೋಷಿಸಿರುವ 10 ಸಾವಿರ ರೂ. ...

Vijaya Karnataka 15 Sep 2019, 5:00 am
ಯಮಕನಮರಡಿ: ನೆರೆ ಸಂತ್ರಸ್ತರಿಗೆ ರಾಜ್ಯ ಸರಕಾರ ಘೋಷಿಸಿರುವ 10 ಸಾವಿರ ರೂ. ತಾತ್ಕಾಲಿಕ ಪರಿಹಾರದ ಹಣ ಬಹಳಷ್ಟು ಕುಟುಂಬಗಳಿಗೆ ತಲುಪಿಲ್ಲ. ಈ ಬಗ್ಗೆ ಅಧಿಕಾರಿ ವರ್ಗ ಹೆಚ್ಚಿನ ಮುತುವರ್ಜಿ ವಹಿಸಿ ಪರಿಹಾರ ನೀಡಲು ಮುಂದಾಗಬೇಕು ಎಂದು ಪಾಶ್ಚಾಪುರ ಜಿಪಂ ಸದಸ್ಯ ಮಂಜುನಾಥ ಪಾಟೀಲ ಆಗ್ರಹಿಸಿದರು.
Vijaya Karnataka Web 14YMD1_53


ಅವರು, ಶನಿವಾರ ಹುಕ್ಕೇರಿ ತಾಲೂಕಿನ ಬಗರನಾಳ ಗ್ರಾಮದಲ್ಲಿಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಯೋಗದಲ್ಲಿಪ್ರಸಕ್ತ ಸಾಲಿನ ವಲಸೆ, ಅರೆ ವಲಸೆ ಕುರಿಗಾರರಿಗೆ ಸಂಚಾರಿ ಟೆಂಟ್‌ ಮತ್ತು ಇನ್ನಿತರ ಪರಿಕರಗಳ ಕಿಟ್‌ಗಳ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವರ್ಷದ ಹನ್ನೆರಡೂ ತಿಂಗಳೂ ತಮ್ಮ ಮನೆಗಳನ್ನು ಬಿಟ್ಟು ರೈತರ ಹೊಲಗದ್ದೆಗಳಲ್ಲಿಜೀವನ ಕಳೆಯುವ ಕುರುಬ ಸಮಾಜದ ಕುಟುಂಬಗಳಿಗೆ ಸಿದ್ದರಾಮಯ್ಯ ಸರಕಾರ ಈ ಯೋಜನೆ ರೂಪಿಸಿತ್ತು. ಗ್ರಾಮ ಮಟ್ಟದ ಪ್ರತಿಯೊಬ್ಬ ಕುರಿಗಾರರು ಈ ಯೋಜನೆಯನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿಕರಗುಪ್ಪಿ ಹಾಗೂ ಹುನ್ನೂರಿನ ಫಲಾನುಭವಿಗಳಾದ ಪುಂಡಲೀಕ ಕಮತಿ, ಗಂಗಪ್ಪ ಪೂಜೇರಿ, ವಿಠ್ಠಲ ಗಡದಪೂಜೇರಿ, ಸಿದ್ದಪ್ಪಾ ಕಮತಿ ಅವರಿಗೆ ಕಿಟ್‌ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿಶಿಂದಿಹಟ್ಟಿ ಗ್ರಾಮದ ಲಕ್ಷಿತ್ರ್ಮೕದೇವಿ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ನಿಂಗಪ್ಪಾ ಪೂಜೇರಿ, ಸಿದ್ದಪ್ಪಾ ರಾಮಗಾನಹಟ್ಟಿ, ರಾಜು ನಾಯಿಕ, ಸಂಜು ಕಿಣಗಿ, ಕರೇಪ್ಪಾ ಹರಿಜನ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ