ಬೆಳಗಾವಿ: ನಗರದ ಕೆಎಲ್ಇ ಲಿಂಗರಾಜ ಮಹಾವಿದ್ಯಾಲಯದಲ್ಲಿ ಬೆಳಗಾವಿ ಜಿಲ್ಲಾ ಬಾಡಿ ಬಿಲ್ಡಿಂಗ್ ಅಸೋಸಿಯೇಶನ್ ಸಹಯೋಗದಲ್ಲಿ 32ನೇ ಮಿಸ್ಟರ್ ಲಿಂಗರಾಜ ದೇಹದಾಢ್ರ್ಯ ಸ್ಪರ್ಧೆ ಆಯೋಜಿಸಲಾಗಿತ್ತು. ಶಿವನಗೌಡ ಕಲ್ಲೂರ ಮಿ. ಲಿಂಗರಾಜ ಆಗಿ ಆಯ್ಕೆಯಾದರು. ಲಕ್ಷ್ಮಣ ಗೋಹರ ದ್ವಿತೀಯ ಹಾಗೂ ಗೈಬು ದಲಾಲ ತೃತೀಯ ಸ್ಥಾನ ಪಡೆದರು.
ಅಜತ ಸಿದ್ದಣ್ಣವರ, ಎನ್.ವಿ. ಗುರವ, ಗಂಗಾಧರ, ರಾಮಕೃಷ್ಣ, ಅಮಿತ ಜಡೆ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು. ಪ್ರಣಯ ಶೆಟ್ಟಿ, ಪ್ರೊ. ಸಿ. ರಾಮರಾವ ಉಪಸ್ಥಿತರಿದ್ದರು.