ಆ್ಯಪ್ನಗರ

ಮೋಟಾರ ವಾಹನ ಕಾಯ್ದೆ ತಿದ್ದುಪಡಿ ವಾಪಸ್‌ಗೆ ಒತ್ತಾಯ

ಗೋಕಾಕ: ಮೋಟಾರ ವಾಹನ ಕಾಯ್ದೆ 1988ಕ್ಕೆ ತಿದ್ದುಪಡಿ ...

Vijaya Karnataka 20 Sep 2019, 5:00 am
ಗೋಕಾಕ: ಮೋಟಾರ ವಾಹನ ಕಾಯ್ದೆ 1988ಕ್ಕೆ ತಿದ್ದುಪಡಿ ಮಾಡಿದ್ದನ್ನು ಹಿಂಪಡೆಯುವಂತೆ ಒತ್ತಾಯಿಸಿ ಇಲ್ಲಿಯ ನ್ಯಾಯವಾದಿಗಳ ಸಂಘ ಗುರುವಾರ ತಹಸೀಲ್ದಾರ ಮುಖಾಂತರ ಪ್ರಧಾನಿ ಹಾಗೂ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿತು.
Vijaya Karnataka Web 19GOK2_53


'ಈ ತಿದ್ದುಪಡಿಯಿಂದ ವಾಹನ ಚಾಲಕರ ಚಾಲನಾ ಪರವಾನಗಿ ಪತ್ರ, ಇನ್ಸುರೆನ್ಸ್‌ ಪಾಲಿಸಿ, ವಾಹನದ ಹೊಗೆ ಪತ್ರ ಮತ್ತು ಇನ್ನಿತರ ವಿಷಯಗಳಲ್ಲಿಅತಿಯಾದ ದಂಡ ಹಾಗೂ ಶುಲ್ಕವನ್ನು ಸಾರ್ವಜನಿಕರಿಂದ ವಸೂಲಿ ಮಾಡುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಆರ್ಥಿಕ ಹೊರೆ ಹೆಚ್ಚಾಗುವುದರೊಂದಿಗೆ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಈ ತಿದ್ದುಪಡಿಯನ್ನು ಹಿಂಪಡೆಯಬೇಕು' ಎಂದು ಮನವಿಯಲ್ಲಿತಿಳಿಸಲಾಗಿದೆ.

ನ್ಯಾಯವಾದಿಗಳ ಸಂಘದ ಅಧ್ಯಕ್ಷ ಯು.ಬಿ.ಶಿಂಪಿ, ಪದಾಧಿಕಾರಿಗಳಾದ ಎಸ್‌.ಎಸ್‌.ಪಾಟೀಲ, ಜಿ.ಎಮ್‌.ಬಟ್ಟಿ, ಎಸ್‌.ಕೆ.ಹಿರಟ್ಟಿ, ಸದಸ್ಯರಾದ ಜಿ.ಎಸ್‌.ನಂದಿ, ಎಮ್‌.ಕೆ.ಪೂಜೇರಿ, ಎಸ್‌.ಎಸ್‌.ಜಿಡ್ಡಿಮನಿ, ಎಲ್‌.ಬಿ.ಶಿಂಗಳಾಪೂರ, ಡಿ.ಬಿ.ಮುತ್ನಾಳ, ಪಿ.ಎಮ್‌.ಸುಣಧೋಳಿ, ಎಸ್‌.ಬಿ.ನಾಯಿಕ, ಪ್ರೇಮಾ ಚಿಕ್ಕೋಡಿ, ಎಸ್‌.ಎಸ್‌.ಹತ್ತರವಾಟ ಸೇರಿದಂತೆ ಅನೇಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ