ಆ್ಯಪ್ನಗರ

ಬೆಳಗಾವಿಯಲ್ಲಿ ಇನ್ನಷ್ಟು ಪಂದ್ಯಗಳು ನಡೆಯಲಿ

ಬೆಳಗಾವಿ : ಇಲ್ಲಿನ ಕೆಎಸ್‌ಸಿಎ ಕ್ರಿಕೆಟ್‌ ಮೈದಾನದಲ್ಲಿ ಸೋಮವಾರ ನಡೆದ ಭಾರತ ಮತ್ತು ಶ್ರೀಲಂಕಾ ಎ ತಂಡಗಳ ...

Vijaya Karnataka 11 Jun 2019, 5:00 am
ಬೆಳಗಾವಿ : ಇಲ್ಲಿನ ಕೆಎಸ್‌ಸಿಎ ಕ್ರಿಕೆಟ್‌ ಮೈದಾನದಲ್ಲಿ ಸೋಮವಾರ ನಡೆದ ಭಾರತ ಮತ್ತು ಶ್ರೀಲಂಕಾ ಎ ತಂಡಗಳ ನಡುವಿನ ಮೂರನೇ ಒಂದು ದಿನದ ಪಂದ್ಯವನ್ನು ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ವೀಕ್ಷಿಸಿದರು.
Vijaya Karnataka Web BLG-1006-2-52-9KORE


ಈ ಸಂದರ್ಭದಲ್ಲಿ ಭಾರತ ಎ ತಂಡದ ಕೋಚ್‌ ರಾಹುಲ್‌ ದ್ರಾವಿಡ್‌ ಅವರನ್ನು ಭೇಟಿ ಮಾಡಿದ ಡಾ. ಪ್ರಭಾಕರ ಕೋರೆ, ಬೆಳಗಾವಿಯಲ್ಲಿ ಇನ್ನಷ್ಟು ಕ್ರೀಡಾಸಕ್ತಿ ಬೆಳೆಸುವ ನಿಟ್ಟಿನಲ್ಲಿ ಚರ್ಚಿಸಿದರು. ಬೆಳಗಾವಿಯಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಗೊಂಡಿರುವುದರಿಂದ ಸ್ಥಳೀಯ ಯುವಕರಿಗೆ ಅವಕಾಶದ ಬಾಗಿಲು ತೆರೆದಂತಾಗಿದೆ. ಯುವಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಇನ್ನಷ್ಟು ಪಂದ್ಯಾವಳಿ ಆಯೋಜನೆಯ ಅಗತ್ಯವಿದೆ ಎಂದು ಕೆಎಸ್‌ಸಿಎ ಸದಸ್ಯ ಅವಿನಾಶ ಪೋತದಾರ ಮತ್ತು ರಾಹುಲ್‌ ದ್ರಾವಿಡ ಅವರ ಗಮನ ಸೆಳೆದರು.

ದೇಸಿ ಸೇರಿದಂತೆ ಅಂತಾರಾಷ್ಟ್ರೀಯ ಪಂದ್ಯಾವಳಿ ಆಯೋಜನೆ ಹೆಚ್ಚಬೇಕು. ಈ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಡಾ.ಪ್ರಭಾಕರ ಕೋರೆ ಭರವಸೆ ನೀಡಿದರು.

ಐದು ಪಂದ್ಯಗಳ ಸರಣಿಯ ಮೂರನೇ ಪಂದ್ಯ ವೀಕ್ಷಣೆಗೆ ಪ್ರೇಕ್ಷಕರ ಸಂಖ್ಯೆ ಹೆಚ್ಚಿತ್ತು. ಸಾರ್ವಜನಿಕರಿಗಾಗಿ ಮೀಸಲಿಟ್ಟಿದ್ದ ಗ್ಯಾಲರಿಯಲ್ಲಿ ವಾದ್ಯಮೇಳದೊಂದಿಗೆ ಬಂದಿದ್ದ ಜನರು ಸಂಭ್ರಮಿಸಿದರು. ಫೋರ್‌, ಸಿಕ್ಸರ್‌ ಹೊಡೆದಾಗ ವಿಶೇಷ ಗ್ಯಾಲರಿಯಲ್ಲಿ ಕುಳಿತಿದ್ದ ನೂರಾರು ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿ ಆಟಗಾರರನ್ನು ಪ್ರೋತ್ಸಾಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ