ಆ್ಯಪ್ನಗರ

ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಸಂಸದ ಅಂಗಡಿ ಸಾಂತ್ವನ

ಬೆಳಗಾವಿ: ತಾಲೂಕಿನ ನಾಗೇರಹಾಳ, ವಿರಕಿನಕೊಪ್ಪ ಗ್ರಾಮಗಳಲ್ಲಿ ಸಾಲಬಾಧೆ ತಾಳಲಾರದೆ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಸಂಸದ ಸುರೇಶ ಅಂಗಡಿ ಭೇಟಿ ...

Vijaya Karnataka 12 Jun 2018, 5:00 am
ಬೆಳಗಾವಿ: ತಾಲೂಕಿನ ನಾಗೇರಹಾಳ, ವಿರಕಿನಕೊಪ್ಪ ಗ್ರಾಮಗಳಲ್ಲಿ ಸಾಲಬಾಧೆ ತಾಳಲಾರದೆ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಸಂಸದ ಸುರೇಶ ಅಂಗಡಿ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
Vijaya Karnataka Web BLG-1106-2-52-11LBS6A


ಗಂಗಮ್ಮ ಸಿದ್ದಪ್ಪ ಚಿನ್ನನವರ ಹಾಗೂ ಚಿನ್ನಪ್ಪ ಗಂಗಪ್ಪ ಅಮರಾಪುರ ಅವರ ಕುಟುಂಬಗಳಿಗೆ ಸಮಾಧಾನ ಹೇಳಿದ ಸಂಸದ ಅಂಗಡಿ, ''ಸಾಲಕ್ಕೆ ಸಾವು ಒಂದೇ ಪರಿಹಾರ ಅಲ್ಲ. ಧೈರ್ಯವಾಗಿ ಮುನ್ನುಗಿದರೆ ಎಂಥ ಕಷ್ಟವನ್ನಾದರೂ ಜಯಿಸಲು ಸಾಧ್ಯ. ನಿಮ್ಮೊಂದಿಗೆ ಸರಕಾರ ಇದೆ. ಮಕ್ಕಳ ಭವಿಷ್ಯಕ್ಕಾಗಿ ಬದುಕು ಸಾಗಿಸಬೇಕು'', ಎಂದರು.

ಸರಕಾರದಿಂದ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಹೇಳಿದ ಅವರು, ಜನ ಸುರಕ್ಷಾ ಯೋಜನೆಯಡಿಯಲ್ಲಿ 2 ಲಕ್ಷ, ಮಾಸಿಕ ಎರಡು ಸಾವಿರ ರೂ. ಪಿಂಚಣಿ ಹಾಗೂ ವಿವಿಧ ಇಲಾಖೆಗಳಿಂದ ಸಿಗುವ ಸೌಲಭ್ಯಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ತ್ವರಿತವಾಗಿ ಪರಿಹಾರ ನೀಡುವಂತೆ ಸೂಚಿಸಿದರು.

ತಹಸೀಲ್ದಾರ ಜಕ್ಕನಗೌಡರ, ಉಪವಿಭಾಗಾಧಿಕಾರಿ ಕವಿತಾ ಯೋಗಪ್ಪನ್ನವರ, ಸಹಾಯಕ ಕೃಷಿ ನಿರ್ದೇಶಕ ಜಿ.ಬಿ.ಕಲ್ಯಾಣಿ, ಕಂದಾಯ ನಿರೀಕ್ಷಕ ಶ್ರೀಧರ ಹೈಗರ, ಗ್ರಾಮೀಣ ಬಿಜೆಪಿ ಮಂಡಳ ಅಧ್ಯಕ್ಷ ಮೋಹನ ಅಂಗಡಿ, ಬಿಜೆಪಿ ಮುಖಂಡರಾದ ರಾಜೇಶ ದನದಮನಿ, ಶಿವಾನಂದ ಗುಂಡುಗೋಳ, ಬವಾಣಿ ಪಗಾದ, ಮಹಾದೇವಿ ರಾಯಣ್ಣವರ, ನಾಗಯ್ಯಾ ಹವಾಲ್ದಾರ, ಯಲ್ಲೇಶಿ ದೊಡವಾಡಿ, ಆನಂದ ತಳವಾರ, ಕಲ್ಲಪ್ಪ ಸಂಪಗಾಂವಿ, ಅಡಿವೆಪ್ಪ ಗಿರಣಿ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ